https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ಬಕ್ರೀದ್ ಹಬ್ಬದ ನಿಮಿತ್ತ ನಗರದ ಐಎಸ್ಸಾರ್ ರಸ್ತೆಯ ಈದ್ಗಾ ಮೈದಾನದಲ್ಲಿ ನಗರದ ಮುಸ್ಲಿಂ ಸಮುದಾಯದ ಗಣ್ಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ನಾಡಿನಲ್ಲಿ ಶಾಂತಿ, ಸಮೃದ್ಧಿಗಾಗಿ ಸೋಮವಾರ ಪ್ರಾರ್ಥನೆ ಸಲ್ಲಿಸಿದರು.

ನಂತರ ಸಮುದಾಯದ ಸದಸ್ಯರು ಪರಿವಾರ ಹಾಗೂ ಸ್ನೇಹಿತರೊಂದಿಗೆ ಬೆರೆತು ಪರಸ್ಪರ ಶುಭಕೋರಿದರು. ಬಕ್ರೀದ್ ಹಬ್ಬವು ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾಗಿದೆ. ಈ ಹಬ್ಬವು ಇಸ್ಲಾಂ ಧರ್ಮದ ಪವಿತ್ರ ಘಟನೆಗಳ ಸ್ಮರಣೆಗಾಗಿ ಆಚರಿಸಲ್ಪಡುತ್ತದೆ. ಉಳ್ಳವರು ಅಗತ್ಯತೆಗಳನ್ನು ಆಧರಿಸಿ ದಾನ ಮಾಡುತ್ತಾರೆ. ಸಮುದಾಯದ ಮನೆನಗಳಲ್ಲಿ ಬಕ್ರಿಗಳ ಬಲಿಕೊಡಲಾಗುತ್ತದೆ. ಹೊಸವಸ್ತ್ರ ಧರಿಸಿ, ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸಮುದಾಯದ ಮನೆ ಮನೆಗಳಲ್ಲಿ ಆತಿಥ್ಯ ಅದ್ದೂರಿಯಾಗಿತ್ತು. ಅಂಜುಮನ್ ಕಮಿಟಿ ಪದಾಧಿಕಾರಿಗಳು, ಸದಸ್ಯರು, ಉದ್ಯಮಿಗಳು ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.




More Stories
ನಿಯಮ ಉಲ್ಲಂಘಿಸಿದರೆ ಕಠಿಣ ದಂಡ
ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆಯ ಅವಧಿ ಮೇ 16ರವರೆಗೆ ವಿಸ್ತರಣೆ
ಕನಕಗಿರಿ ಉತ್ಸವದ ಸಿದ್ಧತೆ ವೇಗಗೊಳಿಸಿ : ಜಿಲ್ಲಾಧಿಕಾರಿ ಡಾ.ಸುರೇಶ ಬಿ ಇಟ್ನಾಳ