https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ವರದಿ ಪರಿಣಾಮ | ಹೊಸಪೇಟೆ ಬಸ್ ನಿಲ್ದಾಣದಲ್ಲಿ ಆರಂಭಗೊಂಡ ದುರಸ್ತಿಕಾರ್ಯ
ಹಂಪಿ ಟೈಮ್ಸ್ ಹೊಸಪೇಟೆ:


ನಗರದ ಜೆಎಸ್‌ಡಬ್ಲ್ಯೂ ಕೇಂದ್ರ ಬಸ್ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ಪ್ರಯಾಣಿಕರ ಜೀವಕ್ಕೆ ಕಂಠಕವಾಗಿದ್ದ ಗುಂಡಿಗಳು, ತಲೆಎತ್ತಿದ್ದ ಕಬ್ಬಣದ ಸರಳುಗಳ ದುರಸ್ತಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪ ವಿಭಾಗದ ಅಧಿಕಾರಿಗಳು ಮುಂದಾಗಿರುವುದು ಪ್ರಯಾಣಿಕರಲ್ಲಿ ಆತಂಕ ದೂರಾಗಿಸಿದೆ. ಹಂಪಿ ಟೈಮ್ಸ್ ಮೇ 21 ರಂದು ʼನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆ ಮರೆತ ಸಾರಿಗೆ ನಿಗಮ!ʼ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಪ್ರಯಾಣಿಕರ ಸಮಸ್ಯೆಗೆ ಧ್ವನಿಯಾಗಿ ಹಂಪಿ ಟೈಮ್ಸ್ ಪತ್ರಿಕೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನ ಸೆಳೆದಾಗ, ಸಮಸ್ಯೆ ಇರುವುದು ನಿಜ. ಬಸ್‌ಗಳ ಹಿಂಬದಿಯ ಕೆಳಗಡೆ ಇರುವ ಸ್ಟೆಪ್ನಿಗಳಿಗೆ ಉದ್ದನೆಯ ಕಬ್ಬಿಣದ ರಾಡ್ ಹಾಕಿರುವದರಿಂದ ನಿಲ್ದಾಣದಲ್ಲಿ ಬಸ್‌ಗಳನ್ನು ನಿಲ್ಲಿಸುವಾಗ ಫ್ಲಾಟ್ ಫಾರಂ ಹಾಳಾಗುತ್ತಿವೆ. ಬಹುತೇಕ ಬಸ್ ನಿಲ್ದಾಣಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದಿದ್ದ ಅವರು, ಶೀಘ್ರದಲ್ಲೇ ದುರಸ್ತಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಕೊಟ್ಟ ಭರವಸೆಯಂತೆ ಶುಕ್ರವಾರ ಫ್ಲಾಟ್‌ಫಾರಂ ಅಂಚಿನಲ್ಲಿ ಕಿತ್ತೋದ ಕಬ್ಬಿಣ ಘರಾಂಡ್‌ಲ್‌ಗಳನ್ನು ಜೋಡಿಸಿ ವೆಲ್ಡಿಂಗ್ ಮಾಡಿ, ತಗ್ಗು ಪ್ರದೇಶಗಳಲ್ಲಿ ಸಿಮೆಂಟ್ ಕಾಂಕ್ರಿಟ್ ಹಾಕಿಸುವ ಕಾರ್ಯ ಕೈಗೆತ್ತಿಕೊಂಡು, ಪ್ರಯಾಣಿಕರ ಸುರಕ್ಷತೆಗೆ ಮುಂದಾಗಿದ್ದಾರೆ. ಸುರಕ್ಷತೆಯ ಕಾರ್ಯ ಪ್ರಯಾಣಿಕರಲ್ಲಿ ಹರ್ಷ ತಂದಿದೆ. ಅಧಿಕಾರಿಗಳು ಪ್ರಯಾಣಿಕರ ಸುರಕ್ಷತೆಗೆ ನಿರಂತರ ನಿಗಾವಹಿಸಬೇಕು ಎಂದಿರುವ ಪ್ರಯಾಣಿಕರು ವಿಭಾಗೀಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.




More Stories
ವಾರ್ತಾ ಇಲಾಖೆ ಆಯುಕ್ತರಾಗಿ ಡಿಐಜಿ ಎಂ.ಎನ್.ಅನುಚೇತ್ ಅಧಿಕಾರ ಸ್ವೀಕಾರ
ಜಿಲ್ಲಾವಾರು ಉಸ್ತುವಾರಿ ಸಚಿವರ ನೇಮಕ, ಯಾರು ಯಾವ ಜಿಲ್ಲೆಗೆ ಗೊತ್ತಾ?
ರೈತರ ಹಿತರಕ್ಷಣೆಗೆ ಮೂರೂ ರಾಜ್ಯಗಳ ಒಮ್ಮತದ ಐತಿಹಾಸಿಕ ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್