April 29, 2026

Hampi times

Kannada News Portal from Vijayanagara

ಮಕ್ಕಳನ್ನು ಒಂಟಿತನಕ್ಕೆ ದೂಡುವ ಸಾಧನ ಮೊಬೈಲ್: ಮ.ಬ.ಸೋಮಣ್ಣ

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:
ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಕಲಿಕಾ ಆಸಕ್ತಿ ಬೆಳೆಸುವ, ಮಕ್ಕಳ ಭಾವನೆ ಅರಳಿಸುವ ಆಟಿಕೆಗಳನ್ನು ನೀಡಿದಾಗ ಮಕ್ಕಳು ಪ್ರತಿಭಾವಂತರಾಗಿ ಸತ್ಪçಜೆಗಳಾಗಿ ಬೆಳೆಯುತ್ತಾರೆ ಎಂದು ಹಿರಿಯ ರಂಗತಜ್ಞ ಮಾ.ಬ.ಸೋಮಣ್ಣ ಹೇಳಿದರು.

ನಗರದ ಎಂ.ಪಿ.ಪ್ರಕಾಶ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭುವನೇಶ್ವರಿ ಕಲಾ ಟ್ರಸ್ಟ್ ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಕ್ಕಳು ಕುಟುಂಬದ ಸದಸ್ಯರೊಂದಿಗೆ ಬೆರೆತಾಗ ಮಾತ್ರ ಸಂಸ್ಕೃತಿ, ಸಂಸ್ಕಾರ ಕಲಿಯುತ್ತಾರೆ. ಮಕ್ಕಳ ಬೆಳವಣಿಗೆಗೆ ಮೊಬೈಲ್ ಮಾರಕ ಎಂಬುದು ತಿಳಿದಿದ್ದರೂ ಮಕ್ಕಳ ಅಳು, ಹಠಮಾರಿತನ ನಿಲ್ಲಿಸಲು ಅವರ ಕೈಗೆ ನೀಡುತ್ತಿರುವ ಮೊಬೈಲ್ ಮುಂದೊAದು ದಿನ ಮಕ್ಕಳನ್ನು ಒಂಟಿಯನ್ನಾಗಿಸುತ್ತವೆ ಎಂಬುದು ಮರೆಯಬಾರದು. ಮೊಬೈಲ್ ಎಂಬುದು ಮಕ್ಕಳನ್ನು ಸುಮ್ಮನಿರಿಸುವ ಸಾಧನವಲ್ಲ. ಮಕ್ಕಳ ಕಲಿಕೆಯ ಮೇಲೆ ಅಡ್ಡಪರಿಣಾಮ ಬೀರುವ ಸಾಧನಗಳನ್ನು ದೂರವಿಟ್ಟು, ಕಲಿಕೆಗೆ ಬೇಕಾದ ಅಗತ್ಯ ಪರಿಸರ ನಿರ್ಮಿಸುವುದು ಮತ್ತು ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪಾಲಕರ ಜವಾಬ್ದಾರಿಯಾಗಿದೆ ಎಂದರು.

 

ಹಿರಿಯ ರಂಗ ಕಲಾವಿದೆ ಡಾ. ಕೆ. ನಾಗರತ್ನಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲೆಗೆ ತನ್ನದೆ ಆದ ಮಹತ್ವವಿದೆ. ಐವತ್ತು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲ. ಇತ್ತೀಚಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬಹಳಷ್ಟು ಬೆಳೆದಿದೆ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಕಲಾವಿದರು ಕೌಶಲ್ಯಯುತವಾಗಿ ಬೆಳಯಬೇಕು. ಉತ್ತಮ ಕಲಾವಿದರಾಗಿ ಬೆಳೆಯಬೇಕಾದರೇ ಬಹಳಷ್ಟು ಶ್ರಮ ಬೇಕು. ಕಲಾವಿದರಲ್ಲಿ ಸದಾ ಹೊಸದನ್ನು ಹುಡುಕುವ ಭಾವನೆ ಬಹಳ ಮುಖ್ಯ ಎಂದರು.

ಹಲವು ಕ್ಷೇತ್ರಗಳಲ್ಲಿ ಸಾಧನೆಮಾಡಿದ ಸಾಧಕರಾದ ಕೃಷ್ಣ ಕುಲಕರ್ಣಿ,ವೀರಭದ್ರಪ್ಪ, ಗುಂಡಿ ರಮೇಶ್, ಮಾರುತಿರಾವ್, ಎಂ. ರಾಮು, ಸಾಹಿತಿ ಅಂಜಲಿ ಬೆಳಗಳ್, ರಾಧಮ್ಮ, ಶಕುಂತಲಮ್ಮ, ಕಾರ್ತಿಕ್, ರಾಜು ಅವರನ್ನು ಸನ್ಮಾನಿಸಲಾಯಿತು. ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.  ಶ್ರೀ ಸಿದ್ಧಲಿಂಗಯ್ಯ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಭುವನೇಶ್ವರಿ ಕಲಾ ಟ್ರಸ್ಟ್ ನ ಅಧ್ಯಕ್ಷೆ ನಯನಾ ಉಮೇಶ್ ಸೇರಿದಂತೆ ಕಲಾವಿದರು ಭಾಗವಹಿಸಿದ್ದರು.

Please follow and like us:

 

 

 

 

 

Translate »
[t4b-ticker]
error: Content is protected !!