April 19, 2026

Hampi times

Kannada News Portal from Vijayanagara

ಹಂಪಿ ಒಡೆಯನಿಗಿಂದು ವಿವಾಹದ ಸಂಭ್ರಮ 

https://youtu.be/NHc6OMSu0K4?si=SI_K4goOPEgwo6h2

ಇತಿಹಾಸ ಪ್ರಸಿದ್ಧವಾದ ಹಂಪಿ ಬೇರೆ ಬೇರೆ ಕಾರಣಗಳಿಂದ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇತಿಹಾಸ ತಜ್ಞರಿಗೆ ಅದು ಒಂದು ಸಾಮ್ರಾಜ್ಯವಾದರೆ, ಪುರಾಣಪ್ರಿಯರಿಗೆ ರಾಮಾಯಣ ಕಾಲದ ಪವಿತ್ರ ಸ್ಥಳವಾಗಿದೆ. ದೈವ ಭಕ್ತರಿಗೆ ಹಂಪಿಯು ವಿರೂಪಾಕ್ಷನ ಸಾನಿಧ್ಯದ ಕಾರಣದಿಂದಾಗಿ ಆರಾಧನಾ ಸ್ಥಳವಾಗಿದೆ.

ಉತ್ತರ ಕರ್ನಾಟಕದಲ್ಲಿನ ಜಾತ್ರೆಗಳಲ್ಲಿ ತಲತಲಾಂತರ ಗಳಿಂದ ಸಾಗಿ ಬಂದಿರುವ ಹಂಪೆ ಜಾತ್ರೆ ಬಹು ಪ್ರಮುಖವಾಗಿದೆ. ಜನಪ್ರಿಯತೆಯ ದೃಷ್ಟಿಯಿಂದ ನೋಡುವುದಾದರೆ ಕೊಪ್ಪಳ, ಮೈಲಾರ, ಕೊಟ್ಟೂರು ಜಾತ್ರೆಯನ್ನು ಬಿಟ್ಟರೆ ಅತಿ ಹೆಚ್ಚು ಜನ ಸೇರುವ ಜಾತ್ರೆ ಇದಾಗಿದೆ. ಪ್ರತಿ ವರ್ಷ ದವನದ ಹುಣ್ಣಿಮೆ ಎಂದು ಈ ಜಾತ್ರೆ ನಡೆಯುತ್ತದೆ. ಈ ಜಾತ್ರೆಯನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಅದರಲ್ಲಿ ಮೊದಲನೆಯದು ಮತ್ತು ಬಹಳ ಮುಖ್ಯವಾದದ್ದು ಫಲ ಪೂಜೆ ಎರಡನೆಯದು ಹಂಪಿ ಜಾತ್ರೆ. ಫಲ ಪೂಜೆಯ  ಡಿಸೆಂಬರ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಯುತ್ತದೆ. ಹಂಪಿಯ ಒಡೆಯ ಪಂಪಾಪತಿ ಮತ್ತು ಒಡತಿ ಪಂಪಾಂಬಿಕೆ ಇವರಿಬ್ಬರ ನಿಶ್ಚಿತಾರ್ಥದ ದಿನವನ್ನು ಫಲ ಪೂಜೆಯೆಂದು ಕರೆಯಲಾಗುತ್ತದೆ. ಈ ಆಚರಣೆಗೆ ಮೂಲವಾಗಿರುವುದು ದಕ್ಷಬ್ರಹ್ಮನ ಕಥೆ ಎಂದು ಜಾನಪದರಲ್ಲಿ ನಂಬಿಕೆ ಇದೆ.

ದಕ್ಷನ ಯಜ್ಞ ಕುಂಡದಲ್ಲಿ ಬಿದ್ದು ಸತ್ತ ದಾಕ್ಷಾಯಿಣಿಯು ಪರ್ವತರಾಜನ ಮಗಳಾಗಿ ಹುಟ್ಟುತ್ತಾಳೆ. ಆಕೆ ಪ್ರಾಪ್ತ ವಯಸ್ಕಳಾದಾಗ ಶಿವ ಆಕೆಯನ್ನು ಕೇಳಲು ಹೋಗುತ್ತಾನೆ. ಅದನ್ನೇ ಫಲ ಪೂಜೆ ಎಂದು ಕರೆಯಲಾಗುತ್ತದೆ. ಗಂಡಿನ ಕಡೆಯವರು ಹೆಣ್ಣನ್ನು ಕೇಳಲು ಹೋಗುವಾಗ ಏನೇನು ಆಚರಣೆಗಳನ್ನು ಮಾಡುತ್ತಾರೋ, ಅವೆಲ್ಲವನ್ನು ಫಲ ಪೂಜೆಯಲ್ಲಿ ಮಾಡುವರು ಮೊದಲ ನಿಗದಿಪಡಿಸಿದ ಶುಭ ದಿನದಂದು ಪಂಪಾಪತಿಯನ್ನು ಸ್ನಾನ ಮಾಡಿಸಿ, ಹೊಸ ಬಟ್ಟೆ ಉಡಿಸಿ, ಮೆರವಣಿಗೆಯಲ್ಲಿ ಹೊಳೆಯ ದಂಡೆಯಲ್ಲಿರುವ ಕೋದಂಡರಾಮ ದೇವಸ್ಥಾನದ ಅಂಗಳಕ್ಕೆ ಕರೆದೊಯ್ಯುತ್ತಾರೆ. ಈ ಸಂದರ್ಭದಲ್ಲಿ ಪಂಪಾಪತಿಯ ಪರವಾಗಿ ಕೆಲವು ಜನ ಪಂಪಾಂಬಿಕೆಯ ಪರವಾಗಿ ಕೆಲವು ಜನ ಬ್ರಾಹ್ಮಣ  ಪೂಜಾರಿಗಳೇ ಇರುತ್ತಾರೆ. ದೇವಸ್ಥಾನದ ಅಂಗಳದಲ್ಲಿ ಎರಡು ಕಡೆಯವರು ಪರಸ್ಪರ ಭೇಟಿ ಮಾಡಿ ವೀಳ್ಯ ಕೊಟ್ಟು ಪಂಪಾಂಬಿಕೆ ಪಂಪಾಪತಿಯವರ ನಡುವೆ ಮದುವೆ ನಿಶ್ಚಿತಾರ್ಥ ನಡೆಸುತ್ತಾರೆ. ಅದೇ ದಿನದಂದು ಮದುವೆ ನಿರ್ಧಾರ ಮಾಡುತ್ತಾರೆ. ಆ ದಿನವನ್ನು ನಲ್ಲಿ ನೆರೆದಿರುವ ಜನರಿಗೆ ತಿಳಿಸಿ ಕೊನೆಗೆ ಎಲ್ಲರೂ ವಿರೂಪಾಕ್ಷನ ಗುಡಿಗೆ ಹಿಂದಿರುಗಿ ಬರುತ್ತಾರೆ.

