https://youtu.be/NHc6OMSu0K4?si=SI_K4goOPEgwo6h2

ಮಂಡ್ಯ: ಭಾರತವು ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಹೊಂದುತ್ತಿರುವ ಚೈತನ್ಯಶೀಲ ನಾಗರಿಕ ತೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಆದಿಚುಂಚನಗಿರಿ ಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉ ದ್ಘಾಟಿಸಿ ಬುಧವಾರ ಮಾತನಾಡಿದರು. ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನಮಠದAತಹ ಸಂಸ್ಥೆ ಗಳು ಈ ಪ್ರದೇಶದ ನೈತಿಕ ಮತ್ತು ಆಧ್ಯಾತ್ಮಿಕ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸುತ್ತವೆ ಕರ್ನಾಟವು ತತ್ವಶಾಸ್ತ್ರದ ಆಳವು ಆಧುನಿಕ ತಂತ್ರಜ್ಞಾನದ ಶಕ್ತಿಯನ್ನು ಸಂಪೂರ್ಣವಾಗಿ ಸಂಧಿಸುವ ಭೂಮಿ ಯಾಗಿದೆ.
ಭಾರತ ರೋಚಕ ಮತ್ತು ಸಹಸ್ರಾರು ವರ್ಷಗಳಷ್ಟು ಹಳೆಯದಾದ ನಾಗರಿಕತೆಯ ಪ್ರತಿಬಿಂಬ. ಶ್ರೀ ಆದಿಚುಂಚನಗಿರಿ ಮಠದ ೨೦೦೦ ವರ್ಷಗಳ ಇತಿಹಾಸ ಇದ್ದು, ಅಪರೂಪದ ಮತ್ತು ಅವಿರತ ಸಂಪ್ರದಾಯಗಳ ನಿರಂತರತೆ ಯನ್ನು ಸಾಕಾರಗೊಳಿಸುತ್ತಾದೆ. ಡಾ. ಬಾಲ ಗಂಗಾಧರನಾಥ ಮಹಾಸ್ವಾಮೀಜಿಯ ವರಂತ ಹ ಹಿಂದಿನ ಮಹನೀಯರ ಆಳವಾದ ಆಧ್ಯಾತ್ಮಿಕ ಮಾರ್ಗದರ್ಶನ ಶ್ಲಾಘನೀಯ.

