https://youtu.be/NHc6OMSu0K4?si=SI_K4goOPEgwo6h2



ಹಂಪಿಟೈಮ್ಸ್ ಹೊಸಪೇಟೆ:

ಹಂಪಿಯ ತುಂಗಭದ್ರ ನದಿಯಲ್ಲಿ ಈಜಲು ಹೋಗಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಬುಧವಾರ ನಡೆದಿದೆ.
ಸ್ನೇಹಿತರೊಂದಿಗೆ ಹಂಪಿ ಪ್ರವಾಸಕ್ಕೆ ಆಗಮಿಸಿದ್ದವರ ಪೈಕಿ ಇಬ್ಬರು ತುಂಗಭದ್ರಾ ನದಿಯಲ್ಲಿ ನೀರು ಪಾಲಾಗಿದ್ದು, ಕೊಚ್ಚಿ ಹೋದವರನ್ನು ಬೆಂಗಳೂರು ಮೂಲದ ಜೀವನ್(18), ಹರಿಶ್(18) ಎಂದು ಗುರುತಿಸಲಾಗಿದೆ.
ಜಿವನ್, ಹರೀಶ್ ಸೇರಿದಂತೆ ಐವರು ಸ್ನೇಹಿತರು ಗೆಳೆಯನ ಹುಟ್ಟುಹಬ್ಬ ಆಚರಣೆಗಾಗಿ ಮಂಗಳವಾರ ಬಳ್ಳಾರಿಗೆ ಆಗಮಿಸಿದ್ದು, ಬುಧವಾರ ಬಳ್ಳಾರಿಯ ಮೂವರು ಸೇರಿದಂತೆ 8 ಜನರು ಹಂಪಿ ಪ್ರವಾಸ ಕೈಗೊಂಡಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಂಪಿಯ ಪುರದಂರ ಮಂಟಪದ ಬಳಿ ನದಿಯಲ್ಲಿ ಈಜಲು ತೆರಳಿದ್ದು, ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ. ಅಗ್ನಿ ಶಾಮಕ ದಳ, ಮುಳುಗು ತಜ್ಞರು ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಹಂಪಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.


More Stories
ಅನಂತ್ನಾಗ್ಗೆ ಫಾಲ್ಕೆ ಗೌರವ ಸಮರ್ಪಣೆ
ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