October 11, 2025

Hampi times

Kannada News Portal from Vijayanagara

ಪುಟ್ಟ ಕನಸು : ಟಿ. ದುರುಗಮ್ಮ

https://youtu.be/NHc6OMSu0K4?si=SI_K4goOPEgwo6h2

 

ಹೊಸೂರು ಎಂಬ ಊರಿನಲ್ಲಿ ಹರೀಶ ಎಂಬ ಹುಡುಗ ತನ್ನ ತಾಯಿ ಗೀತಮ್ಮಳೊಂದಿಗೆ ವಾಸವಾಗಿದ್ದ. ಅವರು ಒಂದು ಪುಟ್ಟ ಗುಡಿಸಲಿನಲ್ಲಿ ಚಹಾದ ಅಂಗಡಿ ನೆಡೆಸುತ್ತಿದ್ದರು. ತಾಯಿ ಗೀತಮ್ಮ ಚಹಾ ಅಂಗಡಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಳು. ಅವರ ಚಹಾದ ಅಂಗಡಿ ಪೋಲೀಸ್ ಸ್ಟೇಷನ್ ಎದುರಿಗೆ ಇತ್ತು. ಆಗಾಗ ಹರೀಶ್ ಪೋಲೀಸ್ ಸ್ಟೇಷನ್‌ಗೆ ಹೋಗಿ ಚಹಾ ಕೊಟ್ಟು ಬರುತ್ತಿದ್ದ.

ಹರೀಶ ಪೋಲೀಸ್ ಸ್ಟೇಷನ್‌ಗೆ ಆಗಾಗ ಚಹಾ ಕೊಡಲು ಹೋಗುತ್ತಿದ್ದರಿಂದ ಅಲ್ಲಿ ಏನು ನೆಡೆಯುತ್ತಿದೆ ಎಂಬುದನ್ನು ಗಮನಿಸುತ್ತದ್ದ. ಪೋಲೀಸ್ ಅಧಿಕಾರಿ ಹೇಗೆ ಇರುತ್ತಾರೆ? ಅವರ ಗತ್ತು ಗಾಂಭೀರ್ಯ ಹೇಗೆ ಇರುತ್ತದೆ? ಪೋಲೀಸರು ಹೇಗೆ ಇರುತ್ತಾರೆ? ಅವರ ಕೆಲಸಗಳೇನು? ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ.ಚಒಂದು ರಾತ್ರಿ ಎಲ್ಲಾ ಕೆಲಸ ಮುಗಿಸಿ ಮಲಗಿದಾಗ ಅವನ ಪೋಲೀಸ್ ಆಫೀಸರ್ ಅವರ ಚಿತ್ರಣ ಕಣ್ಣಮುಂದೆ ಬಂದಿತು. ನಾನೂ ಏಕೆ ಪೋಲೀಸ್ ಆಫೀಸರ್ ಆಗಬಾರದು? ಎಂದು ಯೋಚಿಸಿದ. ತನ್ನ ಮನದ ಆಸೆಯನ್ನು ತಾಯಿಗೂ ಹೇಳಿದ. ಆಯ್ತಪ್ಪ, ನಿನಗೆ ಏನು ಇಷ್ಟವೋ ಅದೇ ಆಗು ಎಂದಳು ತಾಯಿ.

