https://youtu.be/NHc6OMSu0K4?si=SI_K4goOPEgwo6h2

ಮರಿಯಮ್ಮನಹಳ್ಳಿ:
ನಮ್ಮ ಮಕ್ಕಳಿಗೆ ಉನ್ನತಶಿಕ್ಷಣ ಕೊಡುವ ಧಾವಂತ ಎಲ್ಲರಿಗೂ ಆದರೆ ಕೃಷಿ ಮಾಡುವ ಬಯಕೆ ಇಲ್ಲದಾಗಿರುವುದು ಖೇದದ ಸಂಗತಿ ಎಂದು ನಿವೃತ್ತ ಶಿಕ್ಷಕ ಬಿ.ಎಂ.ಎಸ್.ಚೆನ್ನವೀರಯ್ಯ ತಿಳಿಸಿದರು.
ಅವರು ಪಟ್ಡಣದ ಸರ್ಕಾರಿ ಪದವಿಪೂರ್ವಕಾಲೇಜ್(ಪ್ರೌಢಶಾಲೆ) ಆವರಣದಲ್ಲಿ,-1986-87ನೇಸಾಲಿನ ಎಸ್.ಎಸ್.ಎಲ್.ಸಿ.ವಿಧ್ಯಾರ್ಥಿಗಳ ಗುರುವಂದನೆ,ಸ್ನೇಹಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇಂದು ಕೃಷಿಗೆ ಮತ್ತೇ ಜೀವಬಂದಿದೆ.ಉನ್ನತ ಶಿಕ್ಚಣ ಕಲಿಸುವ ಜೊತೆಗೆ ಕೃಷಿಗೆ ಆದ್ಯತೆ ನೀಡಿ,ಇಂದು ನೀವು ನಮಗೆಲ್ಲಾ ಪಾದಪೂಜೆ ಮಾಡಿರುವುದು ನಿಜಕ್ಕೂ ಇಂದಿಗೂ ಸಂಸ್ಕಾರ ಉಳಿದಿದೆ ಎನಿಸುತ್ತದೆ.ನಿಮ್ಮಲ್ಲಿನ ಸಂಸ್ಕಾರದಿಂದಲೇ ಇಂದು ನಿಮ್ಮಗಳ ಮಕ್ಕಳು ಉನ್ನತಪದವಿ,ಸ್ಥಾನಗಳಲ್ಲಿದ್ದಾರೆ ಎಂಬುದು ಕೇಳಿ ಸಂತಸವಾಗುತ್ತದೆ.ಸಮಾಜ ಕೆಟ್ಟುಹೋಗಿದೆ,ಕೆಟ್ಟ ವಾತವಾರಣದಲ್ಲಿಯೂ ನೀವುಗಳು ಉಳಿಸಿಕೊಂಡ ಸಂಸ್ಕಾರ ಮಾದರಿಯಾದುದು ಎಂದರು.

ಮತ್ತೋರ್ವ ಶಿಕ್ಷಕಿ ಪದ್ಮಬಾಯಿ ಮಾತನಾಡಿ,ವಿಧ್ಯಾರ್ಥಿಗಳು ಉನ್ನತಹಾಗುಉತ್ತಮಸ್ಥಾನದಲ್ಲಿ ನೋಡುವುದೇ ಶಿಕ್ಷಣಕಲಿಸಿದ ಗುರುಗಳಿಗೆ ಸಿಗುವ ಗೌರವ.ಇಂದು ನೀವೆಲ್ಲಾ ಉತ್ತಮಸ್ಥಾನದಲ್ಲಿರುವುದು ನೋಡಿದರೆ ನಮಗೆ ಹೆಮ್ಮೆ ಎನಿಸುತ್ತದೆ.ಈಗ ನೀವೆಲ್ಲಾ ನಮಗಿಂತಲೂ ಉತ್ತಮಸ್ಥಾನದಲ್ಲಿದೀರಿ ಎನಿಸುತ್ತಿದೆ ಇದು,ನಾವು ನೀಡಿದ ಶಿಕ್ಷಣದಿಂದ ನಮಗೆ ಸಿಕ್ಕ ತೃಪ್ತಿ ಇದು ಎಂದರು.
ಶಿಕ್ಷಕಿ ಸೂರ್ಯಕುಮಾರಿ,ಪದ್ಮಾವತಿ,ಪ್ರಸ್ತುತ ಉಪಪ್ರಚಾರ್ಯ ಕಾಶಿಂಸಾಬ್ ಮಾತನಾಡಿದರು. ವಿಧ್ಯಾರ್ಥಿಗಳಾದ ಡಾ.ಎರಿಸ್ವಾಮಿ,ಜಿ.ವೆಂಕಟರಮೇಶ್,ಶಿವಶಂಕರ ಬಣಗಾರ,ರೇಖಾ,ಮಂಜುಳ, ಇಂದಿರಾ ಕಲಾಲ್, ಕೆ.ಬಾಬು,ಮೋಹಿನಿ,ಪೂಜಾರಬಸಪ್ಪ,ಏಕಾಂಬರೀಶ್ ನಾಯ್ಕ್ ಸೇರಿದಂತೆ ಹಲವರು ತಮ್ಮ ವಿದ್ಯಾರ್ಥಿಜೀವನದ ಘಟನೆಗಳನ್ನು ಹಂಚಿಕೊಂಡರು.
“
ಇದಕ್ಕೂ ಮುನ್ನ ತಮಗೆ ಶಿಕ್ಷಣಧಾರೆ ಎರೆದ ಗುರುಗಳಿಗೆ ಪುಷ್ಪವೃಷ್ಡಿಯ ಮೂಲಕ ವೇದಿಕೆಗೆ ಕರೆತಂದರು,ನಂತರ ಗುರುಗಳ ಪಾದಪೂಜೆ ನೆರವೇರಿಸಿ ಧನ್ಯತೆಮೆರೆದರು.ಅಲ್ಲದೇ ನಂತರ ಗುರುಗಳು ಕತ್ತರಿಸಿದ ಕೇಕಿನ ಕೈ ತುತ್ತು ಪ್ರತಿಯೊಬ್ಬ ವಿಧ್ಯಾರ್ಥಿಗಳು ಸವಿದರು” ಆರಂಭದಲ್ಲಿ ರೇಖಾ,ಮೋಹಿನಿ ಪ್ರಾರ್ಥಿಸಿದರು,ರಾಜಲಿಂಗಪ್ಪ ಸ್ವಾಗತಿಸಿದರು,ಪರಮೇಶ್ವರ ಪ್ರಸ್ತಾವಿಕವಾಗಿ ಮಾತನಾಡಿದರು.ತ್ಯಾವರನಾಯ್ಕ್ ನಿರ್ವಹಿಸಿದರು.





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