July 27, 2026

Hampi times

Kannada News Portal from Vijayanagara

ಆಹಿಂಸ ಪ್ರವರ್ತಕಿ, ಆರ್ಯ ವೈಶ್ಯರ ಆರಾಧ್ಯ ದೇವತೆ ವಾಸವಿ

https://youtu.be/NHc6OMSu0K4?si=SI_K4goOPEgwo6h2

ಶತೃ ನಾಶಕ್ಕೆ ಅಗ್ನಿ ಪ್ರವೇಶಿಸಿದ ವಾಸವಿ 

ಜಿ.ವಿ.ಸುಬ್ಬರಾವ್ ಮರಿಯಮ್ಮನಹಳ್ಳಿ :
ಒಂದೊಂದೂ ಸಮೂದಾಯಕ್ಕೂ ಮತ್ತು ಜನಾಂಗಕ್ಕೂ ತನ್ನದೆ ಆದ ಪರಂಪರೆ, ಇತಿಹಾಸ ಇರುತ್ತದೆ. ಆಯಾ ಜನಾಂಗದಲ್ಲಿ ಯಾವುದೋ ಕಾಲ ಘಟ್ಟದಲ್ಲಿ ಯಾರಾದರು ಸಂತರು , ದಾರ್ಶನಿಕರು ಮತ್ತು ಮಹಾನುಭಾವರು ತಮ್ಮ ಮಹತ್ವದ ಸಾಧನೆಗಳಿಂದ ಜನಮಾನಸರಾಗುತ್ತಾರೆ, ಆದರಂತೆ ವೈಶ್ಯರ ಕುಲಮಾತೆ ಆಖಿಲಾಂಡಕೋಟಿ , ಬ್ರಹ್ಮಾಂಡನಾಯಕಿ ಶ್ರೀಮಾತಾ ಕನ್ನಿಕಾ ಪರಮೇಶ್ವರಿ ತನ್ನ ಜೀವಿತ ಮತ್ತು ಸಾಧನೆಗಳಿಂದ, ತ್ಯಾಗ,ಬಲಿದಾನಗಳಿಂದ ವೈಶ್ಯಸಮುದಾಯದ ಕುಲದೇವತೆಯಾಗಿ ಹೃನ್ಮನಗಳಲ್ಲಿ ನೆಲಸಿದ ಲೋಕಮಾತೆ,

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪೆನ್ನಗೊಂಡೆಯ ಶ್ರೀ ವಾಸವಿಮಾತೆಯ ಜನ್ಮಸ್ಥಳ ತಂದೆ ಕುಸುಮಶ್ರೇಷ್ಟಿ ,ತಾಯಿ ಕುಸುಮಾಂಬೆಯ ಏಕಮೇವ ಪುತ್ರಿ , ಪೂರ್ವ ಚಾಲುಕ್ಯದೊರೆ ವಿಷ್ಣುವರ್ಧನನ ಕಾಲದಲ್ಲಿ ಕುಸುಮಶ್ರೇಷ್ಟಿ ವಿಷ್ಣು ವರ್ಧನನ ಸಾಮಾಂತ ರಾಜರಲ್ಲಿ ಒಬ್ಬರಾಗಿದ್ದರು . ಪೆನಗೊಂಡೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸುತ್ತಲಿನ 17 ಗ್ರಾಮಗಳಿಗೆ ರಾಜನಾಗಿದ್ದನು . ಕುಸುಮಶ್ರೇಷ್ಟಿ ದಂಪತಿಗಳು ಸುಖದ ಸುಪ್ಪತ್ತಿಗೆಯಲ್ಲಿಯೆ ಜೀವನಸಾಗಿಸುತ್ತಿದ್ದರು .