 

ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ಈ ಹುಣ್ಣಿಮೆ ಬರುತ್ತದೆ. ಸುತ್ತಮುತ್ತಲಿನ ಸ್ಥಳಗಳಿಂದ ಅನೇಕ ಜನ ವಾರಕ್ಕೆ ಬೇಕಾಗುವಷ್ಟು ರೊಟ್ಟಿ ಬುತ್ತಿಯೊಡನೆ ಬಂದಿರುತ್ತಾರೆ. ಪಂಪಾಪತಿ ಪಂಪಾಂಬಿಕೆಯರ ಲಗ್ನದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಈ ಸಮಯದಲ್ಲಿ ಮಾಂಸ ಆಹಾರ ನಿಷೇಧವಿದ್ದು ಸಿಹಿ ತಿನಿಸುಗಳನ್ನು ಮಾಡಿರುತ್ತಾರೆ.

ರಥೋತ್ಸವದ ದಿನದಂದು ಮನುಷ್ಯರ ಮದುವೆಯ ಆಚರಣೆಯಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಲಾಗುತ್ತದೆ. ನಾಲ್ಕು ಗಂಟೆ ಸುಮಾರಿಗೆ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ರಥೋತ್ಸವ ನಡೆಸಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ಅನೇಕ ಕಲಾತಂಡಗಳು ಇಲ್ಲಿ ಬಂದಿರುತ್ತವೆ. ದೇವಾಲಯದ ಒಳಾಂಗಣದಲ್ಲಿ ಹಾಗೂ ಹೊರಗೆ ಮಂಟಪಗಳಲ್ಲಿ ಇಡೀ ರಾತ್ರಿ ಹಾಡು ಕುಣಿತಗಳಿಂದ ತುಂಬಿರುತ್ತದೆ. ಜನರಿಗೆ ಸಾಕಷ್ಟು ಮನೋರಂಜನೆ ಸಿಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ಮೊದಲು ತೇರನ್ನು ಎಳೆಯುವ ಜವಾಬ್ದಾರಿ ಹೊಸಪೇಟೆ ಹಾಗೂ ಕಮಲಾಪುರದ ಬೇಡ ಜನರದ್ದು. ಬೇಡರು ಬಂದು ತೇರು ಎಳೆದ ಹೊರತು ಅದನ್ನು ಯಾರು ಮುಟ್ಟಿ ಎಳೆಯುವಂತಿಲ್ಲ. ಈ ಬೇಡರ ಮೆರವಣಿಗೆಯ ಮೂಲಕ ಹಂಪಿಗೆ ಬಂದು ದೇವರಿಗೆ ಪೂಜೆ ಸಲ್ಲಿಸಿ ತೇರು ಎಳೆಯುತ್ತಾರೆ. ಇಲ್ಲಿ ಎರಡು ತೇರುಗಳಿರುತ್ತವೆ ಮೊದಲನೆಯದು ಚಂದ್ರಮೌಳೇಶ್ವರನ ತೇರು, ಎರಡನೆಯದು ವಿರೂಪಾಕ್ಷನ ತೇರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುವ ತೇರು ಪ್ರಸಿದ್ಧವಾಗಿದೆ. ಈ ಬಾರಿ ಇದು ಏಪ್ರಿಲ್ 2 ಗುರುವಾರದೊಂದು ನಡೆಯುತ್ತದೆ.

 

  • ಕೊಟ್ಟೂರೇಶ್ವರಿ ಬಸಾಪುರ.

ಶಿಕ್ಷಕಿ, ಹಗರಿಬೊಮ್ಮನಹಳ್ಳಿ.

Please follow and like us:

 

 

 

 

 

Translate »
[t4b-ticker]
error: Content is protected !!