https://youtu.be/NHc6OMSu0K4?si=SI_K4goOPEgwo6h2



ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ

ಹಂಪಿ ಟೈಮ್ಸ್ ಹೊಸಪೇಟೆ:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆ ಅ.1 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ವಾಸ್ತವ ಮತ್ತು ವರ್ಚುವಲ್ ಸಭೆಯನ್ನು ಕೊಪ್ಪಳದ ಸಿಂಧೋಗಿ ರಸ್ತೆ, ಗೋಶಾಳೆ ಬಳಿ ಇರುವ ಮಹಾವೀರ ಸಮುದಾಯ ಭವನದಲ್ಲಿ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ವಿಜಯನಗರ ಜಿಲ್ಲಾ ಅಧ್ಯಕ್ಷ ಜಿ, ಮಲ್ಲಿಕಾರ್ಜುನ ಗೌಡ, ಪ್ರಧಾನ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉದ್ದೇಶಿತ ಬೈಲಾದ ಉಪವಿಧಿಗಳ ತಿದ್ದುಪಡಿಯ ಕರಡು ಮಂಡನೆ ಮಾಡಿ ಸರ್ವ ಸದಸ್ಯರ ಮಹಾಸಭೆಯ ಅನುಮೋದನೆ ಪಡೆದು ಕಾರ್ಯರೂಪಕ್ಕೆ ತರಬೇಕಿದೆ. ಈಗಾಗಲೇ ಸರ್ವ ಸದಸ್ಯರಿಗೆ ಪತ್ರಿಕಾ ಪ್ರಕಟಣೆ, ಸಾಮಾಜಿಕ ಜಾಲತಾಣ ಹಾಗೂ ನೋಟಿಸ್ ಗಳ ಮೂಲಕ ಗಮನಕ್ಕೆ ತರಲಾಗಿದೆ.
ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರು ಸದರಿ ಸಭೆಯಲ್ಲಿ ವಾಸ್ತವ/ವರ್ಚುವಲ್ ಮೂಲಕ ಸಭೆಗೆ ಹೊಸಪೇಟೆ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕು ಶಾಖೆಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.


More Stories
ಭಾವಯಾನ
ಅನಂತ್ನಾಗ್ಗೆ ಫಾಲ್ಕೆ ಗೌರವ ಸಮರ್ಪಣೆ
ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