https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಮುದ್ರಿಸಲಾಗುವ ಕರಪತ್ರಗಳನ್ನು ಅಪೆಂಡಿಕ್ಸ್-ಎ ಮತ್ತು ವೆಚ್ಚದ ವಿವರವನ್ನು ಅಪೆಂಡಿಕ್ಸ್-ಬಿ ಅಡಿ ಜಿಲ್ಲಾ ಚುನವಣಾಧಿಕಾರಿ ಕಚೇರಿಗೆ ಹಾಗೂ ಆಯಾ ಕ್ಷೇತ್ರದ ಚುನವಣಾಧಿಕಾರಿಗಳಿಗೆ ಮೂರು ದಿನಗಳ ಒಳಗಾಗಿ ಮುದ್ರಣ ಮಾಡಿದ ನಾಲ್ಕು ಪ್ರತಿಗಳೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುದ್ರಣ ಮಾಲೀಕರು ಮತ್ತು ಕೇಬಲ್ ಆಪರೇರ್ಸ್ , ಡಿಜಿಟಲ್ ಮಾರುಕಟ್ಟೆ ಪ್ರತಿನಿಧಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಪಕ್ಷ, ಅಭ್ಯರ್ಥಿಗಳ ಚುನವಣಾ ಕುರಿತ ಕರಪತ್ರ, ಪೋಸ್ಟರ್‌ಗಳನ್ನು ಮುದ್ರಿಸುವ ಮೊದಲು ಅಪೆಂಡಿಕ್ಸ್-ಎ ಅಡಿ ಸಂಬಂಧಿಸಿದ ಅಭ್ಯರ್ಥಿ ಅಥವಾ ಅವರ ಅಧಿಕೃತ ಏಜೆಂಟರ ಸಹಿ ಪಡೆದು ಮುದ್ರಿಸಿ ಈಗಾಗಲೇ ದರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರನ್ವಯ ಮುದ್ರಣ ವೆಚ್ಚ, ಮುದ್ರಿಸಿದ ಪ್ರತಿಗಳು, ಮುದ್ರಣಕಾರರ ಸಂಪೂರ್ಣ ವಿವರ, ಮುದ್ರಣ ಪ್ರತಿಗಳಲ್ಲಿ ಇರುವುದು ಕಡ್ಡಾಯವಾಗಿದ್ದು, ವೆಚ್ಚದ ವಿವರವನ್ನು ಅಧಿಸೂಚಿತ ದರದಂತೆ ಅಪೆಂಡಿಕ್ಸ್-ಬಿ ಅಡಿ ಸಲ್ಲಿಸಬೇಕು ಎಂದರು.

ಎಂಸಿಎಂಸಿ ಕಟ್ಟುನಿಟ್ಟಿನ ಕಾವಲು:
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿವಿ, ವಾಟ್ಸಾಪ್ ಗ್ರೂಪ್‌ಗಳಲ್ಲಿ ಅನುಮತಿ ಪಡೆಯದ ಕ್ರಿಯೇಟಿವ್ಸ್ಗಳನ್ನು ಬಳಕೆ ಮಾಡುವಂತಿಲ್ಲ ಮತ್ತು ಡಿಸೈನರ್‌ಗಳು ಸಹ ಕ್ರಿಯೇಟಿವ್ಸ್ಗಳನ್ನು ಸಿದ್ದಪಡಿಸುವ ಮುಂಚೆ ಎಂಸಿಎಂಸಿಯಿಂದ ಅನುಮತಿ ಪಡೆದಿರಬೇಕು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸಲು ಎಂಸಿಎಂಸಿಯಿಂದ ಅನುಮತಿ ಪಡೆದಿರಬೇಕು. ಈ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ವಾರ್ತಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಇದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ. ಜಾತಿ ವೈಷಮ್ಯವುಳ್ಳ ಮಾಹಿತಿ, ಅಸಭ್ಯ ಪ್ರಚಾರ, ಸುಳ್ಳು ಮಾಹಿತಿ ಮುದ್ರಿಸುತಿಲ್ಲ, ಒಂದು ವೇಳೆ ಯಾರಾದರೂ ಮುದ್ರಣ ಮಾಡಿಸಲು ಬಂದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬೇಕು. ಮುಖ್ಯವಾಗಿ ಮುದ್ರಿಸಿದ ಬ್ಯಾನರ್ ಅಥವಾ ಫ್ಲೇಕ್ಸ್ನಲ್ಲಿ ಮುದ್ರಿಸುತ್ತಿರುವ ಮಾಲೀಕರ ಹೆಸರನ್ನು ನಮೂದಿಸಬೇಕು. ಇಲ್ಲವಾದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ ಎಂದು ತಿಳಿಸಿದರು.

ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಹಾಗೂ ಇತರೆ ಪ್ಲಾಸ್ಟಿಕ್ ಪ್ಯಾಕಿಂಗ್ ಫಿಲ್ಡ್ ಆಮಂತ್ರಣ ಪತ್ರ, ಪಿಎಸಿ ಬ್ಯಾನರ್‌ಗಳು, ಪಾಲಿಸ್ಟೆರಿನ್‌ಗಳನ್ನೊಳಗೊಂಡಂತೆ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜಕೀಯವಾದ ಬ್ಯಾನರ್, ಹೋರ್ಡಿಂಗ್‌ಗಳನ್ನು ಅಳವಡಿಸಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು. ಚುನಾವಣಾ ರಾಜಕೀಯ ಮತಪ್ರಚಾರ ಬ್ಯಾನರ್, ಹೋರ್ಡಿಂಗ್‌ಗಳನ್ನು ಅನುಮತಿ ಇಲ್ಲದೆ ಹಾಕುವಂತಿಲ್ಲ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಹಾಗೂ ಎಂಸಿಎಂಸಿ ಸದಸ್ಯ ಕಾರ್ಯದರ್ಶಿ ಧನಂಜಯ ಬಿ. ಮತ್ತು ಮುದ್ರಣ ಮಾಲೀಕರು ಉಪಸ್ಥಿತರಿದ್ದರು.



More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್, ಕೋಟ್ಯಂತರ ರೂಪಾಯಿ ರಾಜಸ್ವ ಸಂಗ್ರಹ : ಅಬಕಾರಿ ನಿರೀಕ್ಷಕಿ ಎಸ್.ಬಿ.ಮಮತಾ