April 29, 2026

Hampi times

Kannada News Portal from Vijayanagara

ಎಸ್‌ ಎಸ್‌ ಎಲ್‌ ಸಿ ಫಲಿತಾಂಶ: ವಿಜಯನಗರ ಜಿಲ್ಲೆಗೆ ಆದಿತ್ಯ ಎಸ್.ಎಂ.(೬೨೧) ಪ್ರಥಮ

https://youtu.be/NHc6OMSu0K4?si=SI_K4goOPEgwo6h2

ವಿಜಯನಗರ ಜಿಲ್ಲೆಗೆ ಆದಿತ್ಯ ಎಸ್.ಎಂ.(೬೨೧) ಪ್ರಥಮ
ಹೊಸಪೇಟೆ ತಾಲೂಕಿಗೆ ಎಸ್.ವಿಶಾಲಾಕ್ಷಿ, ವಿ.ಸ್ನೇಹ, ಅಬ್ದುಲ್ಲಾ (ಪ್ರಥಮ), ಶ್ರೀಮಲ್ಲಿಕಾರ್ಜುನ (ದ್ವಿತೀಯ), ಎ.ಕುಶ್ವಂತ ನಾಯ್ಕ, ಕೌತಿಕಾವ್ಯ (ತೃತೀಯ) ಟಾಪರ್

ಹಂಪಿ ಟೈಮ್ಸ್ ಹೊಸಪೇಟೆ
ಹೊಸಪೇಟೆ ತಾಲೂಕಿನ ಎಸ್ಸೆಸ್ಸೆಲ್ಪಿ ಫಲಿತಾಂಶದಲ್ಲಿ ಆರು ವಿದ್ಯಾರ್ಥಿಗಳು ಟಾಪ್ ತ್ರಿ ಸ್ಥಾನ ಪಡೆದಿದ್ದಾರೆ. ಹೊಸಪೇಟೆ ಮಾಜಿ ಪುರಸಭೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಎಸ್.ವಿಶಾಲಾಕ್ಷಿ ೬೧೧ (ಶೇ.೯೭.೭೬), ಮರಿಯಮ್ಮನಹಳ್ಳಿಯ ಪ್ರಾರ್ಥನಾ ಇಂಗ್ಲೀಷ್ ಮಾದ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ವಿ.ಸ್ನೇಹ ೬೧೧ (ಶೇ.೯೭.೭೬) ಮತ್ತು ಹೊಸಪೇಟೆ ಟಿಎಂಎಇಎಸ್ ರೋಸ್‌ಬಡ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಅಬ್ದುಲ್ಲಾ ೬೧೧ (ಶೇ.೯೭.೭೬) ಅಂಕ ಪಡೆದು ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಹೊಸಪೇಟೆ ತಾಲೂಕಿನ ತಿಮ್ಮಲಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿ ಶ್ರೀಮಲ್ಲಿಕಾರ್ಜುನ ೬೧೦ (ಶೇ.೯೭.೬) ದ್ವಿತೀಯ ಸ್ಥಾನ ಪಡೆದರೆ, ಹೊಸಪೇಠೆ ಸಹ್ಯಾದ್ರಿ ಆಂಗ್ಲ ಮಾದ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಎ.ಕುಶ್ವಂತ ನಾಯ್ಕ ೬೦೯ (ಶೇ.೯೭.೪೪) ಮತ್ತು ಹೊಸಪೇಟೆ ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ) ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಕೌತಿಕಾವ್ಯ ೬೦೯ (ಶೇ.೯೭.೪೪) ಅಂಕ ಪಡೆಯುವ ಮೂಲಕ ತಾಲೂಕಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
