December 15, 2025

Hampi times

Kannada News Portal from Vijayanagara

ಮಸ್ಟರಿಂಗ್ ಪ್ರಕ್ರಿಯೆ ಯಶಸ್ವಿ, ಮತಗಟ್ಟೆಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ 
ಮೇ 7ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮಸ್ಟರಿಂಗ್ ಪ್ರಕ್ರಿಯೆಯು ವಿಜಯನಗರ ಜಿಲ್ಲಾ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 6ರಂದು ಯಶಸ್ವಿಯಾಗಿ ನಡೆಯಿತು.
ಮತಗಟ್ಟೆಗೆ ನಿಯೋಜನೆಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಮತಯಂತ್ರಗಳು ಮತ್ತು ಚುನಾವಣಾ ಸಾಮಗ್ರಿಗಳನ್ನು ಒಯ್ಯಲು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿನ ಮಸ್ಟರಿಂಗ್ ಕೇಂದ್ರಗಳತ್ತ ಬೆಳಗ್ಗೆಯಿಂದಲೇ ಆಗಮಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮತಯಂತ್ರಗಳು ಮತ್ತು ಚುನಾವಣಾ ಸಾಮಗ್ರಿಗಳನ್ನು ವಿತರಿಸಲು ಗುರುತಿಸಿದ್ದ ಮಸ್ಟರಿಂಗ್ ಕೇಂದ್ರವಾದ ಹೊಸಪೇಟೆ ನಗರದ ಸಂಡೂರ ರಸ್ತೆಯಲ್ಲಿರುವ ಎಲ್‌ಎಫ್‌ಎಸ್ ಆವರಣದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳು ಸೇರಿದಂತೆ ಇನ್ನೀತರ ಚುನಾವಣಾ ಸಾಮಗ್ರಿಗಳು ಹಾಗೂ ಹೆಲ್ತ್ ಕಿಟ್ ಸೇರಿದಂತೆ ಇನ್ನೀತರ ಸಾಮಗ್ರಿ ವಿತರಿಸಲು ಎಲ್‌ಎಫ್‌ಎಸ್ ಶಾಲಾ ಆವರಣದಲ್ಲಿ ಸೆಕ್ಟರ್‌ವಾರು ಕೌಂಟರÀಗಳನ್ನು ಸ್ಥಾಪಿಸಲಾಗಿತ್ತು. ಧ್ವನಿವರ್ಧಕದ ಮೂಲಕ ತಿಳಿಸಿ ಚುನಾವಣಾ ಸಾಮಗ್ರಿ ವಿತರಿಸಲಾಯಿತು.
ಮಸ್ಟರಿಂಗ್ ಹಿನ್ನೆಲೆಯಲ್ಲಿ ಮತಗಟ್ಟೆಗೆ ನಿಯೋಜನೆಯಾದ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೊಲೀಸರು, ಯೋಧರನ್ನು ಕರೆದೊಯ್ಯಲು ಅಗತ್ಯ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು, ಮಿನಿ ಬಸ್‌ಗಳು ಮತ್ತು ಕ್ರೂಸರಗಳು ಎಲ್‌ಎಫ್‌ಎಸ್ ಶಾಲಾ ಆವರಣಕ್ಕೆ ಬಂದು ಸೇರಿದ್ದವು. ಆಯಾ ಮತಗಟ್ಟೆಗಳಿಗೆ ತೆರಳಲು ಮಾರ್ಗಗಳನ್ನು ಗುರುತಿಸಿ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿತ್ತು.
ವಿವಿಧೆಡೆ ಯಶಸ್ವಿ: ಹಡಗಲಿಯ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕೂಡ್ಲಿಗಿಯ ಸರ್ಕಾರಿ ಯುನಿಟೆಡ್ ಪದವಿ ಪೂರ್ವ ಕಾಲೇಜಿನಲ್ಲಿ, ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದಲ್ಲಿನ ಜಿವಿಪಿಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಹರಪನಹಳ್ಳಿಯ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮೇ 6ರಂದು ಮಸ್ಟರಿಂಗ್ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಿತು. ಮಸ್ಟರಿಂಗ್ ಕೇಂದ್ರಗಳಲ್ಲಿ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಹಾಜರಿದ್ದು ಮಸ್ಟರಿಂಗ್ ಕಾರ್ಯದ ಮೇಲುಸ್ತುವಾರಿ ನೋಡಿಕೊಂಡರು. ಹೊಸಪೇಟೆ ನಗರದಲ್ಲಿನ ಎಲ್‌ಎಫ್‌ಎಸ್ ಶಾಲಾ ಆವರಣದಲ್ಲಿನ ಮಸ್ಟರಿಂಗ್ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿನ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿದಂತೆ ಇನ್ನೀತರರಿಗೆ ಊಟದ ವ್ಯವಸ್ಥೆಯು ಅಚ್ಚುಕಟ್ಟಾಗಿ ನಡೆಯಿತು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಯಾ ಮಸ್ಟರಿಂಗ್ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಊಟದ ಕೌಂಟರಗಳನ್ನು ಸ್ಥಾಪಿಸಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೊತೆಗೆ ಬಿಸಿಲಿನ ಹಿನ್ನೆಲೆಯಲ್ಲಿ ಮಸ್ಟರಿಂಗ್ ಕೇಂದ್ರಗಳಲ್ಲಿ ಶ್ಯಾಮಿಯಾನ್ ಅಳವಡಿಸಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.
ಅಂಬ್ಯುಲೆನ್ಸ್ ವ್ಯವಸ್ಥೆ: ಮತಗಟ್ಟೆಗಳಿಗೆ ನಿಯೋಜನೆಗೊಂಡು ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬAಧಿಸಿದAತೆ ಆರೋಗ್ಯ ತಪಾಸಣೆಗಾಗಿ ಅಂಬ್ಯುಲೆನ್ಸಗಳ ವ್ಯವಸೆಯನ್ನು ಸಹ ಮಾಡಲಾಗಿತ್ತು.

 

 

 

 

 

 

 

ಜಾಹೀರಾತು
error: Content is protected !!