https://youtu.be/NHc6OMSu0K4?si=SI_K4goOPEgwo6h2

ಮತ್ತೊಬ್ಬರ ಉದ್ದಿಮೆ ಕಸಿಯುವ ಆಸೆ ನನಗಿಲ್ಲ : ಎಚ್.ಆರ್.ಗವಿಯಪ್ಪ
ಹೊಸ ಕಾರ್ಖಾನೆಗಿಂತ ಇದ್ದ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಸಹಕಾರ
ಹಂಪಿಟೈಮ್ಸ್ ಹೊಸಪೇಟೆ:
ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿರುವ ಜನರಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ವರದಾನವಾಗಲಿವೆ. ನನ್ನ ಭವಿಷ್ಯದ ಬದುಕನ್ನು ಕ್ಷೇತ್ರದ ಜನರ ಸೇವೆಗಾಗಿ ಮೀಸಲಿಡಲಿದ್ದು, ಜನರ ನೋವು, ನಲಿವುಗಳಿಗೆ ಸ್ಪಂದಿಸಿ, ಜನರೊಂದಿಗೆ ಬೆರೆಯುವೆ ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕಾಂಗ್ರೆಸ್ ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು 90-ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ಘೋಷಿಸಿದೆ. ಕ್ಷೇತ್ರದಲ್ಲಿ ಆಕಾಂಕ್ಷಿಗಳು ಅಧಿಕವಾಗಿದ್ದರೂ, ಪಕ್ಷ ಘೋಷಿಸಿದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗೂಡಿ ಶ್ರಮಿಸುವುದು ಕಾಂಗ್ರೆಸ್ ಪಕ್ಷದ ಸಿದ್ದಾಂತಗಳಲ್ಲೊಂದಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಇಂದು ನಿನ್ನೆ ಹುಟ್ಟಿಕೊಂಡವರಲ್ಲ. ಎಂ.ವೈ.ಘೋರ್ಪಡೆ ಕಾಲದಿಂದಲೂ ಪಕ್ಷದ ನಿಷ್ಠಾವಂತರಾಗಿ ಕಾರ್ಯಕರ್ತರು ಪಕ್ಷಕ್ಕೆ ದುಡಿಯುತ್ತಿದ್ದಾರೆ. ಕಾರ್ಯಕರ್ತರ ಬಲವೇ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ.
ಅಪಪ್ರಚಾರ ಹೆಚ್ಚು: 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಟಿಕೇಟ್ ಸಿಕ್ಕಲ್ಲವೆಂದು ನೊಂದು ಜನರೊಂದಿಗೆ ಬೆರೆಯದೆ ಇರುವುದು ಮತ್ತು 2018ರಲ್ಲಿ ಹಾಲಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರಿAದ ನಾನು ಪಕ್ಷ ತೊರೆದಿದ್ದು ನಾಮಾಡದ ಎರಡು ತಪ್ಪು. ಮುಂದೆAದೂ ತಪ್ಪು ಮಾಡಲ್ಲ. ಈಗ ಜನರು ಬದಲಾವಣೆ ಬಯಸಿದ್ದಾರೆ. ಯಾವತ್ತೂ ನಾನೇ ಶಾಸಕ ಅಗಬೇಕೆನ್ನುವುದು ಜನರು ಒಪ್ಪುವುದಿಲ್ಲ. ಜನರೊಂದಿಗೆ ನಾನು ಬೆರೆಯಲಿಲ್ಲ ಎಂಬ ಆರೋಪಕ್ಕಿಂತ ಅಪಪ್ರಚಾರವೇ ಹೆಚ್ಚಾಗಿದೆ. ಜನರು ಎಲ್ಲವನ್ನೂ ಗಮನಿಸಿದ್ದಾರೆ. ನನಗೊಂದು ಅವಕಾಶ ಮಾಡಿಕೊಡಲು ಮತದಾರರಲ್ಲಿ ಮನವಿ ಮಾಡುತ್ತಿದ್ದೇನೆ, ಈಬಾರಿ ಕಾಂಗ್ರೆಸ್ ಆಧಿಕಾರಕ್ಕೆ ಬರಲಿದೆ ಎಂದರು.
ಪ್ರತಿ ಕುಟುಂಬಕ್ಕೆ 2 ಲಕ್ಷ ರೂ: ಕಾಂಗ್ರೆಸ್ ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಬೆಲೆ ಏರಿಕೆಯಿಂದ ತತ್ತರಿಸುವ ಜನತೆಗೆ ಕಾಂಗ್ರೆಸ್ ಸರ್ಕಾರ ಐದು ವರ್ಷಗಳಲ್ಲಿ ಪ್ರತಿ ಕ್ಷೇತ್ರಕ್ಕೆ 1000 ಕೋಟಿ ರೂ ಗ್ಯಾರಂಟಿ ಯೋಜನೆಯನ್ನು ಘೋಷಿಸಿದೆ. ಎಲ್ಲ ವರ್ಗಕ್ಕೂ ತಲುಪುವ ಯೋಜನೆಯಾಗಿದೆ. ಪ್ರತಿ ಕುಟುಂಬಕ್ಕೆ ವಿವಿಧ ಯೋಜನೆಗಳಿಂದ ಮಾಸಿಕ 3500 ರೂನಂತೆ ವಾರ್ಷಿಕ 40 ಸಾವಿರ ರೂ ದೊರೆಯಲಿದೆ. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಇಂತಹ ಜನಪರ ಯೋಜನೆ ಜಾರಿಗೊಳಿಸಲು ಸಾಧ್ಯ. 5 ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ ಗ್ಯಾರಂಟಿ ಯೋಜನೆಯ ಲಾಭ ದೊರೆಯಲಿದೆ. ಮತದಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು.
