https://youtu.be/NHc6OMSu0K4?si=SI_K4goOPEgwo6h2



ಹಂಪಿ ಟೈಮ್ಸ್ ಹೊಸಪೇಟೆ
ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಶುಕ್ರವಾರ ಕನ್ನಡ ವಿವಿ ನಾಡೋಜ ಪದವಿ ಪ್ರದಾನಕ್ಕೂ ಮುನ್ನ ಹಂಪಿಯಲ್ಲಿರುವ ಐತಿಹಾಸಿಕ ಸುಗ್ರೀವ ಗುಹೆಗೆ ಭೇಟಿ ನೀಡಿ ವೀಕ್ಷಿಸಿ, ಮಾರ್ಗದರ್ಶಕರಿಂದ ಈ ಸ್ಥಳದ ಐತಿಹಾಸಿಕ ಮಹತ್ವ ಕುರಿತು ಮಾಹಿತಿ ಪಡೆದರು.

ರಾಜ್ಯಪಾಲರೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಇದ್ದರು.
ರಾಮಾಯಣದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವ ಮತ್ತು ಕರ್ನಾಟಕದ ಅಮೂಲ್ಯ ಪರಂಪರೆಯ ಹೆಗ್ಗುರುತಾಗಿರುವ ಈ ಸ್ಥಳದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಾಹಿತಿಯನ್ನು ಪಡೆದರು.
ರಾಜ್ಯಪಾಲರು ಹಂಪಿಗೆ ಆಗಮಿಸುವ ಮುನ್ನ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಕೂಡ್ಲಿಗಿ ತಾಲೂಕಿನ ಆಲೂರಿನ ಬಳಿ ರಾಜ್ಯಪಾಲರಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.



More Stories
ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಶಿಕ್ಷಕರ ಮೂಲಭೂತ ಕರ್ತವ್ಯ
ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