https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ:
ಚಿತ್ರಕಲೆಯಲ್ಲಿ ಸಾಧನೆ ಮಾಡಲು ಅತೀವ ಆಸಕ್ತಿ, ಸಾಕಷ್ಟು ಬದ್ಧತೆ ಮತ್ತು ಸುದೀರ್ಘ ಶ್ರಮ ಅವಶ್ಯ.ಇಂತಹ ಕಲೆಯನ್ನು ಕರಗತ ಮಾಡಿಕೊಂಡಿರುವ ಸಮೀಪದ ಜಿ.ನಾಗಲಾಪುರಗ್ರಾಮದ ವಿಧ್ಯಾರ್ಥಿ ಡಿ.ಪಿ.ಪ್ರಸನ್ನಕುಮಾರ್ ಇದೀಗ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲಾಗಿದ್ದಾರೆ.
ಇದು ವಿಶ್ವದಾಖಲೆಗೆ ಸಮನಾದುದು ಎನ್ನುವುದು ವಿಶೇಷ. ಜಿ.ನಾಗಲಾಪುರ ಗ್ರಾಮದ, ಸಂಗಿತಕಲಾವಿದ ದಿ.ಡಿ.ಹನುಮಂತಪ್ಪರ ಮಗ, ಡಿ.ಪಂಪಾಪತಿ, ನಂದಿನಿರವರ ಮಗ ಡಿ.ಪಿ.ಪ್ರಸನ್ನಕುಮಾರ್ ವಿಶಿಷ್ಚ ಚಿತ್ರಲಿಪಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದಾನೆ.ಪ್ರಸನ್ನಕುಮಾರ್ ಕನ್ನಡಮಾದ್ಯಮದಲ್ಲೇ ಪ್ರಸ್ತುತ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ,8ನೇತರಗತಿಯಲ್ಲಿ ಅಭ್ಯಾಸಮಾಡುತ್ತಿದ್ದು,
ಈ ಮುಂಚೆ ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ 1-7ನೇತರಗತಿಯನ್ನು ಕಲಿತಿದ್ದಾನೆ.


“ಚಿತ್ರಲಿಪಿ”.
ಇದೊಂದು ವಿಶಿಷ್ಟ ಬರಹ.ಕೋವಿಡ್ ಸಮಯದಲ್ಲಿ ಹರಿಹರಪುರದ ಗುರುಕುಲದ ಶಿಕ್ಷಕರಾದ ಮಾಧವಾಚಾರ್ ರವರ ಮೂಲಕ ಭಗವದ್ಗೀತೆ ಕಲಿತು, ನಂತರ ಅವರ ಪುತ್ರಿಯ ಮೂಲಕ ಈ ಲಿಪಿಯ ಮೂಲಕವೇ ಹಿಂದುಗಳ ಮಹಾಗ್ರಂಥವಾದ ಭಗವದ್ಗೀತೆಯ 700 ಶ್ಲೋಕಗಳನ್ನು ಕಲಿತಿದ್ದಲ್ಲದೆ, ಅವುಗಳನ್ನು 84733 ಚಿತ್ರಗಳ ಮೂಲಕ, ಚಿತ್ರಲಿಪಿಯಲ್ಲಿ ಅರಳಿಸಿದ್ದಾನೆ. ಶ್ಲೋಕದ ಒಂದೊಂದು ಶಬ್ದಕ್ಕೂ ಚಿತ್ರಗಳಮೂಲಕವೇ ವಿವರಿಸುವ ವಿಶೇಷ ಕಲೆಯಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ನಂತರ ತಾನು ಕಲಿತ ಶ್ಲೋಕಗಳನ್ನು ಚಿತ್ರಲಿಪಿಯಲ್ಲಿ ಅರಳಿಸಿ, ಅದನ್ನ ಹರಿಯಾಣದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಕಳಿಸಿ,ಅದರಲ್ಲಿ ದಾಖಲಾಗಿದ್ದಾನೆ.
” ಕೈ ಭಾಷೆ”
ಅಲ್ಲದೇ ಕೈ ಸಂಗ್ನೆಯಲ್ಲಿ ಭೋದಿಸುವ ಹಾಗು ಎರಡು ಕೈಗಳಿಂದ ಬರೆಯುವ ವಿಶೇಷ ಶಿಕ್ಷಣವನ್ನು ಅಧ್ಯಯನ ಮಾಡುತ್ತಿದ್ದಾರೆ. ಸಮಾಜ ವಿಷಯದಲ್ಲಿ ದೇಶದ 773 ಜಿಲ್ಲೆಗಳನ್ನು ಕೈ ಭಾಷೆಯಲ್ಲಿಯೇ ವಿವರ ನೀಡುತ್ತಾನೆ, ಇದಕ್ಕೂ ಕೂಡ ಪ್ರಶಸ್ತಿ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

“ಕಲೆಯಲ್ಲೂ ಸೈ”
ಇವರ ಅಜ್ಜ ದಿ.ಡಿ.ಹನುಮಂತಪ್ಪರವರು ಹಾರ್ಮೋನಿಯಂ ಕಲಾವಿದರು, ತಂದೆ ಪಂಪಾಪತಿ ತಬಲವಾದಕರು, ಈಗ ಇವರು ಕೂಡ ವಿಶಿಷ್ಷಕಲೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇವರು ಈಗ
ಗಣಿತದ ಸೂತ್ರ, ಪ್ರಮೇಯಗಳನ್ನು ಹಾಡಿನ ಮೂಲಕ ಪ್ರಸ್ತುತಪಡಿಸುವ ಹಾಗು ಹಿಂದುಸ್ತಾನಿಸಂಗೀತದಲ್ಲೂ, ಯಕ್ಷಗಾನ,





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಸಾಹಿತ್ಯ, ವೈಚಾರಿಕತೆ ಹಾಗೂ ಆಡಳಿತದ ತ್ರಿವೇಣಿ ಸಂಗಮಕ್ಕೆ ‘ನಾಡೋಜ’ ಗೌರವ
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