ಅವರಿಗೆ ಸಂತಾನಪ್ರಾಪ್ತಿಯಾಗದೆ ಚಿಂತೆಗೆ ಒಳಗಾಗಿದ್ದರು . ಚಿಂತಕ್ರಾಂತರಾಗಿದ್ದ ದಂಪತಿಗಳು ಕುಲಗುರುಗಳಾದ ಭಾಸ್ಕಾರಾಚಾರ್ಯರ ಸಲಹೆಯಂತೆ ಪುತ್ರ ಕಾಮೇಷ್ಟಿಯಾಗವನ್ನು ನಡೆಸಿದರು . ಇದರ ಫಲವಾಗಿ ಕೆಲವೇ ದಿನಗಳಲ್ಲಿ ಕುಸುಮಾಂಬೆ ಗರ್ಭವತಿಯಾದಳು. ವೈಶಾಖಶುದ್ಧ ದಶಮಿ, ಉತ್ತರ ನಕ್ಷತ್ರ ಕನ್ಯಾಲಗ್ನದಲ್ಲಿ ಕುಸುಮಾಂಬೆ ಆವಳಿ ಮಕ್ಕಳಿಗೆ ಜನ್ಮನೀಡಿದಳು. ಹೆಣ್ಣುಮಗುವಿಗೆ ವಾಸವಾಂಬೆ ಎಂದು , ಗಂಡುಮಗುವಿಗೆ ವಿರುಪಾಕ್ಷ ಎಂದು ನಾಮಕರಣ ಮಾಡಿದರು. ಶುಕ್ಲ ಪಕ್ಷದ ಚಂದ್ರನಂತೆ ಆ ಮಕ್ಕಳು ದಿನೆ-ದಿನೆ ಬೆಳೆಯ ತೊಡಗಿದರು .

 

 

ಕುಸುಮ ಶ್ರೇಷ್ಠಿಯ ಚಕ್ರವರ್ತಿ ವಿಷ್ಣು ವರ್ಧನನಿಗೆ ಆಗಾಗ್ಗೆ ಕಪ್ಪ ಕಾಣಿಕೆಗಳನ್ನು ಕಳುಹಿಸಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಅವರ ನಡುವೆ ಉತ್ತಮ ಬಾಂಧವ್ಯ ಇತ್ತು . ಪ್ರಜೆಗಳ ಯೋಗ ಕ್ಷೇಮ ವಿಚಾರಿಸಲು ರಾಜ ವಿಷ್ಣು ವರ್ಧನನು ರಾಜ್ಯಯಾತ್ರೆಗೆ ಹೊರಟಾಗ ಮಾರ್ಗದ ಮಧ್ಯೆ ಪೆನಗೊಂಡೆಗೂ ಭೇಟಿ ನೀಡಿದನು. ಈ ಸಂದರ್ಭದಲ್ಲಿ ಚೆಲುವಿನ ಗಣಿಯಾಗಿದ್ದ ವಾಸವಿಯನ್ನು ನೋಡಿದೊಡನೆ ತನ್ನ ಸ್ಥಾನಮಾನವನ್ನು ಲೆಕ್ಕಿಸದೆ,ಸಂಯಮಯುಕ್ತ ವಿವೇಚನೆ ಇಲ್ಲದೆ ವಾಸವಿಯನ್ನು ತಾನು ಬಯಸಿರುವುದಾಗಿಯೂ ಆಕೆಯನ್ನು ವಿವಾಹ ಮಾಡಿಕೊಡಬೇಕೆಂದು ತನ್ನ ಮಂತ್ರಿಯ ಮೂಲಕ ಕುಸುಮ ಶೇಷ್ಠಿಗೆ ಸಂದೇಶ ಕಳುಹಿಸಿದನು.