ಮರುದಿನ ಹರೀಶ್ ಪೋಲೀಸ್ ಸ್ಟೇಷನ್‌ಗೆ ಚಹಾ ಕೊಡಲು ಹೋದ. ಅಲ್ಲಿದ್ದ ಪೋಲೀಸ್ ಅಧಿಕಾರಿಯನ್ನು ಭೇಟಿಯಾಗಿ ತನ್ನ ಆಸೆಯನ್ನು ಹೇಳಿದ. ಅದಕ್ಕೆ ಅವರು ಅವನ ಬೆಚ್ಚು ತಟ್ಟಿ, ಚೆನ್ನಾಗಿ ಓದಲು ಹೇಳಿದರು. ಅವರ ಮಾರ್ಗದರ್ಶನಂತೆ ಹರೀಶ ಚೆನ್ನಾಗಿ ಓದಿದ. 10ನೇ ತರಗತಿ, ಪಿಯುಸಿ ಮುಗಿಸಿದ. ಮುಂದೆ ಸಮೀಪದ ಪದವಿ ಕಾಲೇಜಿಗೂ ಸೇರಿದ. ಆದರೆ ಆ ವೇಳೆಗಾಗಲೇ ಪೋಲೀಸ್ ಅಧಿಕಾರಿ ವರ್ಗವಾಗಿದ್ದರು. ಆದರೆ ಅವರ ಫೋನ್ ನಂಬರ್ ಇಟ್ಟುಕೊಂಡಿದ್ದ ಹರೀ ಆಗಾಗ ಅವರೊಂದಿಗೆ ಮಾತನಾಡಿ ಅವರ ಸಲಹೆ ಪಡೆಯುತ್ತಿದ್ದ. ಅವರು ಹೇಳಿದಂತೆ ಪದವಿ ಪಡೆದ ನಂತರ ಪೋಲೀಸ್ ಪರೀಕ್ಷೆ ಬರೆಯಲು ಸಿದ್ದನಾದ. ಪರೀಕ್ಷೆಯ ದಿನದಂದು ಅಮ್ಮನ ಆಶೀರ್ವಾದ ಪಡೆದು ಪರೀಕ್ಷೆ ಬರೆದ. ಪರೀಕ್ಷೆ ಚೆನ್ನಾಗಿ ಬರೆದಿದ್ದರಿಂದ ಉತ್ತಮ ಅಂಕಗಳು ಬಂದವು.

ಪೋಲೀಸ್ ಇಲಾಖೆಯಲ್ಲಿ ಕೆಲಸವೂ ದೊರೆಯಿತು. ತಾನು ಅಂದುಕೊಂಡಂತೆ ಪೋಲೀಸ್ ಆಫಿಸರ್ ಆಗಿದ್ದ. ಈಗ ತಾಯಿಯನ್ನು ಚಹಾದ ಅಂಗಡಿಯಿಂದ ಬಿಡಿಸಿದ. ಪಟ್ಟಣದಲ್ಲಿ ಒಂದು ಪುಟ್ಟ ಮನೆಯಲ್ಲಿ ತಾಯಿಯೊಂದಿಗೆ ಸಂತೋಷದಿಂದ ವಾಸವಾಗಿದ್ದ. ಪೋಲೀಸ್ ಆಫೀಸರ್ ಆಗಲು ಮಾರ್ಗದರ್ಶನ ಮಾಡಿದ ಪೋಲೀಸ್ ಆಫೀಸರರ ಗತ್ತು, ಗಾಂಭೀರ್ಯದಂತೆ ತಾನೂ ಪ್ರಾಮಾಣಿಕವಾಗಿ ಕೆಲಸ ಮಾಡಿದ. ಎಲ್ಲರಿಂದ ಒಳ್ಳೆಯ ಆಫೀಸರ್ ಎಂದು ಹೆಸರು ಮಾಡಿದ. ಜೀವನದಲ್ಲಿ ಒಳ್ಳೆಯ ಕನಸಿರಬೇಕು, ಅದನ್ನು ಸಾಧಿಸಲು ಛಲ ಇರಬೇಕು ಅಂತ ಹೇಳೋದು ಅದಕ್ಕೆ ಅಲ್ಲವೇ?

ಟಿ. ದುರುಗಮ್ಮ. 9ನೇ ತರಗತಿ ಸರ್ಕಾರಿ ಪ್ರೌಢಶಾಲೆ ಬಸರಕೋಡು. ಹ.ಬೊ.ಹಳ್ಳಿ(ತಾ) ವಿಜಯನಗರ(ಜಿ)

 

ಜಾಹೀರಾತು
error: Content is protected !!