https://youtu.be/NHc6OMSu0K4?si=SI_K4goOPEgwo6h2

ರಾಮನಗರ ಎಂಬ ಗ್ರಾಮದಲ್ಲಿ ಸುರೇಶ ಎಂಬ ಒಬ್ಬ ಹುಡುಗ ಇದ್ದನು. ಅವನು ೧೦ನೇ ತರಗತಿ ಓದುತ್ತಿದ್ದ. ಮನೆಯಲ್ಲಿ ಬಹಳ ಕಷ್ಟ ಇದ್ದರೂ ಚೆನ್ನಾಗಿ ಓದುವ ಆಸೆ ಇತ್ತು. ಮುಂದೆ ಪೊಲೀಸ್ ಆಗಬೇಕೆಂಬ ಆಸೆ ಅವನದ್ದಾಗಿತ್ತು. ೧೦ನೇ ತರಗತಿ ಮುಗಿಸಿ ಫಸ್ಟ್ ಪಿಯುಸಿ ಸೇರಿದನು. ಪಿಯುಸಿ ಓದುತ್ತಲೇ ಪೊಲೀಸ್ ಕೆಲಸಕ್ಕೆ ಬೇಕಾದ ಅಂಶಗಳನ್ನು ತಿಳಿದುಕೊಂಡನು. ಮನೆಯಲ್ಲಿನ ಕಷ್ಟದ ಪರಿಸ್ಥಿತಿಯಿಂದಾಗಿ ಸೆಕೆಂಡ್ ಪಿಯುಸಿ ಓದುವಾಗ ಅವನಿಗೆ ಬಹಳ ಕಷ್ಟವಾಯಿತು. ಸೆಕೆಂಡ್ ಪಿಯುಸಿ ಮುಗಿಯುತ್ತಲೇ ಪೊಲೀಸ್ ಕೆಲಸಕ್ಕೆ ಅರ್ಜಿ ಹಾಕಿದನು.
ಕಾಲೇಜು ಮುಗಿದಿದ್ದರಿಂದ ಸುರೇಶನು ಹಗಲಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ರಾತ್ರಿಯಲ್ಲಿ ಪೊಲೀಸ್ ಪರೀಕ್ಷೆಗೆ ಓದುತ್ತಿದ್ದ. ಸ್ವಲ್ಪ ದಿನದ ನಂತರ ಅವನು ಪೊಲೀಸ್ ಪರೀಕ್ಷೆ ಬರೆದನು. ಕಷ್ಟದ ದಿನಗಳನ್ನು ನೆನೆದು ಪರೀಕ್ಷೆ ಬರೆದ. ಒಂದು ತಿಂಗಳ ನಂತರ ಫಲಿತಾಂಶ ಬಂತು. ಆನ್‌ಲೈನ್ ಸೆಂಟರ್‌ಗೆ ಹೋಗಿ ಫಲಿತಾಂಶ ಪರಿಶೀಲಿಸಿದ. ಸುರೇಶನು ೯೯% ಅಂಕಗಳೊಂದಿಗೆ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದ.
ಮನೆಗೆ ಖುಷಿಯಿಂದ ಬಂದು ಅಪ್ಪ-ಅಮ್ಮನಿಗೆ ವಿಷಯ ತಿಳಿಸಿದ. ಅವರು ತುಂಬಾ ಸಂತೋಷಪಟ್ಟರು. ಮರುದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ‘ದೇವಸ್ಥಾನಕ್ಕೆ ಹೋಗಿ ಬಾ’ ಎಂದಳು ಅಮ್ಮ. ‘ಯಾವ ದೇವಸ್ಥಾನಕ್ಕೆ?’ ಎಂದ. ‘ಈಶ್ವರ ದೇವಸ್ಥಾನಕ್ಕೆ ಹೋಗಿ ಬಾ’ ಎಂದಳು ಅಮ್ಮ. ‘ಅಮ್ಮ, ನನ್ನ ಪಾಲಿನ ದೇವಸ್ಥಾನ ಎಂದರೆ ಶಾಲೆ. ನನ್ನ ಪಾಲಿನ ಮೊದಲ ದೇವರು ನೀನು ಮತ್ತು ಅಪ್ಪ.

