https://youtu.be/NHc6OMSu0K4?si=SI_K4goOPEgwo6h2

ವಿಶ್ವ ತಾಯಂದಿರ ದಿನಾಚರಣೆ ನಿಮಿತ್ತ…
ಅಮ್ಮಾ….
ಅವಳು ಅವಳನ್ನೇ ಮರೆತು
ಮಗುವನ್ನು ಮೆರೆಸುವವಳು
ಅರ್ಥಪೂರ್ಣ ಮಾಂತ್ರಿಕಳು

ಅಮ್ಮಾ, ಮಾ, ಮಾತೃ, ತಾಯಿ ತಾಳ್ಮೆಯೇ ಮೈವೆತ್ತವಳು ತಾಯಿ.
ದೇವರೇ ಧನ್ಯವಾದಗಳು ನಮ್ಮನ್ನು ಮಾತ್ರ ನಿನ್ನ ಅನುವಾದಕರಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಎನ್ನುವ ಕವಿಯ ಕೃತಜ್ಞತೆಗೆ ಅರ್ಥವಿದೆ. ಒಡಲುರಿಯ ಕತ್ತರಿಸಿ ಬೊಗಸೆಯಲ್ಲಿಟ್ಟು ಸಾದಾ ಕಣ್ಗಾವಲಿರಿಸಿ, ಕಾಯುವಜೀವ. ಗರ್ಭದಲಿ ಮೂಡಿದಕ್ಷಣವೇ ಶುರುವಾಗುವುದು ಅಮ್ಮನ ಮಮಕಾರದ ತುಡಿತ. ಒಂದಿನಿತುಕದಲದಚಿತ್ತ. ಮೂಡಿದ ಮಾಂಸ ಮುದ್ದೆಯೊಂದಿಗಿನ ಸಂವಾದ ಸದಾ. ಹೃದಯದಜೋಡಿ ಮಿಡಿತ ನವಮಾಸವೂ. ಪ್ರಸವದಲಿ ಅವಳು ಮರು ಹುಟ್ಟುವಳು ಮಗುವೊಂದಿಗೆ. ಇಲ್ಲಿಂದ ಎಲ್ಲ ಮಗುವಿಗೆ. ಪ್ರಸವದ ನೋವ ನುಂಗಿದವಳು ಈಗ ಹಸಿವ ನುಂಗುವಳು. ಜಗದ ನೋವೆನಗಿರಲೆಂದು ಅದರ ನಲಿವೆಲ್ಲ ಮಗುವಿಗಿಟ್ಟುತಣ್ಣನೆ ನಗುವಳು – ಮಗುವ ಚಲನೆ ಕಂಡು. ಮಗು ಅತ್ತರೆ ತಾನು ಅತ್ತು, ನಕ್ಕರೆ ಸುಖಿಸಿ ನೋವ ಮರೆವಳು. ಬೆಳೆದ ಮಗು ಸಮಾಜ ಮುಖಿಯಾದರೆ ಕಿರೀಟ ಅಪ್ಪನಿಗೆ, ಇಲ್ಲದಿರೆ ನಿಂದೆಗೆ ಸದಾ ಸಖಿ. ಅನವರತವತನ್ನವರ ಒಳಿತಿಗೆ ಮಿಡಿವ ಅಮ್ಮನ ಒಳಿತು ಕೇಳುವ ಕಿವಿಗಳಿಗೆ ಬರ. ಅದ್ಯಾವುದ ಲೆಕ್ಕಿಸದ ಅವಳು ಸದಾ ಹಸನ್ಮುಖಿ. ಜಗದ ಜನನಿ ತಾಯಿ. ನಿತ್ಯದ ಬದುಕು ಅವಳ ಛಾಯೆ, ಇಲ್ಲದಿಹ ಬದುಕಿಗೆಲ್ಲಿ ಠಾವು. ಅವಳು ಸದಾ ವಂದಿತಳು ಜಗದಿ ಪೂಜಿತಳು
– ಭಾರತಿ ಮೂಲಿಮನಿ
ಲೆಖಕಿ, ಸಂಶೋಧಕಿ, ಹೊಸಪೇಟೆ



More Stories
ಪೊಲೀಸ್ ಕಲ್ಯಾಣಕ್ಕೆ ₹12.61 ಲಕ್ಷ ನೆರವು : ಎಸ್ಪಿ ಎಸ್ ಜಾಹ್ನವಿ
ಹಂಪಿ ಒಡೆಯನಿಗಿಂದು ವಿವಾಹದ ಸಂಭ್ರಮ
ಬಸವಾಮೃತ-೨ ವಚನ ವೈಭವ – ಅರಿವಿನ ಬೆಳಕು : ಬಿಎಂಆರ್