April 16, 2026

Hampi times

Kannada News Portal from Vijayanagara

ಕರವೇ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಎಂ.ಭರತ್‌ಕುಮಾರ್ ನೇಮಕ

https://youtu.be/NHc6OMSu0K4?si=SI_K4goOPEgwo6h2

HAMPI TIMES

ಹೊಸಪೇಟೆ: ಕರ್ನಾಟಕ ರಕ್ಷಣಾ ವೇದಿಕೆ(ಹೆಚ್.ಶಿವರಾಮೇಗೌಡ ಬಣ) ಯುವ ಘಟಕದ ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಎಂ.ಭರತ್‌ಕುಮಾರ್ ನೇಮಕಗೊಂಡಿದ್ದಾರೆ ಎಂದು ರಾಜ್ಯಧ್ಯಕ್ಷ ಹೆಚ್.ಶಿವರಾಮೇಗೌಡ್ರು ತಿಳಿಸಿದ್ದಾರೆ.

 

ಕನ್ನಡ ನಾಡು ನುಡಿ, ಜಲ, ಗಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯದಲ್ಲಿ ಕನ್ನಡಾಂಬೆಯ ಸುಪುತ್ರರಾಗಿ ಒಮ್ಮತದಿಂದ ಶ್ರಮಿಸಬೇಕು. ಯಾವುದೇ ದ್ವೇಷಾಸೂಯೆ, ವ್ಯಕ್ತಿಗಳ ಪ್ರತಿಷ್ಠೆಗೆ ಅವಕಾಶ ಆಗದಂತೆ ಸಂಘದ ಗುರಿ ಧ್ಯೇಯಕ್ಕೆ ಬದ್ಧರಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿಜಯನಗರ ಜಿಲ್ಲೆಯಲ್ಲಿ ಯುವ ಘಟಕದ ಸಂಘಟನೆಯನ್ನು ಕ್ರಿಯಾಶೀಲರಾಗಿ ಮುನ್ನಡೆಸಿಕೊಂಡು, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೇ, ತಮ್ಮ ಜವಾಬ್ಧಾರಿಯನ್ನು ದುರುಪಯೋಗಡಸಿಕೊಳ್ಳದಂತೆ ಮುಂದುವರೆಯಬೇಕೆಂದು ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಯುವ ಘಟಕವನ್ನು ಸಮರ್ಪಕವಾಗಿ ಸಂಘಟಿಸಿ, ಕರವೇ ನಿಯಮಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುವುದಾಗಿ ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಎಂ.ಭರತ್‌ಕುಮಾರ ತಿಳಿಸಿದರು.
ಜಿಲ್ಲಾಧ್ಯಕ್ಷ ಜಿ.ರಾಜಶೇಖರ, ಜಿಲ್ಲಾ ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಕಟಿಗಿ ಸುರೇಶ, ಸಂಘಟನೆಯ ಮುಖಂಡರಾದ ಕುರುಗೋಡು ಮೃತ್ಯುಂಜಯ, ಕುಡುತಿನ ಶಿವಕುಮಾರ, ದುರ್ಗೇಶ, ರವಿ, ಮಂಜು, ಎ.ಬಸವರಾಜ ಇತರರು ಇದ್ದರು.

 

Please follow and like us:

 

 

 

 

 

Translate »
[t4b-ticker]
error: Content is protected !!