February 28, 2026

Hampi times

Kannada News Portal from Vijayanagara

ಸಕ್ಕರೆ ಕಾರ್ಖಾನೆ ನಾನೇ ಹಾಕ್ತಿನಿ: ಶಾಸಕ ಗವಿಯಪ್ಪ ಘೋಷಣೆ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ
ಮಾಜಿ ಸಚಿವ ಆನಂದಸಿಂಗ್ ಮತ್ತು ಶಾಸಕ ಗವಿಯಪ್ಪನ ನಡುವಿನ ಸಕ್ಕರ ಕಾರ್ಖಾನೆ ಹಗ್ಗ ಜಗ್ಗಾಟದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಸರ್ಕಾರದ ಸ್ಥಳ ಸಿಕ್ಕರೆ ಸರಿ ಇಲ್ಲದಿದ್ದರೆ ಖಾಸಗಿ ಭೂಮಿಯಲ್ಲೆ ನಾನೇ ಸಕ್ಕರೆ ಕಾರ್ಖಾನೆ ಹಾಕ್ತಿನಿ ಎಂದು ಶಾಸಕ ಎಚ್.ಆರ್.ಗವಿಯಪ್ಪ ಘೋಷಿಸಿದರು.

 

ನಗರದ ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟ್ರಾಫಿಕ್ ಸಿಗ್ನಲ್‌ಗೆ ಚಾಲನೆ ನೀಡಿ ಮಾತನಾಡಿದರು. ಸಕ್ಕರೆ ಕಾರ್ಖಾನೆ ಆರಂಭಕ್ಕೆ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಸಕ್ಕರೆ ಕಾರ್ಖಾನೆ ರಾತ್ರೋರಾತ್ರಿ ಸಿದ್ಧ ಆಗುವಂತಹದ್ದಲ್ಲ. ಕಾಲಾವಕಾಶ ಬೇಕಾಗುತ್ತದೆ. ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರದ ಭೂಮಿಯನ್ನು ಗುರುತಿಸಲಾಗುತ್ತಿದೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಕುರಿತು ಸಿಎಂ ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆದಿದೆ. ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ. ಸರ್ಕಾರಿ ಭೂಮಿಗೇ ಏನಾದ್ರೂ ತಾಂತ್ರಿಕೆ ತೊಂದರೆಗಳು ಅಡ್ಡಿಯಾದ್ರೆ ಖಾಸಗಿ ಭೂಮಿಯಲ್ಲಿ ನಾನೇ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುತ್ತೇನೆ. ರೈತರು ಕಬ್ಬು ಬೆಳೆಯಲು ಎದೆಗುಂದಬೇಕಿಲ್ಲ. ಈ ಹಿಂದೆ ಹಂಪಿ ಶುಗರ್‍ಸ್‌ಗೆ ಹೆಸರಿಗೆ ನೀಡಬೇಕೆಂದಿರುವ ಜಾಗದಲ್ಲಿ ಬಡವರಿಗೆ ಆಶ್ರಯ ಮನೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆ ಭೂಮಿ ಸರ್ಕಾರಿ ಭೂಮಿಯಾಗಿರುವುದರಿಂದ ಖಾಸಗಿಯವರ ಇಚ್ಚೆಗೆ ತಕ್ಕಂತೆ ನೀಡಲು ಬರುವುದಿಲ್ಲ. ಆ ಸ್ಥಳದಲ್ಲೆ ಸಕ್ಕರೆ ಕಾರ್ಖಾನೆ ಆರಂಭಿಸುತ್ತೇವೆ ಎಂದವರಿಗೆ ಮಾತಿನಲ್ಲೆ ತಿರುಗೇಟು ನೀಡಿದರು.

ಹಂಪಿಯ ಅಂಗಳದಂತಿರುವ ಹೊಸಪೇಟೆ ಪ್ರವಾಸಿಗರನ್ನು ಸೆಳೆಯುತ್ತಿದೆ. ದಿನದಿನಕ್ಕೂ ಸಂಚಾರ ದಟ್ಟಣೆಯಾಗುತ್ತಿದೆ. ಜನರಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವುದರ ಜೊತೆಗೆ ಅಪಘಾತಗಳನ್ನು ತಡೆಯಲು ಸಿಗ್ನಲ್‌ಗಳ ಸಹಕಾರಿಯಾಗುತ್ತವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಅವರು ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚು ಉತ್ಸುಕತೆಯಿಂದ ಕಾರ್ಯನಿರ್ವಹಿಸಿದ್ದಾರೆ. ವಿಜಯನಗರ ಜಿಲ್ಲೆಗೆ ಸೈಬರ್ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆ ಆರಂಭಿಸುತವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಕಾಸ್ಟ್ ಆಫ್ ಲಿವಿಂಗ್ ಹೆಚ್ಚಾಗಿದೆ. ಈ ಊರಿಗೆ ಕೆಲಸ ಮಾಡಲು ಬರುವವರು ಇಲ್ಲಿಯ ಬಾಡಿಗೆಗೆ ಬೆದರುತ್ತಿದ್ದಾರೆ. ಜಿಲ್ಲೆಯ ಹೊಸಪೇಟೆ ಹೊರತುಪಡಿಸಿ ಇನ್ನುಳಿದ ತಾಲೂಕುಗಳಲ್ಲಿ ವಿವಿಧ ಇಲಾಖೆಯಲ್ಲಿ ಹೆಚ್ಚಿನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಹಂತಹಂತವಾಗಿ ಸರಿಪಡಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಸಂಚಾರಿ ಠಾಣೆ ಸಿಪಿಐ ಶ್ರೀನಿವಾಸ ಮೇಟಿ, ಟ್ರಾಫಿಕ್ ಪೊಲೀಸರು ಇತರರು ಇದ್ದರು.

Please follow and like us:

 

 

 

 

 

 

Translate »
[t4b-ticker]
error: Content is protected !!