October 13, 2026

Hampi times

Kannada News Portal from Vijayanagara

ಡಿ.8ರಿಂದ ಮೂರು ದಿನ ಹಂಪಿಯಲ್ಲಿ ಫಲಪೂಜಾ

HAMPI TIMES
ಹೊಸಪೇಟೆ: ಹಂಪಿಯಲ್ಲಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವ ಡಿ.8 ರಿಂದ 10 ವರೆಗೆ ಜರುಗಲಿದೆ.


ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಸಂಸ್ಥಾನದ ಪೀಠಾಧಿಪತಿಗಳಾದ ಮತ್ತು ಶ್ರೀ ಹಂಪಿ ದೇವಸ್ಥಾನಗಳ ಗುರು ಪರಂಪರಾ(ವAಶ ಪಾರಂಪರ್ಯ) ಧರ್ಮಕರ್ತೃಗಳಾದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳವರ ಆಶೀರ್ವಾದನುಸಾರವಾಗಿ ಡಿ.8 ಹುಣ್ಣಿಮೆಯಂದು ಗುರುವಾರ ರಾತ್ರಿ ಮನ್ಮುಖ ತೀರ್ಥದಲ್ಲಿ ಶ್ರೀ ವಿರೂಪಾಕ್ಷೇಶ್ವರಸ್ವಾಮಿ ತೆಪ್ಪೋತ್ಸವ ಜರುಗಲಿದೆ.

ಡಿ.10, ಶನಿವಾರ ರಾತ್ರಿ 9 ಗಂಟೆಗೆ ಶ್ರೀ ಚಕ್ರತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಫಲಪೂಜಾ ಅದ್ದೂರಿ ಮಹೋತ್ಸವ ಜರುಗಲಿದೆ. ಫಲಪೂಜದಂಗವಾಗಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಜಯನಗರ ಅರಸ ಶ್ರೀಕೃಷ್ಣದೇವರಾಯರು ಸಪರ್ಮಿಸಿದ ನವರತ್ನ ಖಚಿತ ಸುವರ್ಣಮುಖ ಕಮಲದೊಂದಿಗೆ ಅಲಂಕರಿಸಲಾಗುವುದು. ಫಲಪೂಜಾ ಮಹೋತ್ಸವದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತ ಯಂ.ಹೆಚ್.ಪ್ರಕಾಶರಾವ್ ತಿಳಿಸಿದ್ದಾರೆ.

Please follow and like us:

 

 

Translate »
[t4b-ticker]