
ನಡು ರಸ್ತೆಯಲ್ಲೇ ಜೀವ ಬಲಿಗೆ ಬಾಯ್ತೆರೆದ ಗುಂಡಿಗಳು, ಈಗೇಲ್ಲಿದ್ದಾರೆ ಸೇವಕರು ?
ಹಂಪಿ ಟೈಮ್ಸ್ ಹೊಸಪೇಟೆ:
ವಿಶ್ವ ಪ್ರಸಿದ್ಧ ಹಂಪಿ ವೀಕ್ಷಣೆಗೆ ತೆರಳುವ ಮುಖ್ಯ ನಡು ರಸ್ತೆಯಲ್ಲೆ ಗುಂಡಿಗಳು ಬಿದ್ದಿದ್ದು ಪ್ರಯಾಣಿಕರ, ವಿದ್ಯಾರ್ಥಿಗಳ, ವಾಹನಸವಾರರ ಜೀವ ಬಲಿಗೆ ಕಾದಂತಿವೆ. ಇತ್ತ ಕಣ್ಣೆತ್ತಿ ನೋಡದ ಸಂಬಂಧಿಸಿದ ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಅನಂತಶಯನಗುಡಿಯ ಹಂಪಿ ಮುಖ್ಯ ನಡುರಸ್ತೆಯಲ್ಲಿ ಜೀವಕಂಠಕದಂತಿರುವ ಗುಂಡಿಗಳು ಪ್ರಯಾಣಿಕರ ಜೀವ ಬಲಿಗಾಗಿ ಬಾಯ್ತೆರೆದಿವೆ. ರೈಲ್ವೇ ಹಳಿ ಪಕ್ಕದಲ್ಲಿಯೂ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ವಾಹನ ದಟ್ಟನೆಯ ನಡುವೆ ರೈಲ್ವೆ ಗೇಟ್ ದಾಟಲು ಸರ್ಕಸ್ ಮಾಡುವಂತಾಗಿದೆ.

ಅನಂತಶಯನಗುಡಿಯ ಮಾರ್ಗವಾಗಿ ನಾಗೇನಹಳ್ಳಿ ತಿರುವಿನ ಸಮೀಪ ಮುಖ್ಯ ನಡುರಸ್ತೆಯಲ್ಲೇ ಗುಂಡಿ ಬಿದ್ದಿರುವುದರಿಂದ ಅಪಘಾತ ವಲಯವಾದಂತಾಗಿದೆ. ರೈಲ್ವೇ ಗೇಟ್ ಎತ್ತಿದ ಬಳಿಕ ಎರಡ ಮಾರ್ಗದಲ್ಲಿ ಸರಾಗವಾಗಿ ತೆರಳುತ್ತಿದ್ದ ವಾಹನಗಳು ಇದೀಗ ಗುಂಡಿ ತಪ್ಪಿಸಲಯ ಹೋಗಿ ವಾಹನಗಳು ಎದುರುಬದುರಾಗುತ್ತಿದ್ದು ಟ್ರಾಫೀಕ್ ಜಾಮ್ ಹೆಚ್ಚುತ್ತಿದೆ. ಈಗಾಗಲೇ ರಾತ್ರಿವೇಳೆ ಬೈಕ್ ಸವಾರರು ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ.

ರಾಜ್ಯದಲ್ಲಿ ರಸ್ತೆ ಅಫಘಾತ ಹೆಚ್ಚಿದ ಹಿನ್ನಲೆಯಲ್ಲಿ ಪ್ರಯಣಿಕರಲ್ಲಿ ಆತಂಕವೂ ಹೆಚ್ಚಿದೆ. ಅಪಘಾತಕ್ಕೂ ಮುನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಗುಂಡಿಗಳ ದುರಸ್ತಿಗೆ ಮುಂದಾಗಬೇಕಿದೆ. ಚುನಾವಣೆಯಲ್ಲಿ ವೋಟಿಗಾಗಿ ಬಿಸಲನ್ನೂ ಲೆಕ್ಕಿಸದೇ ಮನೆಬಾಗಿಲಿಗೆ ಮತ ಕೇಳಲು ಬಂದ ಜನಪ್ರತಿನಿಧಿಗಳು ಸೇವಕರು ಈಗೆಲ್ಲಿದ್ದಾರೆ ಎನ್ನುತ್ತಿದ್ದಾರೆ ವಾಹನ ಸವಾರರು.
ಇದೇ ಮಾರ್ಗದಲ್ಲಿ ನಿತ್ಯ ಶಾಲಾ, ಕಾಲೇಜ್ ವಿದ್ಯಾರ್ಥಿಗಳು, ರೈತರು, ಕೂಲಿಕಾರ್ಮಿಕರು, ಪ್ರಯಾಣಿಕರು ಸೇರಿದಂತೆ ಸಾವಿರಾರು ವಾಹನಗಳ ಸಂಚಾರವಿದ್ದು ಸಣ್ಣ ಗುಂಡಿ ಎಂದು ಅಲಕ್ಷಿಸದೇ ಕೂಡಲೆ ನಗರದ ಎಲ್ಲಾ ರಸ್ತೆಗಳಲ್ಲಿರುವ ಗುಂಡಿಗಳ ದುರಸ್ತಿಗೊಳಿಸಿ ಪ್ರಯಾಣಿಕರ ಜೀವ ರಕ್ಷಿಸಬೇಕೆಂದು ವಾಹನ ಸವಾರರು, ಪ್ರಯಾಣಿಕರು ಆಗ್ರಹಿಸಿದ್ದಾರೆ.


More Stories
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹೊಸಪೇಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ಶಕ್ತಿಯ ಕೇಂದ್ರ: ಕೊಪ್ಪಳ ಗವಿಶ್ರೀಗಳು
ದಕ್ಷಿಣದಲ್ಲಿ ಮೂರೇ ಚಿತ್ರ: ನಾನಾ ಪಟೇಕರ್