೨೦೨೩-೨೪ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಗುರುವಾರ ಬೆಳಿಗ್ಗೆ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ವಿಜಯನಗರ ಜಿಲ್ಲೆ ಕಳೆದ ವರ್ಷ ೧೦ನೇ ಸ್ಥಾನದಲ್ಲಿತ್ತು. ಈ ಬಾರಿ ೨೭ನೇ ಸ್ಥಾನಕ್ಕಿಳಿದಿದ್ದರೂ, ಗುಲ್ಭರ್ಗಾ ವಿಭಾಗದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ವಿಜಯನಗರ ಜಿಲ್ಲೆ ಶೇ.೬೫.೬೧ ಫಲಿತಾಂಶ ಪಡೆದುಕೊಳ್ಳುವ ಮೂಲಕ ಪ್ರಥಮ ಸ್ಥಾನದಲ್ಲಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಶೇ.೬೧.೭೫ ಫಲಿತಾಂಶ ಬಂದಿದ್ದು, ತಾಲೂಕಿನಲ್ಲಿ ೮೯ ವಿದ್ಯಾರ್ಥಿಗಳು ಎಪ್ಲಸ್ ಗ್ರೇಡ್‌ನಲ್ಲಿ ಪಾಸಾಗಿದ್ದರೆ, ೩೧೩ ವಿದ್ಯಾರ್ಥಿಗಳು ಎ ಗ್ರೇಡ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಹೊಸಪೇಟೆ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ೨೪೯೫ ವಿದ್ಯಾರ್ಥಿಗಳ ಪೈಕಿ ೧೩೨೧ ವಿದ್ಯಾರ್ಥಿಗಳು (ಶೇ.೫೨.೯೪) ತೇರ್ಗಡೆಯಾಗಿದ್ದಾರೆ. ೨೮೯೮ ವಿದ್ಯಾರ್ಥಿನಿಯರ ಪೈಕಿ ೨೦೦೯ ವಿದ್ಯಾರ್ಥಿನಿಯರು(ಶೆ.೬೯.೩೨) ಉತ್ತೀರ್ಣರಾಗಿದ್ದಾರೆ. ಒಟ್ಟು ೫೩೯೩ ವಿದ್ಯಾರ್ಥಿಗಳ ಪೈಕಿ ೩೩೩೦ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ೨೦೬೩ ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ.
ಹೊಸಪೇಟೆ ತಾಲೂಕಿನಲ್ಲಿ ಶೇ.೧೦೦ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ ಶೂನ್ಯವಾಗಿದೆ. ೧೨ ಶಾಲೆಗಳು ಶೇ.೯೧-೯೯ ವರೆಗೆ, ೮ ಶಾಲೆಗಳು ಶೇ.೮೧-೯೦ ರವರೆಗೆ, ೩೪ ಶಾಲೆಗಳು ಶೇ.೫೧-೮೦ವರೆಗೆ, ೧೩ ಶಾಲೆಗಳು ಶೇ.೪೧-೫೦ ಮತ್ತು ೧೪ ಶಾಲೆಗಳು ಶೇ.೧-೪೦ವರೆಗೆ ಫಲಿತಾಂಶ ಪಡೆದಿವೆ.
ತಾಲೂಕಿನ ಸರ್ಕಾರಿ ಶಾಲೆಗಳು ಶೇ.೫೩.೯೧ ಫಲಿತಾಂಶ ಪಡೆದರೆ, ಅನುದಾನಿತ ಶಾಲೆಗಳು ಶೆ.೬೧.೮೦ ಫಲಿತಾಂಶ ಪಡೆದಿವೆ. ಅನುದಾನ ರಹಿತ ಶಾಲೆಗಳು ಶೇ.೭೦.೩೩ ಫಲಿತಾಂಶ ಪಡೆದಿದ್ದು ಒಟ್ಟಾರೆ ತಾಲೂಕಿನ ಫಲಿತಾಂಶ ಶೇ.೬೧.೭೫ ಆಗಿದೆ.

