https://youtu.be/NHc6OMSu0K4?si=SI_K4goOPEgwo6h2
ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯ ಎಂಸಿಎಚ್ ಆಸ್ಪತ್ರೆಯಲ್ಲಿ ಹೆರಿಗೆಯ ಸಮಯದಲ್ಲಿ ನವಜಾತ ಶಿಶು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ, ಕರ್ತವ್ಯದಲ್ಲಿ ಗೈರುಹಾಜರಾಗಿ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಎದುರಿಸುತ್ತಿರುವ ಸ್ತ್ರೀರೋಗ ತಜ್ಞರಾದ ಡಾ: ಅತಿಕಾ ಹೀನಾ ಅವರನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.

ದಿನಾಂಕ 03/09/2026 ರಂದು ಬೆಳಿಗ್ಗೆ 03-58 ಕ್ಕೆ ಶ್ರೀಮತಿ ಮೇಘನಾ (ವಯಸ್ಸು-28 ವರ್ಷ) ಎಂಬುವವರಿಗೆ ಹೆರಿಗೆ ಆಗಿದ್ದು, ಆ ಸಂದರ್ಭದಲ್ಲಿ ನವಜಾತ ಶಿಶುವಿಗೆ ಉಸಿರಾಟದ ತೊಂದರೆ ಕಂಡುಬಂದಿದ್ದರಿಂದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಕೊಪ್ಪಳ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಆದರೆ ದುರ್ದೈವವಶಾತ್ ಮಗು ಮರಣ ಹೊಂದಿರುತ್ತದೆ. ಹೆರಿಗೆಯ ನಿರ್ಣಾಯಕ ಸಮಯದಲ್ಲಿ ಸ್ತ್ರೀರೋಗ ತಜ್ಞರಾದ ಡಾ: ಅತಿಕಾ ಹೀನಾ ಅವರು ಕರ್ತವ್ಯದಲ್ಲಿ ಇರಲಿಲ್ಲವೆಂದೂ, ಸದರಿ ವೈದ್ಯರ ನಿರ್ಲಕ್ಷ್ಯ ಹಾಗೂ ಗೈರುಹಾಜರಿಯಿಂದಲೇ ಮಗು ಅಸುನೀಗಿದೆ ಎಂದು ರೋಗಿಗಳ ಸಂಬಂಧಿಕರು ತೀವ್ರವಾಗಿ ದೂರಿರುತ್ತಾರೆ.
ಸಂಬಂಧಿಕರ ಈ ದೂರಿನ ಗಂಭೀರತೆಯನ್ನು ಪರಿಗಣಿಸಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಈ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಲಾಗಿದೆ. ಪ್ರಕರಣದ ಸಂಪೂರ್ಣ ವಿಚಾರಣೆ ಬಾಕಿ ಉಳಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಎಂಸಿಎಚ್ ಆಸ್ಪತ್ರೆಯ ಕರ್ತವ್ಯದಿಂದ ಡಾ: ಅತಿಕಾ ಹೀನಾ ಅವರನ್ನು ಬಿಡುಗಡೆಗೊಳಿಸಿ ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.











More Stories
ಯಶೋದೆಗೆ ವಿಶ್ವವನ್ನೇ ತೋರಿದ ಬಾಲಕೃಷ್ಣ
ವಿಜಯನಗರ ಜಿಲ್ಲೆಯ ಸಿಬಿಎಸ್ಇ ಶಾಲೆಗಳ ಅಧಿಕೃತ ಪಟ್ಟಿ: ಪೋಷಕರ ಗಮನಕ್ಕೆ ಶಿಕ್ಷಣ ಇಲಾಖೆ ಪ್ರಕಟ
ಪೂತನಾಳ ವಿಷದ ಹಾಲಿಗೆ ಸೋತ ಮಮತೆ