April 17, 2025

Hampi times

Kannada News Portal from Vijayanagara

ಬಕ್ರೀದ್ ಸಂಭ್ರಮ‌, ಶಾಂತಿ ಸಮೃದ್ಧಿಗಾಗಿ ಪ್ರಾರ್ಥನೆ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್‌  ಹೊಸಪೇಟೆ

ಬಕ್ರೀದ್‌ ಹಬ್ಬದ ನಿಮಿತ್ತ ನಗರದ ಐಎಸ್ಸಾರ್ ರಸ್ತೆಯ ಈದ್ಗಾ ಮೈದಾನದಲ್ಲಿ ನಗರದ ಮುಸ್ಲಿಂ ಸಮುದಾಯದ ಗಣ್ಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿ ನಾಡಿನಲ್ಲಿ ಶಾಂತಿ, ಸಮೃದ್ಧಿಗಾಗಿ  ಸೋಮವಾರ ಪ್ರಾರ್ಥನೆ ಸಲ್ಲಿಸಿದರು.

ನಂತರ ಸಮುದಾಯದ ಸದಸ್ಯರು ಪರಿವಾರ ಹಾಗೂ ಸ್ನೇಹಿತರೊಂದಿಗೆ ಬೆರೆತು ಪರಸ್ಪರ ಶುಭಕೋರಿದರು. ಬಕ್ರೀದ್ ಹಬ್ಬವು ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾಗಿದೆ.  ಈ ಹಬ್ಬವು ಇಸ್ಲಾಂ ಧರ್ಮದ ಪವಿತ್ರ ಘಟನೆಗಳ ಸ್ಮರಣೆಗಾಗಿ ಆಚರಿಸಲ್ಪಡುತ್ತದೆ. ಉಳ್ಳವರು ಅಗತ್ಯತೆಗಳನ್ನು ಆಧರಿಸಿ ದಾನ ಮಾಡುತ್ತಾರೆ. ಸಮುದಾಯದ ಮನೆನಗಳಲ್ಲಿ ಬಕ್ರಿಗಳ ಬಲಿಕೊಡಲಾಗುತ್ತದೆ. ಹೊಸವಸ್ತ್ರ ಧರಿಸಿ, ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸಮುದಾಯದ ಮನೆ ಮನೆಗಳಲ್ಲಿ ಆತಿಥ್ಯ ಅದ್ದೂರಿಯಾಗಿತ್ತು. ಅಂಜುಮನ್‌ ಕಮಿಟಿ ಪದಾಧಿಕಾರಿಗಳು, ಸದಸ್ಯರು,  ಉದ್ಯಮಿಗಳು ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.

 

ಜಾಹೀರಾತು
error: Content is protected !!