https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ:
ನಗರದ ಬೈಪಾಸ್‌ನಲ್ಲಿರುವ ಭಟ್ರಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಚಿವ ಆನಂದಸಿಂಗ್ ಬಿಜೆಪಿ ಕಛೆರಿಗೆ ನೀಡಿದ ಜಾಗದಲ್ಲಿ ನೂತನ ವಿಜಯನಗರ ಜಿಲ್ಲಾ ಬಿಜೆಪಿ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೊಪ್ಪಳದಲ್ಲಿ ವಿಜಯನಗರ, ಬಳ್ಳಾರಿ, ರಾಯಚೂರು, ಬಿಜಾಪುರ, ಚಾಮರಾಜನಗರ, ಗದಗ, ಕೋಲಾರ, ಹಾವೇರಿ, ಬಾಗಲಕೋಟೆ ಹಾಗೂ ಬೀದರ್ ಜಿಲ್ಲಾ ಕಟ್ಟಡ ನಿರ್ಮಾಣಕ್ಕೆ ವರ್ಚುವಲ್ ಆಗಿ ಚಾಲನೆ ನೀಡಲಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಮಂಡಲ ಅಧ್ಯಕ್ಷ ಕಾಸೆಟ್ಟಿ ಉಮಾಪತಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ, ನಗರಸಭೆ ಸದಸ್ಯ ಜೀವರತ್ನಂ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ ಜೀರೆ, ಕವಿತಾ ಈಶ್ವರಸಿಂಗ್, ದೀನಾ ಮಂಜುನಾಥ ಸೇರಿದಂತೆ ಇತರರು ಇದ್ದರು.











More Stories
ನವಜಾತ ಶಿಶು ಸಾವು ಪ್ರಕರಣ: ಸ್ತ್ರೀರೋಗ ತಜ್ಞೆ Dr.ಅತಿಕಾ ಹೀನಾ ಕರ್ತವ್ಯದಿಂದ ಬಿಡುಗಡೆ: ಡಿಎಚ್ಒ
ಯಶೋದೆಗೆ ವಿಶ್ವವನ್ನೇ ತೋರಿದ ಬಾಲಕೃಷ್ಣ
ವಿಜಯನಗರ ಜಿಲ್ಲೆಯ ಸಿಬಿಎಸ್ಇ ಶಾಲೆಗಳ ಅಧಿಕೃತ ಪಟ್ಟಿ: ಪೋಷಕರ ಗಮನಕ್ಕೆ ಶಿಕ್ಷಣ ಇಲಾಖೆ ಪ್ರಕಟ