https://youtu.be/NHc6OMSu0K4?si=SI_K4goOPEgwo6h2

ನೀರುಪಾಲಾದ ಮೂವರು ವಿದ್ಯಾರ್ಥಿಗಳು, ಮುಗಿಲುಮುಟ್ಡಿದ ಪಾಲಕರ ಆಕ್ರಂದನ, ಮುಂದುವರೆದ ಶೋಧ ಕಾರ್ಯ
ಹಂಪಿ ಟೈಮ್ಸ್ ಹೊಸಪೇಟೆ:
ನಗರದ ಸಾಯಿಬಾಬ ಗುಡಿ ಬಳಿ ಹಾದುಹೋಗಿರುವ
ಎಚ್ ಎಲ್ ಸಿ ಕಾಲುವೆಯಲ್ಲಿ ಶನಿವಾರ ಮಧ್ಯಾಹ್ನ ಈಜಾಡಲು ಧುಮುಕಿದ್ದ ಅರು ಹುಡುಗರ ಪೈಕಿ ಮೂವರು ನೀರುಪಾಲಾಗಿದ್ದಾರೆ.

ನಗರದ ವಿಜಯನಗರ ಕಾಲೇಜಿನಲ್ಲಿ ಪಿಯುಸಿಯಲ್ಲಿ ಓದುತ್ತಿದ್ದ ಕೊಪ್ಪಳ ಜಿಲ್ಲೆಯ ಯಶ್ವಂತ, ಹೊಸಪೇಟೆ ತಾಲೂಕು ಗುಂಡಾ ಗ್ರಾಮದ ಗುರುರಾಜ, ಪದವಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ ಹೊಸಪೇಟೆಯ ಅಂಜಿನಿ ನೀರುಪಾಲಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ಹುಡುಗರ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಶ್ರೀಹರಿಬಾಬು ತಿಳಿಸಿದ್ದಾರೆ.
ಕಣ್ಮರೆಯಾದ ವಿದ್ಯಾರ್ಥಿಗಳ ಪಾಲಕರು, ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಡಿದೆ. ಚಿಲಕನಹಟ್ಟಿ ನವೀನ್, ಬಿ.ಹೊಸಹಳ್ಳಿ ಯ ಗೋಪಿನಾಥ, ಹೊಸಪೇಟೆ ಶ್ರೀವಲ್ಲಭಪಾ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು




More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್, ಕೋಟ್ಯಂತರ ರೂಪಾಯಿ ರಾಜಸ್ವ ಸಂಗ್ರಹ : ಅಬಕಾರಿ ನಿರೀಕ್ಷಕಿ ಎಸ್.ಬಿ.ಮಮತಾ