ನಂತರದ ದೇವರು ನನ್ನ ವಿದ್ಯಾ ಗುರುಗಳು. ಶಾಲೆ ಮತ್ತು ನಿಮ್ಮೆಲ್ಲರ ಆಶೀರ್ವಾದ ನನಗೆ ಸಿಕ್ಕಿದೆ’ ಎಂದ ಸುರೇಶ. ಅವನ ಮಾತು ಕೇಳಿ ತಂದೆ-ತಾಯಿಯ ಕಣ್ಣಂಚಿನಲ್ಲಿ ಆನಂದಭಾಷ್ಪ ಮೂಡಿಬಂತು. ‘ನಿನಗೆ ಯಾವುದು ಸರಿ ಎನಿಸುತ್ತದೆಯೋ ಹಾಗೆ ಮಾಡು’ ಎಂದರು. ಅವನು ತಂದೆ-ತಾಯಿ ಹಾಗೂ ಗುರುಗಳ ಆಶೀರ್ವಾದ ಪಡೆದು ಕೆಲಸಕ್ಕೆ ಹಾಜರಾದ.
ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದ. ಅದಕ್ಕಾಗಿ ಕೆಲವೇ ವರ್ಷಗಳಲ್ಲಿ ಉತ್ತಮ ಪೊಲೀಸ್ ಎನಿಸಿಕೊಂಡ. ನಂತರದ ವರ್ಷಗಳಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನನಾದ. ಪ್ರಶಸ್ತಿ ಸ್ವೀಕರಿಸಿದ ನಂತರ ಊರಿಗೆ ಬಂದಾಗ ಊರಿನಲ್ಲಿ ಅದ್ದೂರಿಯ ಮೆರವಣಿಗೆ ಮಾಡಿದರು. ಇದನ್ನು ನೋಡಿದ ತಂದೆ-ತಾಯಿಗಳು ತುಂಬಾ ಖುಷಿಪಟ್ಟರು. ಮೆರವಣಿಗೆಯ ವೇಳೆ ಗುರುಗಳ ಮನೆಗೆ ಹೋಗಿ ಅವರ ಆಶೀರ್ವಾದ ಪಡೆದ. ಇದು ಎಲ್ಲರಿಗೂ ಮಾದರಿಯಾಯಿತು. ಎಲ್ಲರೂ ಸುರೇಶನನ್ನು ಹೊಗಳಿದರು. ಊರಿನ ಮೆಚ್ಚಿನ ಮಗನಾದ. ನಾಡಿಗೆ ಮೆಚ್ಚಿನ ಪೊಲೀಸ್ ಆದ.
ಧನಂಜಯ ಯು. ೯ನೇ ತರಗತಿ, ಸರ್ಕಾರಿ ಪ್ರೌಢಶಾಲೆ ಬಸರಕೋಡು. ಹಗರಿಬೊಮ್ಮನಹಳ್ಳಿ(ತಾ) 



More Stories
ಸಮಾಜ ಸೇವೆಯೇ ನಿಜವಾದ ಭಕ್ತಿ: ಪ್ರಧಾನಿ ಮೋದಿ
ಪತ್ರಿಕೆ ಕೇವಲ ಹಾಳೆಯಲ್ಲ, ಜಗತ್ತು ನೋಡುವ ಕಿಟಕಿ: ಗೌನಹಳ್ಳಿ ಗೋವಿಂದಪ್ಪ
ಇಸ್ರೋ ಗಗನ್ಯಾನ್ ಪರೀಕ್ಷೆ ಯಶಸ್ವಿ