https://youtu.be/NHc6OMSu0K4?si=SI_K4goOPEgwo6h2

ಸಂಡೂರು ರೆಸಿಡೆನ್ಷಿಯಲ್ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಸಡಗರ | ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ
ಹಂಪಿ ಟೈಮ್ಸ್ ಸಂಡೂರು
ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅನೇಕ ಸಂಸ್ಕೃತಿಗಳ ವೈವಿಧ್ಯತೆಯಿಂದ ಕೂಡಿದ ಸಂಭ್ರಮದ ದೇಶವಾಗಿದೆ ಎಂದು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನರ‍್ದೇಶಕ ಬಹರ್ಜಿ ಘೋರ್ಪಡೆ ಅಭಿಪ್ರಾಯಪಟ್ಟರು.
ಇಲ್ಲಿನ ಸಂಡೂರು ರೆಸಿಡೆನ್ಷಿಯಲ್ ಶಾಲೆಯ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. “ಭಾರತಕ್ಕೆ ಸ್ವಾತಂತ್ರ‍್ಯವು ಸುಲಭವಾಗಿ ಲಭಿಸಿಲ್ಲ; ಸಾವಿರಾರು ದೇಶಭಕ್ತರ ಮತ್ತು ಹೋರಾಟಗಾರರ ನಿರಂತರ ಬಲಿದಾನದ ಫಲವಾಗಿ ಇಂದು ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ರಾಷ್ಟ್ರ ನಿರ್ಮಾಣಕ್ಕೆ ಮಹನೀಯರು ನೀಡಿದ ಕೊಡುಗೆ ಅನನ್ಯವಾದುದು. ಅವರ ತ್ಯಾಗವನ್ನು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಕೃತಜ್ಞತೆ ಎಂದರು. ಇದೇ ವೇಳೆ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನದ ಮಹತ್ವವನ್ನು ಸ್ಮರಿಸಿದ ಅವರು, ಮಕ್ಕಳ ಶಿಸ್ತುಬದ್ಧ ಪರೇಡ್ ಅನ್ನು ಶ್ಲಾಘಿಸಿದರು.


ಇದಕ್ಕೂ ಮುನ್ನ ಸಂಡೂರು ಕುಶಲ ಕಲಾ ಕೇಂದ್ರದ ಅಧ್ಯಕ್ಷರು ಹಾಗೂ ರಾಜವಂಶಸ್ಥರಾದ ಸೂರ್ಯಪ್ರಭ ಅಜಯ್ ರಾಜೇ ಘೋರ್ಪಡೆ ಅವರು ಧ್ವಜ ಅನಾವರಣ ನೆರವೇರಿಸಿ ಶುಭ ಕೋರಿದರು. ಶಾಲಾ ವಿದ್ಯರ್ಥಿಗಳಾದ ರ‍್ಷಿತಾ, ಮಹಮ್ಮದ್ ರಫೀ ಹಾಗೂ ಕೆ. ಉಮ್ಮುಲ್ ಹುಡಾ ಗಣರಾಜ್ಯೋತ್ಸವದ ಕುರಿತು ಭಾಷಣ ಮಾಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಆಶಿಯಾಬಾನು, ಪ್ರಾಂಶುಪಾಲ ಮುರುಳಿಕೃಷ್ಣ, ಉಪ ಪ್ರಾಂಶುಪಾಲರಾದ ಗೀತಂಜಲಿ, ಆಡಳಿತಾಧಿಕಾರಿ ಸಂಜೀವ್ ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮುಸಾವರ್ ಬಿ. ಎಚ್. ಮತ್ತು ಶಹನಾ ಕಾರ್ಯಕ್ರಮ ನಿರೂಪಿಸಿದರು. ಜಿಯಾ ಸ್ವಾಗತಿಸಿದರೆ, ಫಾಲಕ್‌ನಾಜ್ ವಂದಿಸಿದರು.





More Stories
ಕಾಂಗ್ರೆಸ್ ಅಪಪ್ರಚಾರಕ್ಕೆ ಬಣವಿಕಲ್ ಕೆ. ನಾಗರಾಜ್ ಆಕ್ರೋಶ
ಹೊಸಗಾಲದ ವಿಸ್ಮಯ, ಸಮನ್ವಯಕವಿ: ಜಿ.ಎಸ್.ಶಿವರುದ್ರಪ್ಪ
ಒನಕೆ ಓಬವ್ವ.. ಅಸಾಮಾನ್ಯ ಸಾಹಸಿ ಮಹಿಳೆ