October 13, 2026

Hampi times

Kannada News Portal from Vijayanagara

ಹೊಸಪೇಟೆಯಲ್ಲಿ ಬಸವೇಶ್ವರ ಪುತ್ಥಳಿ ಅನಾವರಣಕ್ಕೆ ಶಾಸಕ ವಿನಯ್‌ ಕುಲಕರ್ಣಿಗೆ ಆಹ್ವಾನ

ನವೆಂಬರ್‌ 23  ಶ್ರೀ ಬಸವೇಶ್ವರ ವೃತ್ತ, ಪುತ್ಥಳಿ ಅನಾವರಣ

ಹಂಪಿ ಟೈಮ್ಸ್ ಹೊಸಪೇಟೆ:
ನಗರದಲ್ಲಿ ನ.20 ರಿಂದ ನ.23ರವರೆಗೆ ಜರುಗಲಿರುವ ನಗರದ ಶ್ರೀ ಕೊಟ್ಟೂರು ಸಂಸ್ಥಾನಮಠದ ಜಗದ್ಗುರು ಶ್ರೀ ಡಾ.ಸಂಗನಬಸವ ಮಹಾಸ್ವಾಮಿಯವರ ಪಟ್ಟಾಧಿಕಾರ ಸುವರ್ಣ ಮಹೋತ್ಸವದಂಗವಾಗಿ ಶಿಲಾಮಂಟಪ ಉದ್ಘಾಟನೆ ಹಾಗೂ ಶ್ರೀ ಬಸವೇಶ್ವರ ವೃತ್ತ, ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಧಾರವಾಡದ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಅವರನ್ನು  ಹೊಸಪೇಟೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಮುಖಂಡರು ಸೋಮವಾರ  ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ  ಆಹ್ವಾನಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪೊಸ್ಟರ್ ಬಿಡುಗಡೆ ಮಾಡಿದ ಶಾಸಕ ವಿನಯ್ ಕುಲಕರ್ಣಿ ಅವರು ಮಾತನಾಡಿ,   ಶ್ರೀ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಚ್.ವಿ.ಶರಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ರವಿಶಂಕರ,  ಹಿರಿಯ ಮುಖಂಡರಾದ ಕೋರಿಶೆಟ್ಟಿ ಲಿಂಗಪ್ಪ, ಜಾಲಿ ಪ್ರಕಾಶ, ನಗರಸಭೆ ಸದಸ್ಯರಾದ ಕಿರಣ್‌ ಶಂಕ್ರಿ, ಮಂಜುನಾಥ,  ಯುವ ಮುಖಂಡ ಕಿಚಿಡಿ ಕೊಟ್ರೇಶ, ದೇವರಾಜ, ಲೇಪಾಕ್ಷ ಜವಳಿ  ಇತರರಿದ್ದರು.

Please follow and like us: