April 4, 2026

Hampi times

Kannada News Portal from Vijayanagara

ಡಾ. ಪುನೀತ್ ರಾಜಕುಮಾರ್ ಅವರ ಆಸ್ತಿ ಏನು ಗೊತ್ತೇ? : ನಂದಿನಿ ಸನಬಾಳ್ 

https://youtu.be/NHc6OMSu0K4?si=SI_K4goOPEgwo6h2

ರಾಜಕುಮಾರ ಯಾವತ್ತೂ ರಾಜಕುಮಾರನೆ

ಇವತ್ತಿಗೂ ಪಡ್ಡೆ ಹುಡುಗರು “ಹೇ ಪಾರೊ” ಎಂದು ಹುಡುಗಿಯರನ್ನು ಚುಡಾಯಿಸಿದಾಗ, ಪುನಿತ್ ರಾಜ್ ಕುಮಾರ್ ಹಾಡು ಕೇಳಿ ಖುಷಿ ಪಟ್ಟು,ನಂತರ ಅವರ ಸ್ಯಸ್ತಿ ಮಾಡುತ್ತಾರೆ.
ವಂಶಿ ಚಲನಚಿತ್ರದಲ್ಲಿ ಅಪ್ಪುವಿನ ಅಭಿನಯ ನೋಡಿದ ಪ್ರತಿಯೊಬ್ಬರೂ ತಮ್ಮ ತಾಯಿಗೆ ಗೌರವಿಸುವುದನ್ನು ಕಲಿತ್ತಿದ್ದಾರೆ, ಡೈವರ್ಸ್ ಗೆ ಅಪ್ಲೈ ಮಾಡಿದ ಅನೇಕ ಜೋಡಿಗಳು ಇವರ “ಮಿಲನ” ಚಲನಚಿತ್ರ ನೋಡಿ ಒಂದಾಗಿದ್ದು ಉದಾಹರಣೆಗಳಿವೆ.
“ದೊಡ್ಮನೆ ಹುಡುಗ” ಚಿತ್ರ ನೋಡಿದಾಗ ಕುಟುಂಬದ ಹಿರಿಯರನ್ನ ಗೌರವಿಸುವ ಗುಣ ನಮ್ಮ ಯುವಕರು ಕಲಿತ್ತಿದ್ದು ಉಂಟು. ಇವರ” ಅಪ್ಪು” ಸಿನಿಮಾ ಪ್ರೀತಿಗೆ ಯಾವುದೆ ಅಂತಸ್ತಿನ ಅಗತ್ಯ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.

ಡಾ. ಪುನೀತ್ ರಾಜಕುಮಾರ್ ಮಾರ್ಚ್ 17 .1975 ರಲ್ಲಿ ಡಾ. ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ ಅವರ ಪುತ್ರನಾಗಿ ಜನಿಸಿದರು . ಡಾ.ಪುನೀತ್ ರಾಜಕುಮಾರ ಮಕ್ಕಳಿಂದ ಹಿರಿಯರವರೆಗೂ ಎಲ್ಲರ ಅಚ್ಚುಮೆಚ್ಚಿನ ನಟನಾಗಿದ್ದರು. ಸಾಮಾನ್ಯವಾಗಿ ಎಲ್ಲರೂ ನಟರಾಗಿರುತ್ತಾರೆ, ಆದರೆ ಪುನೀತ್ ರಾಜಕುಮಾರ್ ಒಬ್ಬ ಪವರ್ ಸ್ಟಾರ್ ಆಗಿದ್ದರು. ಪವರ್ ಸ್ಟಾರ್ ಅದರ ಅರ್ಥ ಆತನ ಕುಟುಂಬದಿಂದ ಬಂದದ್ದಲ್ಲ, ಅಮೋಘ ಅಭಿನಯ, ಸಾಹಸದಿಂದ ಬಂದಿದ್ದು, ಪವರ್ ಫುಲ್ ಡಾನ್ಸ್, ಹಾಗೂ ಪುನೀತನಲ್ಲಿರುವ ವಿಶಾಲವಾದ ಮನೋಭಾವ ದಿಂದ ಬಂದಿದ್ದು. ಪುನೀತ್ ಬಗ್ಗೆ ಎಷ್ಟು ಹೊಗಳಿದರು ಕಡಿಮೆಯೆ, ಯಾಕೆಂದರೆ ಇವರದು ಅಪರೂಪದ ವ್ಯಕ್ತಿತ್ವ . ಸ್ಟಾರ್ ನಟನ ಮಗನಾಗಿ ಹುಟ್ಟಿದರು ಕೂಡ ತಂದೆಯ ಹೆಸರನ್ನು ಬಳಕೆ ಮಾಡದೇ ತಾನು ಏನಾದರೂ ಸಾಧಿಸುವ ಛಲ ಹೊಂದಿದ ವ್ಯಕ್ತಿ.

ಬಾಲ ನಟನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಅಪ್ಪನೊಂದಿಗೆ, ಅಮೋಘ ನಟನೆಯಿಂದ ಗುರುತಿಸಿಕೊಂಡ ಪುನೀತ್ ರಾಜಕುಮಾರ್ ಗೆ ಬಾಲ್ಯದಲ್ಲಿ 1985 ರಲ್ಲಿ ನಟಿಸಿದ “ಬೆಟ್ಟದ ಹೂವು” ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ದೊರಕಿದೆ, ತಂದೆಯಿಂದ ಕೊಡುಗೆಯಾಗಿ ಬಂದಂತಹ ಅಭಿನಯ ರಕ್ತಗತವಾಗಿದ್ದರೂ ಕೂಡ, ಸಿನಿಮಾದಲ್ಲಿ ನಟಿಸುವ ಆಸೆ ಇವರಿಗೆ ಇರಲಿಲ್ಲ, ಡಾಕ್ಟರ್ ರಾಜಕುಮಾರ್ ಅವರು ಕೂಡ ಅಷ್ಟೇ , ಮಗನ ಆಸೆ ಹೇಗಿದೆ ಅವನು ಹಾಗೆ ಬದುಕಲಿ ಎಂದು ಹೇಳಿದವರು.
ನಾನು ಏನಾದರೂ ಸಾಧನೆ ಮಾಡಬೇಕು ತನ್ನದೇ ಒಂದು ಕೆಲಸ ಕಾರ್ಯಗಳಿಂದ ಗುರುತಿಸಿಕೊಳ್ಳಬೇಕು ಎಂಬ ಛಲ ಹೊಂದಿರುವ ಪುನೀತ್ ರಾಜಕುಮಾರ್ ಅವರು ಅನೇಕ ಬಿಜಿನೆಸ್ ಗಳಲ್ಲಿ ಕೈ ಹಾಕಿ ಕೈ ಸುಟ್ಟಿಕೊಂಡರು. ವೀರಪ್ಪನ್ ಡಾಕ್ಟರ್ ರಾಜಕುಮಾರ್ ಅವರನ್ನು ಅಪಹರಿಸಿದ ಆ ಸಂದರ್ಭದಲ್ಲಿ ಡಾ. ರಾಜ ಕುಮಾರ್ ಅವರನ್ನು ಸಂದರ್ಶನ ಮಾಡಲು ಹೋದ ನಕಿರನ್ ಗೋಪಾಲ ವರದಿಗಾರರಿಗೆ ಹೇಳಿದರಂತೆ, ನಾನು ಬದುಕುತ್ತೇನೆ ಇಲ್ಲವೋ ಗೊತ್ತಿಲ್ಲ, ಆದರೆ ನನ್ನ ಮಗ ಅಪ್ಪುವನ್ನು ಒಬ್ಬ ಹೀರೋ, ಯಶಸ್ವಿ ನಾಯಕ ನಟನಾಗಿ ನೋಡುವ ಆಸೆ ಇದೆ ಎಂದು ಹೇಳಿದರಂತೆ. ಅಪ್ಪನ ಆಸೆಯಂತೆ ಮತ್ತೆ ಚಿತ್ರರಂಗಕ್ಕೆ ಡಾ.ಪುನೀತ್ ರಾಜಕುಮಾರ್ “ಅಪ್ಪು” ಚಿತ್ರದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿದರು. ಅಪ್ಪು ತನ್ನ ಅಮೋಘ ಅಭಿನಯದಿಂದ ಕನ್ನಡದ ಮನೆ ಮನಗಳಲ್ಲೂ ತನ್ನ ಛಾಪು ಮೂಡಿಸಿದರು. ಒಂದಾದ ನಂತರ ಒಂದು ವಿವಿಧ ಕಥೆಗಳನ್ನು ಹೊಂದಿರುವ ಹಿಟ್ ಚಿತ್ರಗಳನ್ನು ನೀಡಿದ ಅಪ್ಪು ಅಭಿಮಾನಿಗಳ ಪಾಲಿನ ದೇವರಾದರು.

ಅಪ್ಪು ಯುವಕರ ಕಣ್ಮಣಿ, ಪವರ್ ಸ್ಟಾರ್ ಎಂಬ ಪಟ್ಟ ಹೊಂದಿದರು. ಅಪ್ಪುವಿನ ಸ್ಟೈಲ್, ಡಾನ್ಸ್ ಸ್ಮೈಲ್ ಆಕ್ಟಿಂಗ ಯುವಕರಲ್ಲಿ ಕ್ರೇಜ ಹುಟ್ಟಿಸಿತು. ಯಾವ ಪಾತ್ರವಾದರೂ ಸರಿ ಅದಕ್ಕೆ ಜೀವ ತುಂಬುತ್ತಿದ್ದರು. ಸ್ಟಾರ್ ನಟನ ಮಗನಾಗಿದ್ದರೂ ಕೂಡ ಯಾವುದೇ ರೀತಿಯ ಅಹಂಕಾರವಿಲ್ಲದೆ ಸರಳ ಜೀವನ ಮಾಡುತ್ತಿದ್ದ ಅಪ್ಪು ಎಲ್ಲಾ ವಯಸ್ಸಿನವರ ಅಚ್ಚುಮೆಚ್ಚಿನ ನಾಯಕನಟನಾಗಿದ್ದ. ಪುನೀತ್ ಅವರ ವಿಶೇಷತೆ ಬಗ್ಗೆ ಹೇಳುವುದಾದರೆ ಅನೇಕ ರೋಚಕ ಸಂಗತಿಗಳನ್ನು ಕೇಳಿದ್ದೇವೆ, ಅನೇಕ ನಾಯಕ ನಟರು ಜಾಹೀರಾತಿನ ನಟನೆಯ ವೆಚ್ಚ ಕೇಳಿದರೆ ಬೆರಗಾಗುತ್ತೇವೆ, ಆದರೆ ಡಾ. ಪುನೀತ್ ರಾಜಕುಮಾರ್ ಒಬ್ಬ ಶ್ರೇಷ್ಠ ಹಾಗೂ ಬೇಡಿಕೆ ನಟನಾಗಿದ್ದರು ಕೂಡ ಯಾವುದೇ ಸಂಭಾವನೆ ಪಡೆಯದೆ ಸರಕಾರದ ಜಾಹಿರಾತುಗಳಲ್ಲಿ ಮುಕ್ತವಾಗಿ ಅಭಿನಯಿಸುತ್ತಿದ್ದರು.

ಇವರು ನಡೆಸುತ್ತಿದ್ದ ಖಾಸಗಿ ಕಾರ್ಯಕ್ರಮದಿಂದ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ತಿಳಿದು ಬಂದಾಗ, ಯಾವುದೇ ರೀತಿಯ ವಿವಾದ ಮಾಡದೆ ಅದನ್ನು ಸ್ಥಗಿತಗೊಳಿಸಿದರು. ಸಾಮಾನ್ಯವಾಗಿ ಸ್ಟಾರ್ ನಟರ ಆಸ್ತಿ ಲೆಕ್ಕಾಚಾರ ಕೇಳಿದಾಗ ನಾವು ಆಶ್ಚರ್ಯಗೊಳ್ಳುವುದು ಸಾಮಾನ್ಯ. ದೇಶ ವಿದೇಶಗಳಲ್ಲಿ ಹತ್ತಾರು ಬಂಗಲೆಗಳು, ದುಬಾರಿ ಬೆಲೆ ಬಾಳುವ ಕಾರುಗಳು, ದೊಡ್ಡ ದೊಡ್ಡ ಕಂಪನಿಗಳಲ್ಲಿ ಶೇರ್ ಹೊಂದಿರುವುದು, ದೊಡ್ಡ ದೊಡ್ಡ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿರುವು ಸರ್ವೇಸಾಮಾನ್ಯ. ಆದರೆ ಪುನೀತ್ ರಾಜಕುಮಾರ್ ಅವರು ಕೇವಲ ಅರ್ಥಪೂರ್ಣವಾದ ಜಾಹಿರಾತುಗಳನ್ನು ಮಾತ್ರ ಮಾಡುತ್ತಿದ್ದರು. ಹಣಕ್ಕೆ ಯಾವತ್ತಿಗೂ ಬೆಲೆ ಕೊಡದ ಅಸ್ತಿತ್ವ ಇವರದಾಗಿತ್ತು. ಎಷ್ಟೋ ಸ್ಟಾರ್ ನಟರು ಇವತ್ತಿಗೂ ಕೂಡ ಬೇಡವಾದ ಅನೇಕ ಜಾಹಿರಾತುಗಳಲ್ಲಿ ನಟನೆ ಮಾಡಿ ಜಾಹಿರಾತುಗಳಲ್ಲಿ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ, ಆದರೆ ಪುನೀತ್ ಅವರ ಮಾತೇ ಬೇರೆ, ಅಗತ್ಯ ಇರುವ ಹಾಗೂ ಬೇಡಿಕೆಯ ಜಾಹೀರಾತುಗಳಲ್ಲಿ ಮಾತ್ರ ನಟಿಸುತ್ತಿದ್ದರು.

 

ನಮ್ಮ ಪುನೀತ್ ಅವರ ಆಸ್ತಿ ಏನು ಗೊತ್ತೇ?

40 ಅನಾಥಾಲಯಗಳು
19 ಗೋ ಶಾಲೆಗಳು
16 ವೃದ್ಧಾಶ್ರಮಗಳು
26 ಅನಾಥಾಶ್ರಮಗಳು
ಅಲ್ಲದೆ 1800 ಅನಾಥ ಹೆಣ್ಣು ಮಕ್ಕಳಿಗೆ ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತಿಕೊಂಡವರು.

ಒಂದು ಕೈಯಿಂದ ಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಿರದೆ ಮಾಡಿದ ಇವರ ಚಾರಿಟಿ ಸೇವೆ ಕುಟುಂಬದವರಿಗೂ , ಆಪ್ತ ಗೆಳೆಯರಿಗೂ ಕೂಡ ಗೊತ್ತಿರದೆ ಇರುವ ವಿಷಯಗಳು ಇವರ ಸಾವಿನ ನಂತರ ಗೊತ್ತಾಗಿದೆ. ಪ್ರಧಾನಮಂತ್ರಿಯ ರಾಹತ್ ಯೋಜನೆಗೆ 50 ಲಕ್ಷ ದಾನ ನೀಡಿದ ಮಹಾದಾನಿ. ಅನೇಕ ಕಾರ್ಯಕ್ರಮಗಳಲ್ಲಿ ತನ್ನ ಸುಮಧುರ ಕಂಠದಿಂದ ಹಾಡಿ ಪಡೆಯುತ್ತಿದ್ದ ಸಂಭಾವನೆಗಳನ್ನು ಅನಾಥಾಶ್ರಮಗಳಿಗೆ ಬಳಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಒಬ್ಬ ನಟರನ್ನು ನಾವು ಮಾತನಾಡಿಸಬೇಕಾದರೆ ತಿಂಗಳುಗಟ್ಟಲೆ ಪ್ರಯತ್ನ ಪಡಬೇಕು, ಅದಾದ ನಂತರ ಸಂಭಾವನೆ ಕೂಡ ಭರಿಸಬೇಕು, ಆದರೆ ಅಪ್ಪು ಹಾಗಲ್ಲ ಅಭಿಮಾನಿಗಳನ್ನು ದೇವರು ಎಂದ ಮಹಾನುಭಾವ. ಇವರ ಹೃದಯವಂತಿಕೆ, ಸರಳತೆ, ಪ್ರಾಮಾಣಿಕ ಸೇವೆ,ಅಮೋಘ ನಟನೆ ಇವರನ್ನು ಕರ್ನಾಟಕದ ಮನೆ ಮನೆಯಲ್ಲಿ ಪೂಜೆಸುವಂತಾಗಿದೆ.

ತನ್ನೊಂದಿಗೆ ಇರುವ ಅನೇಕ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಚಲನಚಿತ್ರಗಳಲ್ಲಿ ಅವಕಾಶ ಮಾಡಿಕೊಟ್ಟರು, ತನ್ನೊಂದಿಗೆ ಇರುವ ಇತರ ನಟರೊಂದಿಗೆ ಸರಳವಾಗಿ ಮಾತನಾಡುತ್ತಿದ್ದರು, ಅವರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದರು. ನಿರ್ಮಾಪಕ ನಿರ್ದೇಶಕರಿಗೆ ನಷ್ಟ ಆಗುವ ಸಾಧ್ಯತೆ ಇರುವಾಗ ತನ್ನ ತನ್ನ ಸಂಭಾವನೆಯ ಹಣದಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದರು. ಯಾವುದೇ ಅಹಂ ಇಲ್ಲದೆ ಕಿರಿಯರನ್ನು ಮಾರ್ಗದರ್ಶಿಸುವುದು ಹಿರಿಯರನ್ನು ಗೌರವಿಸುವುದು ಅಪ್ಪುವಿನ ಸ್ವಭಾವವಾಗಿತ್ತು. ಕೇವಲ ನಟನಾಗಿರದೆ, ಗಾಯಕನಾಗಿ , ನಿರ್ದೇಶಕನಾಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದಲ್ಲದೆ, ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿವ ಕೆಲಸ ಮಾಡಿದರು.
ಇವರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ದೇಶ ವಿದೇಶಗಳಲ್ಲಿರುವ ಸಿನಿಮಾ ಇಂಡಸ್ಟ್ರಿಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದರು, ಇವರ ಸರಳತೆಗೆ ತೆಲುಗು, ತಮಿಳು, ಮಲಯಾಳಂ ನಟರು ಮಾರುಹೋಗಿದ್ದರು……
ಇವರ ನಗು , ಇವರ ಸ್ಟೈಲ್, ಇವರ ಸ್ಟೈಲ್, ಪವರ್ ಫುಲ್ ನಟನೆ ಯಾವತ್ತಿಗೂ ಅಜರಾಮರ…… ಇವರ ಕೋಟಿಗಟ್ಟಲೆ ಅಭಿಮಾನಿಗಳಲ್ಲಿ ನಾನೊಬ್ಬ ಅಪ್ಪಟ ಅಭಿಮಾನಿಯಾಗಿದ್ದು …… “ಮತ್ತೆ ಹುಟ್ಟಿ ಬಾ ಅಪ್ಪು”ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು….

ಲೇಖಕಿ:  ನಂದಿನಿ ಸನಬಾಳ್  ಶಿಕ್ಷಕಿ ಪಾಳಾ ಕಲಬುರಗಿ

Please follow and like us:

 

 

 

 

 

Translate »
[t4b-ticker]
error: Content is protected !!