https://youtu.be/NHc6OMSu0K4?si=SI_K4goOPEgwo6h2

ನೀವು ಮತ್ತು ಆಕೆ
೧ : ನೀವು ಗಡಿಯೆಂದಿರಾಕೆಗೆ ಒಳಗೂ ಹೊರಗೂ ಸೂಸುವ ಗಾಳಿಯಾದಳು
೨ : ನೀವು ದಡಿಯೆಂದಿರಾಕೆಗೆ ಅಂಚರೆದು ಕುಂಚಲು ಕಟ್ಟಿ ಗೊಂಡೇವಾಗಿ ಅರಳಿದಳು
೩ : ನೀವು ಭಾಷೆಯಂದಿರಾಕೆಗೆ ತುಟಿ ಹೊಲೆದು ಭಾವತುಂಬಿ ಮೂಕಿ ಚಿತ್ರವಾದಳು
೪ : ನೀವು ನೀರೆಂದಿರಾಕೆಗೆ ಒಂದೂರ ಪೊರೆದು ಕೆರೆಯಾಗದೆ ಹತ್ತೂರ ಹರಿದು ನದಿಯಾದಳು

೫ : ನೀವು ಗೋಡೆ ಕಟ್ಟಿದಿರಿ ಆಕೆಗೆ ಸೀಳಿ ಟಿಸಿಲೊಡೆದು ಹೊರಹೊಮ್ಮಿ ಹಾಡಾದಳು
೬ : ನೀವು ಈಗ ರಥದಲ್ಲಿ ಕೂಡಿಸೀರಿ ಅದರ ಮೈಯ್ಯೆಲ್ಲ ಮುಖವಾಡಗಳ ಚಿತ್ರ ಬಿಡಿಸಿ
ಮುಂದೆ…..
೭ : ಗೆರೆಗಳು ಮಾಸಿಹೋಗುತ್ತವೆ ಆಕೆ ಮತ್ತದೇ ಹಳದಿ ಬೋರ್ಡು ಹೊತ್ತ ಕೆಂಪು ಬಸ್ಸು ಗಡಿ,ದಡಿ, ಬೆಟ್ಟ, ನದಿ ಹಾದು ಬದುಕಾಗುತ್ತಾಳೆ
~ ವಿಶಾಲ್ ಮ್ಯಾಸರ್
(ವಿಶಾಲ್ ಮ್ಯಾಸರ್ ಮೂಲತಃ ಹೊಸಪೇಟೆಯವರು, ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ. “ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ )



More Stories
ಎಂ.ಪಿ. ಪ್ರಕಾಶ ಅಧಿಕಾರಕ್ಕಿಂತ ಮೌಲ್ಯಗಳಿಗೆ ಬೆಲೆ ನೀಡಿದ ಮಹಾನ್ ನಾಯಕ: ಮಾಜಿ ಸಿಎಂ ಸಿದ್ದರಾಮಯ್ಯ
ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ
ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್