https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಸಂಡೂರು
ಪಟ್ಟಣದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಅಡಿಯಲ್ಲಿನ ಎಸ್.ವಿ.ನಾನಾವಟೆ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಕೀರ್ತಿ ಪತಾಕೆ ಹಾರಿಸಿದ್ದಾರೆ .

ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎನ್.ಸಂಜನಾ ಒಟ್ಟು 596 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಮೊದಲ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದ ಎಚ್.ಸುದೀಪ್ 593 ಅಂಕ ಗಳಿಸಿ ರಾಜ್ಯಕ್ಕೆ 7ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಡಿ.ಎಂ.ಶ್ರೇಯಾ (588) ಹಾಗೂ ಕೆ.ಅಲ್ಫಿಯಾ (582) ಕ್ರಮವಾಗಿ ಕಾಲೇಜಿಗೆ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ. ಈ ವಿಭಾಗದಲ್ಲಿ ಪರೀಕ್ಷೆ ಎದುರಿಸಿದ್ದ 87 ವಿದ್ಯಾರ್ಥಿಗಳಲ್ಲಿ 85 ಮಂದಿ ಉತ್ತೀರ್ಣರಾಗಿದ್ದು, 30 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್) ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಖಿಲ್‌ಕುಮಾರ್ (582) ಹಾಗೂ ಎಂ.ಕಿರಣ್ (578) ಸಾಧನೆ ಮಾಡಿದ್ದಾರೆ. ಒಟ್ಟು 177 ವಿದ್ಯಾರ್ಥಿಗಳಲ್ಲಿ 175 ಮಂದಿ ಉತ್ತೀರ್ಣರಾಗಿದ್ದು, 83 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಕುಮಾರ ಎಸ್. ನಾನಾವಟೆ ಹಾಗೂ ಕಾರ್ಯದರ್ಶಿ ಚಿದಂಬರ ಎಸ್. ನಾನಾವಟೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನುತಿಳಿಸಿದರು.



More Stories
ಇಸ್ರೋ ಗಗನ್ಯಾನ್ ಪರೀಕ್ಷೆ ಯಶಸ್ವಿ
ಜೈವಿಕ ರಸಾಯನಶಾಸ್ತ್ರ ಮತ್ತು ಹೆಮಟಾಲಜಿಯಲ್ಲಿ ‘ಐಎಸ್ಒ 15189:2022’ ಮಾನ್ಯತೆ ಸಾಧನೆ.
ಹೊಸಪೇಟೆ ನ್ಯಾಷನಲ್ ಕಾಲೇಜ್ನ ಬಿ.ಮಾನಸ ರಾಜ್ಯಕ್ಕೆ 8ನೇ ಶ್ರೇಯಾಂಕ