May 25, 2026

Hampi times

Kannada News Portal from Vijayanagara

ಒರಟುತನ ಬಿಟ್ಟಾಗ ವಜ್ರದಂತಾಗಲು ಸಾಧ್ಯ : ಡಾ.ಅಕ್ಕಾ ಅನ್ನಪೂರ್ಣಾ

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:

ಎಲ್ಲರಲ್ಲೂ ಒಳಿತು ಕೆಡುಕು ಇರುತ್ತದೆ. ಒಂದಂಶ ಸದ್ಗುಣವಿದ್ದರೆ ಅದನ್ನೇ ವಿಸ್ತರಿಸಿ ನೋಡುವ ಗುಣ ಬೆಳೆಸಿಕೊಂಡಾಗ ಜಗದಲ್ಲಿ ಹುಡುಕಿದರೂ ಕೆಟ್ಟವರು ಕಾಣುವುದಿಲ್ಲ ಎಂದು ಬೀದರ್ ನ ಲಿಂಗಾಯತ ಮಹಾಮಠ ಬಸವ ಸೇವಾ ಪ್ರತಿಷ್ಠಾನದ ಡಾ.ಅಕ್ಕ ಅನ್ನಪೂರ್ಣ ತಾಯಿ ಹೇಳಿದರು.

 

ನಗರದ ಬಸವೇಶ್ವರ ಬಡಾವಣೆ ಬಸವ ಉದ್ಯಾನವನದಲ್ಲಿ ಬಸವ ಬಳಗ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಜೀವನ‌ ದರ್ಶನ ಪ್ರವಚನಲ್ಲಿ ಮಾತನಾಡಿದರು. ಕಲ್ಲು ಒರಟಾಗಿರುತ್ತದೆ. ಒರಟುತನ ಕಳೆದುಕೊಂಡ ಕಲ್ಲು ವಜ್ರವಾಗುತ್ತದೆ. ನಮ್ಮೊಳಗಿನ ತಪ್ಪು, ದುರಾಲೋಚನೆಗಳನ್ನು ಕಿತ್ತೊಗೆಯಬೇಕು. ಮತ್ತೊಬ್ಬರಲ್ಲಿ ತಪ್ಪುಗಳನ್ನು ಹುಡುಕಬಾರದು. ತಿಳಿಯದೆ ಮಾಡಿದ ತಪ್ಪುಗಳನ್ನು ಮನ್ನಿಸಬೇಕು. ತಪ್ಪುಗಳನ್ನೆ ದೊಡ್ಡದಾಗಿ ಬಿಂಬಿಸಬಾರದು. ಎಲ್ಲರಲ್ಲೂ ಒಳಿತು ಕಾಣುವವರು ಮಹಾತ್ಮರಾಗುತ್ತಾರೆ.

ಏ.23 ರವರೆಗೆ ನಿತ್ಯ ಸಂಜೆ 7 ರಿಂದ 8 ಗಂಟೆವರೆಗೆ ಬಸವೇಶ್ವರ ಬಡಾವಣೆಯಲ್ಲಿ ಪ್ರವಚನ ಜರುಗುತ್ತದೆ. ಒತ್ತಡಗಳ ಮುಕ್ತಿಗೆ ಪ್ರವಚನ ಸಹಕಾರಿ. ಸಮಯದ ಅಭಾವ, ಒತ್ತಡದ ಬದುಕಿನ ನಡುವೆ ಅಲ್ಪ ಸಮಯವಾದರೂ ಒಳಿತು ಕೇಳಲು ಮೀಸಲಿಡಬೇಕು ಎಂದರು. ಬಾಲಕಿ ಕದಳಿ‌ ವಚನಗಾಯನಕ್ಕೆ ನೃತ್ಯ ಪ್ರಸ್ತುತ ಪಡಿಸಿದರು. ನೂರಾರು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರು ಇದ್ದರು.

Please follow and like us:

 

 

 

 

 

Translate »
[t4b-ticker]
error: Content is protected !!