ಇದರಿಂದ ಅವರಿಗೆ ಮರ್ಮಾಘಾತವಾದಂತಾಯಿತು ತನ್ನ ಆಪ್ತರೊಂದಿಗೆ ಸಮಾಲೋಚಿಸಿದ ಕುಸುಮ ಶೇಷ್ಠಿ ವರ್ಣಾಂತರ ವಿವಾಹ ನಿಷೇಧ ಮತ್ತು ವಯೋಮಾನದ ಅಂತರ ಇದೆ ಎಂಬ ಸಂದೇಶವನ್ನು ರಾಜನಿಗೆ ಕಳಿಸಿದರು. ಮತ್ತು ಎಂದಿನಂತೆ ರಾಜಕೀಯ ಸಂಬಂಧಇರಲೆಂದು ಒಕ್ಕಣಿಕೆಯನ್ನು ಕಳುಹಿಸಿಕೊಟ್ಟರು . ಇದರಿಂದ ಕೋಪಗೊಂಡ ರಾಜ ವಿಷ್ಣು ವರ್ಧನ ಅವಮಾನಿತನಾಗಿ ಪೆನೆಗೊಂಡೆಯ ಮೇಲೆ ದಂಡೆತ್ತಲು ತನ್ನ ಸೇನಾಧಿಪತಿಗೆ ಆಜ್ಞಾಪಿಸಿದನು, ಸಂಕಟ ನಿವಾರಣೋಪಾಯ ಹುಡುಕಲು ಕುಸುಮ ಶೇಷ್ಟಿಯು 714 ಗೋತ್ರದವರ ಮಹಾಸಭೆಯಲ್ಲಿ ಸಮಸ್ಯೆಯ ಕುರಿತು, ಎಳೆ ಎಳೆಯಾಗಿ ಬಿಡಿಸಿ ಸಮಸ್ಯೆಗೆ ಪರಿಹಾರ ಸೂಚಿಸಲು ಮನವಿ ಮಾಡಿಕೊಂಡಾಗ ಅದರಲ್ಲಿ 612 ಗೋತ್ರದವರು, ರಾಜನುಸ್ಪುರದ್ರೂಪಿ , ಆಡಳಿತ ಚುಕ್ಕಾಣಿ ಹಿಡಿದವನು ತಾನೆ ಬಂದು ಸಂಬಂಧ ಬೆಳೆಸಲು ಬಯಸಿ ಬಂದಿದ್ದಾನೆ,ಆದ್ದರಿಂದ ಚಕ್ರವರ್ತಿಯೊಂದಿಗೆ ವಿವಾಹ ಸೂಕ್ತ ಎಂದರು,ಉಳಿದ 102 ಗೋತ್ರದವರು ರಾಜನ ಧೋರಣೆಯನ್ನು ವಿರೋಧಿಸಿ ಏನೆ ಸಂಕಟ ಬರಲಿ ಎದುರಿಸೋಣ ಧರ್ಮದ ಶ್ರೀರಕ್ಷೆ ನಮ್ಮದಾಗಿರುವಾಗ ಹೆದರುವುದೇಕೆಂದು,ರಾಜನ ಆಹ್ವಾನ ನಿರಾಕರಿಸಿದರು.

 

ಈ ಗೊಡವೆಯೆ ಬೇಡವೆಂದು 612 ಗೋತ್ರದವರು ಪಲಾಯನ ಮಾಡಿದರು, ಉಳಿದ 102 ಗೋತ್ರದವರು ಚಕ್ರವರ್ತಿಯನ್ನು ಎದುರಿಸಲು ಸಿದ್ಧರಾಗುತ್ತಾರೆ, ಅಲ್ಲದೇ ರಾಜನೊಂದಿಗೆ ಸೆಣಸಲು ಆಣಿಯಾಗುತ್ತಾರೆ,ಇದನ್ನೆಲ್ಲಾ ಗಮನಿಸಿದ ವಾಸವಿಯು ಕೇವಲ ತನ್ನೊಬ್ಬಳಿಗಾಗಿ ಆಪಾರಸಂಖ್ಯೆಯ ಸ್ವಾಮಿ ನಿಷ್ಟೆಯ ಸೈನಿಕರು, ಪ್ರಾಣಿಗಳ ಹತ್ಯೆ ಜತೆಗೆ ಆರ್ಥಿಕ ಹಾನಿಯ ಈ ಯುದ್ಧ ಅನಿವಾರ್ಯವೇ? ಎಂದು ಭಾವಿಸಿ ಇದಕ್ಕೊಂದು ಹೊಸ ತಿರುವು ನೀಡಬೇಕೆಂದುಕೊಂಡಳು.ಶತೃ ನಾಶವಾಗಬೇಕೆಂದು ಯೋಚಿಸಿ ಆಗ್ನಿ ಪ್ರವೇಶಮಾಡಲು ತೀರ್ಮಾನಿಸಿ ತನ್ನ ಅಪ್ಪನಿಗೆ ಮನವಿಮಾಡಿ ಈ ಶರೀರ ಆತ್ಮಾರ್ಪಣೆ ಮಾಡಿಕೊಂಡರೆ ಯಾವ ಕಡೆಯ ಜೀವಹಾನಿಯೂ ಆಗುವುದಿಲ್ಲ ಎಂದು ನುಡಿದಳು, ಇದರಿಂದ ವಿಚಲಿತನಾದ ಕುಸುಮಶ್ರೇಷ್ಟಿ ಹಲವು ವರ್ಷಗಳ ತಪಸ್ಸಿನ ಫಲವಾಗಿ ಜನಿಸಿದ ತನ್ನ ಕುವರಿಯನ್ನು ಹೇಗೆ ಆಗ್ನಿ ಪ್ರವೇಶಕ್ಕೆ ಅಪ್ಪಣೆನೀಡಬೇಕೆಂದು ಚಿಂತಕ್ರಾಂತನಾದನು. ತನ್ನ ತಂದೆಯನ್ನು ಒಪ್ಪಿಸುವಲ್ಲಿ ವಾಸವಿ ಯಶಸ್ವಿಯೂಆದಳು.

