https://youtu.be/NHc6OMSu0K4?si=SI_K4goOPEgwo6h2
ರೈತರು ಪರಿಸರವನ್ನ ದೈವದಂತೆ ಕಾಣುತ್ತಾರೆ
ಹಂಪಿ ಟೈಮ್ಸ್ ಹೊಸಪೇಟೆ
ರೈತರು ಉದ್ದಾರವಾದ್ರೆ ಮಾತ್ರ ಪರಿಸರ ಸಂರಕ್ಷಣೆಯಾಗಬಲ್ಲದು. ರೈತರು ಪರಿಸರವನ್ನು ದೈವದಂತೆ ಕಾಣುತ್ತಾರೆ. ವಿಜಯನಗರ ಕಾಲುವೆಗಳು ನಗರದಲ್ಲಿ ಹಾದುಹೋಗಿದ್ದರೂ ಕುಡಿಯುವ ನೀರಿನ ಬವಣೆ ಕೊನೆಗೊಂಡಿಲ್ಲ. ಕೃಷಿ ಭೂಮಿಗಳು ಹಸಿರಿನಿಂದ ಕಂಗೊಳಿಸುತ್ತವೆ. ವಿಜಯನಗರ ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ಹಂಪಿ ರಸ್ತೆಯ ಮಲಪನಗುಡಿ ಹೊರವಲಯದಲ್ಲಿರುವ ಸೌಜನ್ಯ ಎಸ್ಟೇಟ್ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯತ್, ಅರಣ್ಯ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಹಾಗೂ ಸೌಜನ್ಯ ಎಸ್ಟೇಟ್ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಮಾತನಾಡಿದರು. ತುಂಗಭದ್ರ ಜಲಾಶಯ ಪಕ್ಕದಲ್ಲಿದ್ದರೂ ಜನರು ಕುಡಿಯುವ ನೀರಿಗೆ ಪರದಾಡಬೇಕಾಗಿದೆ. ಕ್ಷೇತ್ರದ ಜನತೆಗೆ ಕುಡಿಯುವ ನೀರು ಪೂರೈಸಲು ಕೋಟ್ಯಾಂತರ ರೂಪಾಯಿ ಅನುದಾನದ ಅಗತ್ಯವಿದೆ. ಕುಡಿಯುವ ನೀರಿನ ಯೋಜನೆಗಳ ಸಾಕಾರಕ್ಕೆ ಸರ್ಕಾರ ಸ್ಪಂದನೆಯೂ ಇದೆ. ಗಣಿಗಾರಿಕೆ ಇಲ್ಲದ್ದರಿಂದ ಅಕ್ಕಪಕ್ಕದ ಜಿಲ್ಲೆಯ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಜನರು ಹೊಸಪೇಟೆಯನ್ನೆ ವಸತಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಕರೆಗಟ್ಟಲೆ ಭೂಮಿ ಗವರ್ನರ್ ಹೆಸರಿನಲ್ಲಿರುವುದರಿಂದ ಅದನ್ನು ಈ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಮಾಡಿಕೊಡಲು ಗ್ರಾಮದ ಮುಖಂಡರು ಹಾಗೂ ಮಾಜಿ ಹುಡಾ ಅಧ್ಯಕ್ಷ ಎಲ್.ಸಿದ್ಧನಗಾಡ ಶಾಸಕರಲ್ಲಿ ಮನವಿ ಮಾಡಿದರು.
ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಎಂ.ಮೇತ್ರಿ ಮಾತನಾಡಿ, ಈ ಪ್ರದೇಶಕ್ಕೆ ತನ್ನದೆ ಆದ ಪ್ರಾದೇಶಿಕ ಹಿನ್ನೆಲೆಯಿದೆ. ಇಲ್ಲಿ ಆದಿ ಮಾನವ ವಾಸಮಾಡಿದ್ದಕ್ಕೆ ಹಲವಾರು ಕುರುಹುಗಳಿವೆ. ಪಶುಪಾಲನೆ ಹಾಗೂ ಕೃಷಿಗಾರಿಕೆ ಅವರ ಪ್ರಧಾನ ಕುಲಕಸುಬಾಗಿತ್ತು. ವಿಜಯನಗರ ಸಾಮ್ರಜ್ಯದ ಮೇಲೆ ಅದು ಅತೀವವಾದ ಪರಿಣಾಮ ಬೀರಿತ್ತು ಎಂದು ಮಲಪನಗುಡಿಯ ಸ್ಥಳ ಮಹಾತ್ಮೆಯನ್ನು ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿ, ಇಲ್ಲಿನ ಕುಡಿಯುವ ನೀರು ರಸ್ತೆ ಚರಂಡಿಯAಥ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಅರಣ್ಯ ಇಲಾಖೆಯವರು ೪೦೦ ಸಸಿಗಳನ್ನು ನೆಟ್ಟು ಎಮ್.ಎಸ್.ಪಿ.ಎಲ್ ನವರು ಕೊಡುಗೆಯಾಗಿ ನೀಡಿದ ನೂರು ಟ್ರೀಗಾರ್ಡ್ಗಳನ್ನು ಅಳವಡಿಸಿದರು. ಈ ಸಂದರ್ಭದಲ್ಲಿ ಎಂ.ಎಸ್.ಪಿಎಲ್.ನ ಅಧಿಕಾರಿ ರಮೇಶ ಮಾತನಾಡಿ, ವರ್ಷವೊಂದಕ್ಕೆ ಐದು ಸಾವಿರ ಗಿಡ ನೆಡುವ ಸಂಕಲ್ಪ ಮಾಡಿದ್ದೇವೆ. ಈಗಾಗಲೆ ೨೦ ಲಕ್ಷ ಮರಗಳನ್ನು ನೆಟ್ಟಿದ್ದಾಗಿ ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ತಳವಾರ ಚಂದ್ರಕಲಾ ಅಧ್ಯಕ್ಷತೆವಹಿಸಿದ್ದರು. ಆರ್.ರಾಜು ಭೂರಟ್, ಸೈಯದ್ ಮೆಹಬೂಬ್, ಉಪಾಧ್ಯಕ್ಷ ಹೊಸಳ್ಳಿ ದೊರೆರಾಜ್, ಪಿಡಿಒ ಹನುಮಂತಪ್ಪ ಕಂಬಾರ, ಸದಸ್ಯ ಕ್ಯಾರ ವೆಂಕಟೇಶ ಮತ್ತಿತರರು ಭಾಗವಹಿಸಿದ್ದರು. ಸಂಗೀತ ಶಿಕ್ಷಕ ಗುರುರಾಜ ಹೆಚ್. ಹಾಗೂ ಅನುಷ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಲಿಯಾಕತ್ ಅಲಿ ಹೊಸಮನಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಯಾನಂದ ಕಿನ್ನಾಳ್ ನಿರೂಪಿಸಿದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