ವರ್ಷದುದ್ದಕ್ಕೂ ಹಲವು ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಮೂಲಕ ಮಕ್ಕಳನ್ನು ತರಬೇತಿಗೊಳಿಸುವಲ್ಲಿ ಶಿಕ್ಷಕರು ಶ್ರಮಿಸಿದ್ದಾರೆ. ಮತ್ತೊಮ್ಮೆ, ಮಗದೊಮ್ಮ ಪರೀಕ್ಷೆ ಬರೆಯಲು ಅವಕಾಶವಿದೆ. ಎರಡನೇ ಅವಧಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಅಭಿನಂದನೆಗಳು.
ಎಂ.ಚನ್ನಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ, ಹೊಸಪೇಟೆ.

 

***************************-

ಹಂಪಿ ಟೈಮ್ಸ್ ಹೊಸಪೇಟೆ:
ವಿಜಯನಗರ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು ೨೦೬೧೯ ವಿದ್ಯಾರ್ಥಿಗಳ ಪೈಕಿ ೧೩೫೨೮ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.೬೫.೬೧ ಪಡೆಯುವ ಮೂಲಕ ರಾಜ್ಯದಲ್ಲಿ ೨೭ನೇ ಸ್ಥಾನಕ್ಕೆ ಇಳಿದಿದೆ. ೫೯೩೯ ವಿದ್ಯಾರ್ಥಿಗಳು, ೭೫೮೯ ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕು ಶೇ.೭೮.೫೦ (ಪ್ರಥಮ), ಕೂಡ್ಲಿಗಿ ಶೇ.೭೩.೧೨ (ದ್ವಿತೀಯ), ಹರಪನಹಳ್ಳಿ ಶೇ.೬೪.೧೩ (ತೃತೀಯ), ಹೂವಿನಹಡಗಲಿ ಶೇ.೬೧.೬೭(ನಾಲ್ಕನೇ ಸ್ಥಾನ) ಮತ್ತು ಜಿಲ್ಲಾ ಕೇಂದ್ರ ಹೊಸಪೇಟೆ ಶೇ.೫೬.೬೭ ಫಲಿತಾಂಶ ಪಡೆದುಕೊಂಡಿವೆ.
ವಿಜಯನಗರ ಜಿಲ್ಲೆಯ ಟಾಪರ್‍ಸ್:
ಕೊಟ್ಟೂರಿನ ಗುರುದೇವ ಆಂಗ್ಲ ಮಾದ್ಯಮ ಪ್ರೌಢಶಾಲೆಯ ಆದಿತ್ಯ ಎಸ್.ಎಂ. ೬೨೧ ಅಂಕಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಹರಪನಹಳ್ಳಿ ವಿವಿ ಎಸ್ ಹೈಸ್ಕೂಲ್‌ನ ಸಾಗರ ಕೆ.ಸಿ. ೬೨೦ ಅಂಕಗಳು, ಕೂಡ್ಲಿಗಿ ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಾ ಎನ್.ಪಾಟೀಲ್ ೬೧೯ ಅಂಕಗಳು, ಉತ್ತಂಗಿಯ ಸರ್ಕಾರಿ ಪ್ರೌಢಶಾಲೆಯ ಚಿರಾಗ್ .ಸಿ. ೬೧೮ ಅಂಕಗಳು, ಹೂವಿನಹಡಗಲಿಯ ರ್ಶರೀ ಮರಿಸ್ವಾಮಿ ಮಠದ ಪಾಟಿಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೆ.ಎಸ್.ಲಿಖಿತ ೬೧೭ ಅಂಕಗಳು, ಕೊಟ್ಟೂರಿನ ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೆ.ಜಿ.ಪ್ರತಿಭಾ ಪಟೇಲ್ ೬೧೭ ಅಂಕಗಳು, ಹಗರಿಬೊಮ್ಮನಹಳ್ಳಿ ಶಾರದ ಆಂಗ್ಲ ಮಾಧ್ಯಮ ಶಾಲೆಯ ಸಾತ್ವಿಕ್ ಆರ್.ಎನ್. ೬೧೬ ಅಂಕಗಳು, ಹೂವಿನಹಡಗಲಿ ಶ್ರೀ ಮರಿಸ್ವಾಮಿ ಮಠದ ಪಾಟಿಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರವೀಣ್ ಕುಮಾರ್ ಪೂಜಾರ ೬೧೫ ಅಂಕಗಳು, ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಜಯ್ ಎಂ. ೬೧೫ ಅಂಕಗಳು ಮತ್ತು ಹರಪನಹಳ್ಳಿಯ ವಿವಿಎಸ್ ಪ್ರೌಢಶಾಲೆಯ ಪ್ರತೀಕ್ ಎಂ.ಎಸ್. ೬೧೫ ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯ ಟಾಪ್ ಹತ್ತರಲ್ಲಿ ಸ್ಥಾನ ಪಡೆದು ಹೆಮ್ಮೆಯ ವಿದ್ಯಾರ್ಥಿಗಳಾಗಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ೧೯ ಶಾಲೆಗಳು ಶೇ.೧೦೦ ಫಲಿತಾಂಶ ಸಾಧಿಸಿದ್ದು, ಹಗರಿಬೊಮ್ಮನಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ಹೈಸ್ಕೂಲ್ ಮತ್ತು ಹರಪನಹಳ್ಳಿ ಗೌಸಿಯ ಉರ್ದು ಹೈಸ್ಕೂಲ್ ಶೂನ್ಯ ಫಲಿತಾಂಶ ಪಡೆದಿವೆ ಎಂದು ವಿಜಯನಗರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಯುವರಾಜ ನಾಯ್ಕ ತಿಳಿಸಿದ್ದಾರೆ.

ನಿರೀಕ್ಷೆ ಹೆಚ್ಚುತ್ತು, ಆದ್ರೆ ನಮ್ಮಲ್ಲಿ ಪರಿಣಾಮಕಾರಿಯಾಗಿ ವೆಬ್‌ಕಾಸ್ಟಿಂಗ್ ಮಾಡಿದ್ದೇವೆ. ಕಲ್ಯಾಣ ಕರ್ನಾಟದಲ್ಲಿ ನಂ.೧ ಸ್ಥಾನದಲ್ಲಿದ್ದೇವೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇನ್ನೆರೆಡು ಅವಕಾಶಗಳಿದ್ದು ಆತಂಕಪಡೆಬೇಕಿಲ್ಲ. ಫಲಿತಾಂಶ ಕುಸಿದಿರುವ ಬಗ್ಗೆ ಗಮನಹರಿಸಲು ಡಿಸಿಪಿಐಗೆ ಸೂಚಿಸಲಾಗಿದೆ. ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.
ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ

Please follow and like us:

 

 

 

 

 

Translate »
[t4b-ticker]
error: Content is protected !!