 

102 ಗೋತ್ರದವರು ವಾಸವಿದೇವಿಯ ನಿರ್ಧಾರಕ್ಕೆ ಸಮ್ಮತಿಸಿದರು. ಕುಲಗುರು ಭಾಸ್ಕರಾಚಾರ್ಯರ ಸಲಹೆ,ಕುಲಸ್ತರ ಅಭಿಪ್ರಾಯದೊಂದಿಗೆ ವಾಸವಿ ನಿರ್ಧಾರ ತುಲನೆಮಾಡಿ ಸಮಸ್ತ ವೈಶ್ಯರು ಆಗ್ನಿಪ್ರವೇಶ ಮಾಡಿದರೆ, ಕುಲ ಅಂತ್ಯವಾಗುವ ಅಪಾಯವನ್ನು ಮನಗಂಡು ಗೋತ್ರಗೊಬ್ಬ ದಂಪತಿಗಳಂತೆ ವಾಸವಿಯೊಂದಿಗೆ ಅಗ್ನಿ ಪ್ರವೇಶಿಸುವ ತೀರ್ಮಾನಕ್ಕೆ ಬಂದರು . ಬ್ರಹ್ಮಕುಂಡ ಎಂಬ ಪ್ರದೇಶದಲ್ಲಿ ಮಾಗ ಶುದ್ಧ ಬಿದಿಗೆಯಂದು ವಾಸವಿ ಜತೆಗೆ 205 ಜನ ಆಗ್ನಿ ಪ್ರವೇಶಮಾಡಿದರು. ಇದನ್ನು ತಿಳಿದ ಚರ್ಕವರ್ತಿವಿಷ್ಣುವರ್ಧನ ಆಕ್ರಮಣಕ್ಕೆಂದು ಪೆನಗೊಂಡೆಗೆ ಧಾವಿಸಿ ಬರುತ್ತಿದ್ದ ವೇಳೆ ಸ್ಥಂಭಿತನಾದನು. ಆನೆಯ ಮೇಲಿಂದ ಬಿದ್ದು ಒಡನೆಯೇ ಮೃತಪಟ್ಟನು. ಆತನ ಸೈನಿಕರು ಭಯ ಭೀತರಾಗಿ ಚದುರಿಹೋದರು. ಹೀಗೆ ಕಿರಿಯವಯಸ್ಸಿನಲ್ಲಿಯೆ ಆಹಿಂಸ ಪ್ರವರ್ತಕಳಾಗಿ, ವಿಭಿನ್ನ ಸತ್ಯಗ್ರಹದ ಮೂಲಕ ಆದರ್ಶವನ್ನು ಜನತೆಗೆ ತೋರಿದ ಶ್ರೀ ವಾಸವಿದೇವಿಯು, ಪಾರ್ವತಿ ದೇವಿಯಪ್ರತಿಕಳಾಗಿಯೂ, ಆರ್ಯ ವೈಶ್ಯರ ಆರಾಧ್ಯ ದೇವತೆಯಾಗಿ, ಸರ್ವ ಮಾನ್ಯಳೆಂದು ಸರ್ವರಲ್ಲಿ ಮೂಡುತ್ತಿದೆ. ಆದಿಪರಾಶಕ್ತಿ ಅವತಾರಿಣಿಯಾದ ವಾಸವಿಯು ನಿಜಕ್ಕೂ ಲೋಕ ಮಾತೆಯೂ ಹೌದಲ್ಲವೆ ….

Please follow and like us:

 

 

 

 

 

Translate »
[t4b-ticker]
error: Content is protected !!