https://youtu.be/NHc6OMSu0K4?si=SI_K4goOPEgwo6h2



ಮೇ 13ರಂದು ಮತ ಎಣಕೆ, ಮತಕೇಂದ್ರ ಸುತ್ತ ಪೊಲೀಸರ ಸರ್ಪಗಾವಲು
ಹಂಪಿ ಟೈಮ್ಸ್ ಹೊಸಪೇಟೆ:
ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾನದ ಎಣಕೆ ಕಾರ್ಯ ಮೇ 13 ರಂದು ನಗರದ ಪಿಡಿಐಟಿ ಕಾಲೇಜ್ ನಲ್ಲಿ ಜರುಗಲಿದ್ದು, ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಮುಂಜಾಗ್ರತ ಕ್ರಮವಾಗಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ.

ಮತ ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಪ್ರಾರಂಭವಾಗಲಿದೆ. ಸೆಕ್ಷನ್ 144 ಅಡಿ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ 5ಕ್ಕೂ ಅಧಿಕ ಜನ ಒಂದೆಡೆ ಸೇರದಂತೆ ಸೂಚಿಸಿದ್ದಾರೆ. ವಿಜಯೋತ್ಸವ, ಸಂಭ್ರಮಾಚರಣೆ, ಮೆರವಣಿಗೆ, ಬೈಕ್ ರ್ಯಾಲಿ, ಪಟಾಕಿ ಸಿಡಿಸುವುದು, ಪ್ರತಿಕೃತಿ ಪ್ರದರ್ಶನ ದಹನ, ಧ್ವನಿವರ್ಧಕ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮತ ಎಣಿಕೆ ಕೇಂದ್ರದ ಬಳಿ ಬಂದೋಬಸ್ತ್ ಕರ್ತವ್ಯಕ್ಎಕ 4 -ಡಿಎಸ್ಪಿ, 7-ಪಿ.ಐ., 12-ಪಿಎಸ್ಐ, 16-ಎಎಸ್ಐ, 350 ಹೆಚ್.ಸಿ/ಪಿಸಿ, 2-ಕೆಎಸ್ ಆರ್ ಪಿ ತುಕಡಿ ಹಾಗೂ 2-ಅರೆಸೇನಾಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ.


More Stories
ಸಮಾಜದಲ್ಲಿ ಮಕ್ಕಳನ್ನು ಸುರಕ್ಷಿತವಾಗಿಡುವುದು ಶಿಕ್ಷಕರ ಮೂಲಭೂತ ಕರ್ತವ್ಯ
ಭಾವಯಾನ
ಅನಂತ್ನಾಗ್ಗೆ ಫಾಲ್ಕೆ ಗೌರವ ಸಮರ್ಪಣೆ