December 13, 2025

Hampi times

Kannada News Portal from Vijayanagara

ಬಿಡಿಸಿಸಿ ಬ್ಯಾಂಕ್‌ಗೆ 106ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

https://youtu.be/NHc6OMSu0K4?si=SI_K4goOPEgwo6h2

 

ಮತ್ತಷ್ಟು ಉತ್ತಮ ಸೇವೆ ನೀಡಿ ಬ್ಯಾಂಕ್ ಸದೃಢಗೊಳಿಸಿ
ಬ್ಯಾಂಕಿನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಕರೆ | 33 ಶಾಖೆಗಳಲ್ಲೂ ಸಂಭ್ರಮದ  ಆಚರಣೆ

ಹಂಪಿ ಟೈಮ್ಸ್ ಹೊಸಪೇಟೆ
ಬಳ್ಳಾರಿ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್) ಬ್ಯಾಂಕ್‌ನ 106ನೇ ಸಂಸ್ಥಾಪನಾ ದಿನಾಚರಣೆಯನ್ನು ನಗರದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸಂಭ್ರಮದಿAದ ಆಚರಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಅವರು ಕೇಕ್ ಕತ್ತರಿಸಿ ನೌಕರರಿಗೆ ಸಿಹಿ ಹಂಚಿ ಮಾತನಾಡಿದರು. ಬಿಡಿಸಿಸಿ 106ನೇ ಸಂಸ್ಥಾಪನಾ ದಿನವನ್ನು ಕೇಂದ್ರ ಕಚೇರಿ ಸೇರಿದಂತೆ ಬ್ಯಾಂಕಿನ ಎಲ್ಲ 33 ಶಾಖೆಗಳಲ್ಲಿ ಅದ್ದೂರಿ ಆಚರಣೆಗೆ ಕರೆ ನೀಡಲಾಗಿತ್ತು. ಎಲ್ಲೆಡೆ ಅದ್ದೂರಿ ಆಚರಣೆ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬ್ಯಾಂಕಿನ ಈ ಸುದೀರ್ಘ ಪಯಣವನ್ನು ಸ್ಮರಿಸಿದ ಅವರು, ಬಳ್ಳಾರಿ ಡಿಸಿಸಿ ಬ್ಯಾಂಕನ್ನು ಇಲ್ಲಿಯವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬಂದAತಹ ಎಲ್ಲ ಮಾಜಿ ಅಧ್ಯಕ್ಷ ಮಹೋದಯರ ದೂರದೃಷ್ಟಿ, ಆಡಳಿತ ಮಂಡಳಿಗಳ ಸಹಕಾರ ಮತ್ತು ನೌಕರರ ಪರಿಶ್ರಮ ಸ್ಮರಣೀಯ ಎಂದು ಗುಣಗಾನ ಮಾಡಿದರು. ನಮ್ಮ ಬ್ಯಾಂಕಿನ ಗ್ರಾಹಕರು ಹಾಗೂ ಸದಸ್ಯ ಸಹಕಾರಿ ಸಂಘಗಳಿಗೆ ಮತ್ತಷ್ಟು ಉತ್ತಮ ಸೇವೆ ನೀಡಿ, ಬ್ಯಾಂಕನ್ನು ಮತ್ತಷ್ಟು ಸದೃಢಗೊಳಿಸೋಣ ಎಂದು ನೌಕರರು ಹಾಗೂ ಸಿಬ್ಬಂದಿಗೆ ಕರೆ ನೀಡಿದರು.

 


ಸಂಭ್ರಮಾಚರಣೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಬಿ. ಹಾಗೂ ಕೇಂದ್ರ ಕಚೇರಿಯ ಎಲ್ಲಾ ವಿಭಾಗಗಳ ಉಪ ಪ್ರಧಾನ ವ್ಯವಸ್ಥಾಪಕರು, ನೌಕರರು, ಸ್ಥಳೀಯ ಬ್ಯಾಂಕು ಮತ್ತು ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಡಿಸಿಸಿ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ಹಾಗೂ ಬ್ಯಾಂಕಿನ ಹಿರಿಯ ಅಧಿಕಾರಿಗಳಿಂದ ಮಾನ್ಯ ಅಧ್ಯಕ್ಷರನ್ನು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಸನ್ಮಾನಿಸಲಾಯಿತು.

 

 

 

 

 

 

 

 

ಜಾಹೀರಾತು
error: Content is protected !!