ಕಾಂಗ್ರೆಸ್ ಸರ್ಕಾರ ರೈತಪರ: ರೈತಪರ ಯೋಜನೆ ಜಾರಿ, ಕ್ಷೇತ್ರದಲ್ಲಿ ಸರ್ಕಾರಿ ಪಿಯುಸಿ ಕಾಲೇಜ್, ಐಟಿಐ, ಪಾಲಿಟೆಕ್ನಿಕ್ ಕಾಲೇಜ್ ಆರಂಭಿಸಲಾಗುವುದು. ಬಡಜನರು ಡೊನೆಷನ್ ಕೊಟ್ಟು ಓದಿಸಲು ಆಗಲ್ಲ. ಉದ್ಯೋಗ ಸೃಷ್ಠಿಗೆ ಅನೇಕ ಕಾರ್ಖಾನೆಗಳನ್ನು ಆರಂಭಿಸಲಾಗುವುದು. ಪ್ರವಾಸೋಧ್ಯಮ ಅಭಿವೃದ್ಧಿ, ಪಾಪಿನಾಯಕನಹಳ್ಳಿ ಭಾಗದ ಜನರಿಗೆ ಕುಡಿಯುವ ನೀರು, ಕೃಷಿ ಭೂಮಿಗೆ ನೀರಾವರಿ ಸೌಲಭ್ಯ, ದುಡಿಮೆಗಾಗಿ ಗುಳೇ ಹೋಗಿರುವ 70 ಸಾವಿರಕ್ಕೂ ಅಧಿಕ ಜನರನ್ನು ವಾಪಸ್ಸು ಕರೆತಂದು ಕ್ಷೇತ್ರದಲ್ಲೇ ಉದ್ಯೋಗ ದೊರಕಿಸಿಕೊಡುವುದು ಸೇರಿದಂತೆ ಅನೇಕ ಜನಪರ ಕೆಲಸ ಮಾಡುತ್ತೇನೆ ಎಂದರು.
ಐಎಸ್ಸಾರ್ ಕಾರ್ಖಾನೆ ಪುನರಾರಂಭಕ್ಕೆ ಸಹಕಾರ: ಕ್ಷೇತ್ರದಲ್ಲಿ ಕಾರ್ಖಾನೆ ಆರಂಭಿಸಬೇಕೆನ್ನುವವರು ನೂರಾರು ಜನರಿದ್ದಾರೆ. ಒಬ್ಬರು ಕಾರ್ಖಾನೆ ಮಾಡುತ್ತಿದ್ದಾರೆಂದರೆ ಅದನ್ನು ಉಳಿಸಿಕೊಂಡು ಹೋಗುವುದಕ್ಕೆ ಬೇಕಾದ ರಕ್ಷಣೆ, ಅಗತ್ಯ ಬೆಂಬಲ ನೀಡಿ, ರೈತರಿಗೆ ನ್ಯಾಯ ಒದಗಿಸಿಕೊಡಬೇಕೇ ಹೊರತು. ನಾನೇ ಸ್ವತಃ ಕಾರ್ಖಾನೆ ತೆರೆಯುವುದಲ್ಲ. ಸ್ವಂತ ಕಾರ್ಖಾನೆ ಆರಂಭಿಸುವ ಆಸೆಯೂ ನನಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ತಂದಲ್ಲಿ ಮತ್ತೆ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಪುನಾರರಂಭಕ್ಕೆ ಕಾರ್ಖಾನೆ ಮಾಲೀಕರಿಗೆ ಅಗತ್ಯ ಸಹಕಾರಿ ನೀಡಿ ತೆರೆಯಲು ಮನವಿ ಮಾಡುತ್ತೇನೆ. ನಮ್ಮೂರಿಗೆ ಅವರು ಸಾಹುಕಾರರು. ನಾವು ಸಹ ಕಬ್ಬು ಸಾಗಿಸಿದ್ದೇವೆ. ಐಎಸ್ಸಾರ್ ಸಕ್ಕರೆ ಕಾರ್ಖಾನೆ ರೈತರಿಗೆ ವರದಾನವಾಗಿತ್ತು. ಕಾರ್ಖಾನೆ ನಡೆಸಿದ ಅನುಭವ ನಮಗಿದೆ. ಹಾಗಾಗಿ ಈಗ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕೆಂದರೆ ಕನಿಷ್ಠ ಹತ್ತು ವರ್ಷ ಬೇಕಾಗುತ್ತದೆ. ಕಾರ್ಖಾನೆ ಆರಂಭ ಸುಲಭದ ಮಾತಲ್ಲ ಎಂದರು.



More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್, ಕೋಟ್ಯಂತರ ರೂಪಾಯಿ ರಾಜಸ್ವ ಸಂಗ್ರಹ : ಅಬಕಾರಿ ನಿರೀಕ್ಷಕಿ ಎಸ್.ಬಿ.ಮಮತಾ