April 29, 2026

Hampi times

Kannada News Portal from Vijayanagara

ಆಕರ್ಷಣೆಗೆ ಒಳಾಗಾಗದೆ ಉದ್ದೇಶಿತ ಗುರಿ ತಲುಪಿ : ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:

ಪ್ರಶಿಕ್ಷಣಾರ್ಥಿಗಳು ಬಾಹ್ಯ ಸೌಂದರ್ಯ ಹಾಗೂ ಯಾವುದೇ ಆಕರ್ಷಣೆಗಳಿಗೆ ಒಳಗಾಗದೇ ಹಾಗೂ ವಿಚಲಿತರಾಗದೇ ಉದ್ದೇಶಿತ ಕಲಿಕೆಯನ್ನು ಪರಿಪೂರ್ಣಗೊಳಿಸಿಕೊಂಡಾಗ ಭವಿಷ್ಯದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಸಾಧ್ಯ ಎಂದು ಶ್ರೀಕೊಟ್ಟೂರುಸ್ವಾಮಿ ಮಠದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಜಿ ಆಶೀರ್ವಚನ ನೀಡಿದರು.

ನಗರದ ವೀರಶೈವ ವಿದ್ಯಾವರ್ಧಕ ಸಂಘದ ಷಾ ಭವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಸ್ವಾಗತ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು. ರಾಜನೊಬ್ಬ ತನ್ನ ರಾಜ್ಯ ಸುಭೀಕ್ಷೆಯಾಗಿರಬೇಕೆಂದು ಯಾಗ ಮಾಡಲು ಪೂಜೆಗೆ ಸಿದ್ಧಗೊಳಿಸಿದ್ದ. ಪೂಜೆಗೆ ಅವಶ್ಯವಿದ್ದ ಫಲಕ್ಕಾಗಿ ಕಾಡಿಗೆ ಹೋಗಬೇಕಾದ ಸಂದರ್ಭ ಎದುರಾಯಿತು. ಫಲ ತರಲು ರಾಜ ತನ್ನ ಮಗನನ್ನು ಕಾಡಿಗೆ ಕಳಿಸಿದ. ಕಾಡಿನ ನಡುವೆ ಇದ್ದ ಪ್ರಕೃತಿ ಸೌಂದರ್ಯ ಋಷಿ ಆಶ್ರಮ, ಋಷಿ ಪತ್ನಿ, ಮತ್ತು ಋಷಿ ಪುತ್ರಿಯರನ್ನ ಕಂಡ ರಾಜಕುಮಾರ ಅಲ್ಲಿನ ಬಾಹ್ಯ ಸೌಂದರ್ಯಕ್ಕೆ ಮನಸೋತು ಋಷಿ ಪುತ್ರಿಯರನ್ನ ತನ್ನದಾಗಿಸಿಕೊಳ್ಳಬೇಕೆಂದು ಹಠಕ್ಕೆ ಬಿದ್ದು ತನ್ನ ಮೂಲ ಉದ್ದೇಶವನ್ನೆ ಮರೆತನು. ರಾಜ್ಯವನ್ನೇ ಆಳಬೇಕಾಗಿದ್ದ ರಾಜಕುಮಾರ ತನ್ನ ಜವಾಬ್ದಾರಿಯನ್ನೆ ಮರೆತು ಅಲ್ಪತೃಪ್ತಿಗಿಳಿದ ಎಂದು ಸಣ್ಣ ಕಥೆಯ ಮೂಲಕ ವಿದ್ಯಾರ್ಥಿಗಳು ವಿಚಲಿತರಾಗಬಾರದೆಂದು ಜಾಗೃತಿಗೊಳಿಸಿದರು.

 

ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವ ಮೂಲಕ ಕಾಲೇಜ್‌ನ ಕೀರ್ತಿ ಹೆಚ್ಚಿಸುವುದರ ಜೊತೆಗೆ ತಮ್ಮ ಭವಿಷ್ಯದ ಬದುಕನ್ನು ಉಜ್ವಲಗೊಳಿಸಿಕೊಳ್ಳಲು ಶಿಕ್ಷಣ ಸಹಕಾರಿಯಾಗಲಿದೆ. ಅಕ್ಷರ ಬೀಜ ಬಿತ್ತುವ ಶಿಕ್ಷಕರ ವೃತ್ತಿ ಪವಿತ್ರ ವೃತ್ತಿಯಾಗಿದೆ. ಮಕ್ಕಳಿಗೆ ಕಲಿಸುವಾಗ ಸಂಸ್ಕಾರಕ್ಕೆ ಆದ್ಯತೆ ನೀಡಬೇಕು. ರಾಷ್ಟçಪ್ರೇಮ, ಗುರು ಹಿರಿಯರನ್ನು, ತಂದೆ ತಾಯಿಗಳನ್ನು ಗೌರವಿಸುವುದನ್ನು ಕಲಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿರುವದನ್ನು ಮರೆಯಬಾರದು. ವಿದ್ಯಾರ್ಥಿಗಳ ಯಶಸ್ಸಿಗೆ ಯೋಗ ಮತ್ತು ಧ್ಯಾನ ಅವಶ್ಯಕ ಎಂದು ತಿಳಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಅಧ್ಯಕ್ಷತೆವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿ ಕೆ.ರವಿಶಂಕರ, ಆಡಳಿತ ಮಂಡಳಿ ಸದಸ್ಯ ಗಂಗಾಧರ, ರವೀಂದ್ರನಾಥ, ಮಾತನಾಡಿದರು. ಪ್ರಾಂಶುಪಾಲ ಡಾ. ವಿಶ್ವನಾಥಗೌಡ ಪ್ರಾಸ್ತಾವಿಕ ಮಾತನಾಡಿದರು. ಮಹಾವಿದ್ಯಾಲಯದಿಂದ 5ನೇ ರ‍್ಯಾಂಕ್ ಪಡೆದ ಕು. ಖ.ಎಂ.ಚೈತ್ರಗೆ ಸನ್ಮಾನಿಸಲಾಯಿತು. ಐಕ್ಯೂಎಸಿ ಸಂಯೋಜಕ ಡಾ.ಜಗದೀಶ, ಡಾ. ಶೋಭಾ ಪಾಟೀಲ್, ಡಾ.ಸತೀಶ್ ಸೂರಿಮಠ, ಸಂತೋಷ, ಕು.ನಂದಿನಿ ನಿರ್ವಹಿಸಿದರು.

Please follow and like us:

 

 

 

 

 

Translate »
[t4b-ticker]
error: Content is protected !!