https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಾಯಕತ್ವ ವಹಿಸಿಕೊಳ್ಳಬೇಕು. ಸಂವಿಧಾನಬದ್ಧವಾಗಿ ದೊರೆ ಯುವ ಅವಕಾಶಗಳನ್ನು ಬಳಸಿಕೊಂಡು ಆರ್ಥಿಕ ಹಾಗೂ ರಾಜಕೀಯ ಸಬಲೀಕರಣ ಸಾಧಿಸಬೇಕು ಎಂದು ಶಕ್ತಿ ಅಭಿಯಾನದ ರಾಜ್ಯ ಸಂಚಾಲಕಿ ಎಂ.ಪಿ.ವೀಣಾ ಮಹಾಂತೇಶ ಹೇಳಿದರು.

ನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ `ಶಕ್ತಿ ಅಭಿಯಾನ’ ಮಹಿಳೆಯರ ಪ್ರಾಥಮಿಕ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಿಳೆಯರು ಉನ್ನತ ಮಟ್ಟದ ಮುಖಂಡತ್ವ ಪಡೆಯಲು ಅಗತ್ಯವಿರುವ ತರಬೇತಿ ಮತ್ತು ಮಾಹಿತಿಯನ್ನು ಈ ಅಭಿಯಾನದ ಮೂಲಕ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಕ್ತಿ ಅಭಿಯಾನದ ರಾಜ್ಯ ಉಸ್ತುವಾರಿ ಲೋಕೇಶ್, ಮಾಧ್ಯಮ ಉಸ್ತುವಾರಿ ನಿತ್ಯಾನಂದ ತಿಮ್ಮೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ನಗರಸಭೆ ಸದಸ್ಯರಾದ ಮುನ್ನಿ ಕಾಸಿಂ, ಕನಕಮ್ಮ, ಸಮಾಜ ಸೇವಕಿ ರಶ್ಮಿ ರಾಜಶೇಖರ್ ಹಿಟ್ನಾಳ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಶಿಬಿರದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದರು.
ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಶೇಕಡಾ ೩೩ ರಷ್ಟು ಪ್ರಾತಿನಿಧ್ಯ ದೊರೆಯುವ ದೊಡ್ಡ ಅವಕಾಶವಿದ್ದು, ಸಂವಿಧಾನಬದ್ಧವಾಗಿ ಸಿಗುವ ಈ ಸೌಲಭ್ಯಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ಶಿಕ್ಷಣ, ಆರೋಗ್ಯ, ವ್ಯಾಪಾರ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು.
-ಎಂ.ಪಿ. ವೀಣಾ ಮಹಾಂತೇಶ್
ರಾಜ್ಯ ಸಂಚಾಲಕಿ ಶಕ್ತಿ ಅಭಿಯಾನ.



More Stories
ಸಂಡೂರಿನ ನಾನಾವಟೆ ಕಾಲೇಜು ಸಾಧನೆ: ರಾಜ್ಯಕ್ಕೆ 5 ಮತ್ತು 7ನೇ ರ್ಯಾಂಕ್
ಸಂಡೂರು ನಾನಾವಟೆ ಕಾಲೇಜ್: ಪಿಯು ರ್ಯಾಂಕ್ ವಿಜೇತರಿಗೆ ಸನ್ಮಾನ
ರೈತ ಪುತ್ರಿಯರು ರಾಜ್ಯಕ್ಕೆ ಟಾಪರ್: ಪಿಯು ಕಲಾ ವಿಭಾಗದ ಇಬ್ಬರು ವಿದ್ಯಾರ್ಥಿನಿಯರಿಗೆ 598 ಅಂಕ