March 4, 2026

Hampi times

Kannada News Portal from Vijayanagara

ಮಾ. 6ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

https://youtu.be/NHc6OMSu0K4?si=SI_K4goOPEgwo6h2

ಕೊಪ್ಪಳ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವನ್ನು ಮಾರ್ಚ್ 6 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಈ ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಮೆಡ್‌ಫ್ಲಸ್ ಬೆಂಗಳೂರು ಸಂಸ್ಥೆಯು ತಮ್ಮಲ್ಲಿನ ಖಾಲಿ ಇರುವ ಹುದ್ದೆಗಳಾದ ಫಾರ್ಮ್ಸಿಸ್ಟ್ (ರಜಿಸ್ರ‍್ಡ್ ಫಾರ್ಮ್ಸಿಸ್ಟ್ ಕೆಎಸ್‌ಪಿಸಿ ಇಂದ), ಫಾರ್ಮ್ಸಿಯೇಡ (ಕನಿಷ್ಟ 2 ವರ್ಷ ಮೆಡಿಕಲ್ ಶಾಫ್‌ನಲ್ಲಿ ಅನುಭವ), ಕಸ್ಟಮರ್ ಸರ್ವೀಸ್ ಅಸೋಶಿಯೇಟ್‌ಗಳಿಗೆ ನೇರ ಸಂದರ್ಶನ ನಡೆಸಲಿದ್ದಾರೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಡಿ-ಫಾರ್ಮ್, ಬಿ-ಫಾರ್ಮ್ ಇತರೆ ಪದವಿ (ಬಿಇ ಪದವಿ ಹೊರತು ಪಡಿಸಿ) ಅಭ್ಯರ್ಥಿಗಳು ನೇರ ಈ ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಪುರಷರು ಹಾಗೂ ಮಹಿಳೆಯರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು 2 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಜುಮ್) ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್‌ವ್ಯೂವನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.
ಉದ್ಯೋಕಾಂಕ್ಷಿಗಳು https://forms.gle/rSKrLmuqyH8RFgo29 ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸುವಂತೆ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:

 

 

 

 

 

Translate »
[t4b-ticker]
error: Content is protected !!