https://youtu.be/NHc6OMSu0K4?si=SI_K4goOPEgwo6h2



HAMPI TIMES
ಬೆಳಗಾವಿ ಸುವರ್ಣಸೌಧ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಇ-ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಕರಿತು 2016ರಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಶೀಘ್ರವಾಗಿ ಎಲೆಕ್ಟಿçಕಲ್ ವಾಹನಗಳ ಬ್ಯಾಟರಿ ಹಾಗೂ ಇ-ತ್ಯಾಜ್ಯ ವಿಲೇವಾರಿಗೆ ವಿಶೇಷ ಕಾನೂನು ರೂಪಿಸುವುದಾಗಿ ಪ್ರವಾಸೋದ್ಯಮ ಹಾಗೂ ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಹೇಳಿದರು.

ಸೋಮವಾರ ವಿಧಾನ ಪರಿಷತ್ ಪ್ರಶೋತ್ನರ ಕಲಾಪದಲ್ಲಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ ಹಾಗೂ ಡಿ.ಎಸ್.ಅರುಣ್ ಅವರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ರಾಜ್ಯದಲ್ಲಿ ವಾರ್ಷಿಕವಾಗಿ 2018-19 ರಲ್ಲಿ 9294.94 ಟನ್, 2019-20 ರಲ್ಲಿ 44,240 ಟನ್ ಹಾಗೂ 2020-21 ರಲ್ಲಿ 96175 ಟನ್ ಇ-ತ್ಯಾಜ್ಯ ಉತ್ಪಾದನೆಯಾಗಿದೆ. 180 ಇ-ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಘಟಕಗಳು ಇವೆ. ಇದರಲ್ಲಿ 93 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 47 ಘಟಕಗಳು ಸ್ಥಾಪನೆ ಹಂತದಲ್ಲಿವೆ. 40 ಘಟಕಗಳು ಮುಚ್ಚಲ್ಪಟ್ಟಿವೆ. ಸರ್ಕಾರಿಂದ ಹೊಸ ಕೈಗಾರಿಕಾ ನೀತಿ 2020-25 ರನ್ವಯ ಕೈಗಾರಿಕೆಗಳಲ್ಲಿ ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಪುನರ್ ಬಳಕೆ ಯಂತ್ರೋಪಕರಣಗಳನ್ನು ಅಳವಡಿಸಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಹಾಯಧನ ನೀಡಲಾಗುವುದು ಎಂದರು.
ಶಾಸಕ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ಬೆಂಗಳೂರು ವಿಶ್ವದಲ್ಲೇ ಹೆಚ್ಚು ಇ-ತ್ಯಾಜ್ಯ ಉತ್ಪಾದಿಸುವ ನಗರಗಳಲ್ಲಿ ಒಂದಾಗಿದೆ. ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಇ-ತ್ಯಾಜ್ಯ ಮರುಬಳಕೆಗೆ ಯೋಗ್ಯವಾಗಿದೆ. ಒಂದು ಟನ್ ಅದಿರು ಸಂಸ್ಕರಿಸಿದರೆ 6 ಗ್ರಾಂ ಚಿನ್ನ ದೊರೆಯುತ್ತದೆ. ಆದರೆ 1 ಟನ್ ಇ-ತ್ಯಾಜ್ಯ ಸಂಸ್ಕರಿಸಿದರೆ 24 ಗ್ರಾಂ ಚಿನ್ನದ ಜೊತೆಗೆ, ತಾಮ್ರಾ, ಸಿಲಿಕಾ, ಕ್ಯಾಡ್ಮಿಯಮ್, ಅಲ್ಯೂಮಿನಯನ್ ಲೋಹಗಳು ಸೇರಿ ಮರು ಬಳಕೆಯ ಪ್ಲಾಸ್ಟಿಕ್ ದೊರಕುತ್ತೆ. ಸರ್ಕಾರ ಇ-ತ್ಯಾಜ್ಯ ಮರುಬಳಕೆಗೆ ಕಠಿಣ ನಿಯಮಗಳನ್ನು ಜಾರಿ ಗೊಳಿಸಬೇಕು ಎಂದರು.
ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿ.ಪಿ.ಪಿ) ಮಾದರಿಯಲ್ಲಿ ಇ-ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಕ್ರಮಕೈಗೊಳ್ಳಬೇಕು. ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇ-ವೆಹಿಕಲ್‌ಗಳನ್ನು ನಿಷೇಧಿಸಲಾಗಿದೆ. ಕಾರಣ ಬ್ಯಾಟರಿಗಳು ತ್ಯಾಜ್ಯ ಹೆಚ್ಚಾಗುತ್ತಿರುವುದು. ಆದ್ದರಿಂದ ಸರ್ಕಾರ ಬ್ಯಾಟರಿ ವಿಲೇವಾರಿಗೆ ವಿಶೇಷ ಕಾನೂನು ರೂಪಿಸಬೇಕು ಎಂದರು.


More Stories
ಅನಂತ್ನಾಗ್ಗೆ ಫಾಲ್ಕೆ ಗೌರವ ಸಮರ್ಪಣೆ
ಹಣಕಾಸು ಇಲಾಖೆಯಿಂದ ಸಿಎಂಗೆ ಎಚ್ಚರಿಕೆ
ಹಳ್ಳಿ ಮಕ್ಕಳಿಗೆ ಕಿಯೋ ಕಂಪ್ಯೂಟರ್ ಮೂಲಕ ಎಐ ತಂತ್ರಜ್ಞಾನ