https://youtu.be/NHc6OMSu0K4?si=SI_K4goOPEgwo6h2



ಹಂಪಿ ಟೈಮ್ಸ್ ಹೊಸಪೇಟೆ:
ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತಿದ್ದ 20 ತೊಲ ಚಿನ್ನ ಮತ್ತು 80 ಸಾವಿರ ರೂ ನಗದನ್ನು ನಗರದ ಹೊರವಲಯದ ಟಿಬಿಡ್ಯಾಂ ಸಮೀಪದ ಗಣೇಶಗುಡಿ ಚಕ್‌ಪೋಸ್ಟ್ನಲ್ಲಿ ಭಾನುವಾರ ಮಂತ್ರಾಲಯದಿAದ ಬೆಂಗಳೂರಿನತ್ತ ಹೊರಟಿದ್ದ ಕಾರನ್ನು ಪೊಲೀಸರು ಪರಿಶೀಲಿಸಿದಾಗ ಚಿನ್ನಾಭರಣ ನಗದು ದೊರೆತಿದ್ದು, ದಾಖಲೆ ಇಲ್ಲದ್ದರಿಂದ ಪೋಲಿಸರು ವಶಕ್ಕೆ ಪಡೆದಿದ್ದು ಇದರ ಅಂದಾಜು ಮೌಲ್ಯ 11 ಲಕ್ಷ ರೂ ಎಂದು ಅಂದಾಜಿಸಲಾಗಿದೆ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದ್ದು, ಚೆಕ್‌ಪೋಸ್ಟ್ಗಳಲ್ಲಿ ತೀವ್ರ ನಿಗಾವಹಿಸಲಾಗುತ್ತಿದೆ. ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದೆ.ಹೊಸಪೇಟೆ ತಾಲ್ಲೂಕಿನ ಭುವನಹಳ್ಳಿ ಚೆಕ್ ಪೋಸ್ಟ್ನಲ್ಲಿ ಬಳ್ಳಾರಿಯಿಂದ ಹುಬ್ಬಳ್ಳಿ ಕಡೆಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 4 ಲಕ್ಷ ರೂ. ಹಣ ಹಾಗೂ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಚೆಕ್‌ಪೋಸ್ಟ್ನಲ್ಲಿ ಹಿರೇಕೆರೂರಿನಿಂದ ಮಾಗಳಕ್ಕೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡು ಗ್ರಾಮೀಣ ಪೊಲೀಸ್ ಠಾಣೆ ಮತ್ತು ಹಿರೇಹಡಗಲಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಟಿಬಿಡ್ಯಾಂ ವೃತ್ತ ಪಿಎಸ್‌ಐ ಸುಪ್ರೀತ್ ಮತ್ತು ತಂಡ ಟಿಬಿಡ್ಯಾಂ ಸಮೀಪದ ಗಣೇಶುಗುಡಿ ಚಕ್‌ಪೋಸ್ಟ್ ನಲ್ಲಿ ಕಾರನ್ನು ಪರಿಶೀಲಿಸಿ ದಾಖಲೆ ಇಲ್ಲದೆ ಅಂದಾಜು 11 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ನಗದು ವಶಕ್ಕೆ ಪಡೆದರು.


More Stories
ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಶಿಕ್ಷಕರ ಮೂಲಭೂತ ಕರ್ತವ್ಯ
ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