ಈ ಪರಂಪರೆ ಯನ್ನು ಹೊಸ ಚೈತನ್ಯದೊಂದಿಗೆ ಮುನ್ನಡೆ ಸುತ್ತಿರುವ ಪ್ರಸ್ತುತ ನಾಯಕತ್ವ ಪ್ರಶಂಸನಿಯ ಈ ಪವಿತ್ರ ಸಂಸ್ಥೆಯು ತಲೆಮಾರುಗಳಿಂದ ತನ್ನ ಸೇವೆಯ ಸಂಪ್ರದಾಯದ ಮೂಲಕ ನಮ್ಮ ಭೂಮಿಯನ್ನು ಶ್ರೀಮಂತಗೊಳಿಸಿದೆ. ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಆಧ್ಯಾತ್ಮಿಕ ಶಕ್ತಿಯು ಸಾಮಾನ್ಯ ಮನುಷ್ಯ ಮತ್ತು ಗ್ರಾಮೀಣ ಯುವಕರ ಹೋರಾಟಗಳನ್ನು ಪರಿಹರಿಸುವುದರೊಂದಿಗೆ ಆಳವಾಗಿ ಬೆಸೆದು ಕೊಂಡಿತ್ತು.
ಆ ದೈವಿಕ ವ್ಯಕ್ತಿತ್ವವು ಭಕ್ತಿಯನ್ನು ಪಲಾಯನವಾದ ಎಂದು ಪರಿಗಣಿಸದೆ, ಜನ ಸಾಮಾನ್ಯರ ಉನ್ನತಿಗಾಗಿ ಶ್ರಮಿಸುವ ಸಕ್ರಿಯ ಜವಾಬ್ದಾರಿ. ಸಮಾಜದ ಕಲ್ಯಾಣಕ್ಕಾಗಿ ಜವಾ ಬ್ದಾರಿಯನ್ನು ಹೊರಲು ಮುಂದೆ ಬರುವುದೇ ನಿಜವಾದ ಭಕ್ತಿ. ಹಿಂದುಳಿದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೃತ್ತಿಪರ ಪದವಿಗಳವರೆಗೆ ಎಲ್ಲವನ್ನೂ ನೀಡುವ ಹಲವಾರು ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮಾಡಲಾಗಿದೆ.
ಆರೋಗ್ಯ ರಕ್ಷಣೆಯ ಬಗ್ಗೆ ಮಠದ ದೂರದೃಷ್ಟಿಯ ಧೋರಣೆಯು ಗುಣಮಟ್ಟದ ವೈದ್ಯಕೀಯ ಸೇವೆಗಳು ತಾರತಮ್ಯವಿಲ್ಲದೆ ಎಲ್ಲರಿಗೂ ತಲುಪುವಂತೆ ಖಚಿತಪಡಿಸಿದೆ ಎಂದರು. ಗುಣಮಟ್ಟದ ಆರೋಗ್ಯ ಸೇವೆಯು ಪ್ರತಿಯೊಬ್ಬ ನಾಗರಿಕನಿಗೆ ಲಭ್ಯವಿರುವ ಹಕ್ಕಾಗಬೇಕೇ ಹೊರತು, ಆಯ್ದ ಕೆಲವರಿಗಷ್ಟೇ ಸೀಮಿತವಾದ ಸೌಲಭ್ಯವಾಗಬಾರದು.
ಕೋಟ್ಯಂತರ ಬಡ ನಾಗರಿಕರಿಗೆ ಉಚಿತ ಆಸ್ಪತ್ರೆ ಚಿಕಿತ್ಸೆ ನೀಡುವಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಯಶಸ್ಸನ್ನು ಎತ್ತಿ ತೋರಿಸಿದರು. ೭೦ ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರನ್ನು ಒಳಗೊಳ್ಳುವಂತೆ ಈ ಯೋಜನೆಯನ್ನು ಇತ್ತೀಚೆಗೆ ವಿಸ್ತರಿಸಲಾಗಿದೆ. ನಮ್ಮ ಹಿರಿಯರು ಅತ್ಯಗತ್ಯ ಆರೋಗ್ಯ ಸೌಲಭ್ಯಗಳನ್ನು ಗೌರವಯುತವಾಗಿ ಪಡೆಯು ಇದನ್ನು ಖಚಿತಪಡಿಸುತ್ತಿದ್ದೇವೆ. ನವಿಲು ರಾಷ್ಟ್ರೀಯ ಹೆಮ್ಮೆ ಮಾತ್ರವಲ್ಲ, ಸುಂದರ ಮತ್ತು ಶಾಂತಿಯುತ ಜೀವಿಯಾಗಿದೆ. ವಿಕಸಿತ ಭಾರತದ ದೃಷ್ಟಿಕೋನ ದತ್ತ ವೇಗವಾಗಿ ಮುನ್ನಡೆಯುತ್ತೇವೆ ಎಂದರು.



More Stories
ಎಂ.ಪಿ. ಪ್ರಕಾಶ ಅಧಿಕಾರಕ್ಕಿಂತ ಮೌಲ್ಯಗಳಿಗೆ ಬೆಲೆ ನೀಡಿದ ಮಹಾನ್ ನಾಯಕ: ಮಾಜಿ ಸಿಎಂ ಸಿದ್ದರಾಮಯ್ಯ
ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ
ಜಿಲ್ಲಾವಾರು ಉಸ್ತುವಾರಿ ಸಚಿವರ ನೇಮಕ, ಯಾರು ಯಾವ ಜಿಲ್ಲೆಗೆ ಗೊತ್ತಾ?