February 27, 2026

Hampi times

Kannada News Portal from Vijayanagara

ಬಿಜೆಪಿ ಟಿಕೆಟ್ ಕೊಡಿಸುವುದಾಗಿ  2.55 ಕೋಟಿ ವಂಚನೆ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್‌ ಕೊಟ್ಟೂರು:
ಸಂಬಂಧ ಪಟ್ಟವರನ್ನು ತನಿಖೆ ಮಾಡುವಂತೆ ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರ ಆಗ್ರಹ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ (ಎಸ್ ಸಿ ಮೀಸಲು) ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ಪುಸಲಾಯಿಸಿ ಸಿ.ಶಿವಮೂರ್ತಿ ಬಿನ್ ಸಿ.ಬಸಪ್ಪ  ನಿವೃತ್ತ ಪಿಡಬ್ಲೂಡಿ ಇಂಜಿನಿಯರ್ ಅವರಿಂದ 2.55 ಕೋಟಿ ಪಡೆದು ವಂಚನೆ ಮಾಡಿದ್ದು,ಇದಕ್ಕೆ ನ್ಯಾಯ ಒದಗಿಸಿ ಹಣ ವಾಪಸ್ಸು ಕೊಡಿಸುವಂತೆ ಶಿವಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
ಪತ್ರದಲ್ಲಿ:, ಕೊಟ್ಟೂರು ತಾಲೂಕು ಬೆನಕನಹಳ್ಳಿ ಗ್ರಾಮದ ಬಿಜೆಪಿ ಮುಖಂಡರಾಗಿದ್ದ ರೇವಣಸಿದ್ದಪ್ಪ ಬಿನ್ ಸಿದ್ಧಲಿಂಗಪ್ಪ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡನಾದ ಶೇಖರ್ ಎನ್.ಪಿ ಬಿನ್ ಪುರುಷೋತ್ತಮ ನಿರ್ಲಕಟ್ಟಿ ಮೇಲೆ ಕ್ರಮ ಕೈಗೊಂಡು ಹಣ ಕೊಡಿಸುವಂತೆ ಕೋರಿದ್ದಾರೆ.
ರೇವಣಸಿದ್ದಪ್ಪ ತನ್ನ ನಿವೃತ್ತಿ ಕಾರ್ಯಕ್ರಮದಲ್ಲಿ ಮತ್ತು ಇತರೆ ಇನ್ನೆರಡು ಕಾರ್ಯಕ್ರಮದಲ್ಲಿ ಪರಿಚಯವಾಗಿ 2023 ರ ವಿಧಾನ ಸಭಾ ಚುನಾವಣೆಯಲ್ಲಿ  ಸಂಧರ್ಭದಲ್ಲಿ  ಪದೇ ಪದೇ ಭೇಟಿ ಮಾಡಿ ಎಂ.ಎಲ್.ಎ ಟಿಕೆಟ್ ಕೊಡಿಸುವುದಾಗಿ ಪುಸಲಾಯಿಸಿ ನನಗೆ ಟಿಕೆಟ್ ಮೇಲೆ ಶ್ರದ್ಧೆ ಬರುವ ರೀತಿಯಲ್ಲಿ ನಂಬಿಸಿ, ನಂತರ 2022 ಅಕ್ಟೋಬರ್-22 ರಂದು ಬೆಂಗಳೂರಿಗೆ ಕರೆದುಕೊಂಡು ಹೋಗಿ ಹೋಟೆಲ್  ಒಂದರಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಎನ್.ಪಿ ಅವರನ್ನು ಪರಿಚಯಿಸುತ್ತಾರೆ.
ಶೇಖರ್ ಎನ್.ಪಿ ಅವರು ನನ್ನನ್ನು ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬೆಂಗಳೂರಿನ ಬಿಜೆಪಿ ಕಚೇರಿಗೆ ಕರೆದುಕೊಂಡು ಹೋಗಿ ,ಕಟೀಲ್ ಅವರು ನನ್ನ ಆತ್ಮೀಯ ಸ್ನೇಹಿತರು ಎಂದು ಪರಿಚಯಿಸುತ್ತಾರೆ, ಕಟೀಲ್ ಅವರು ನನ್ನೊಂದಿಗೆ ಮಾತನಾಡಿ ಟಿಕೆಟ್ ವಿಚಾರ ಶೇಖರ್ ಎನ್.ಪಿ ಅವರೊಂದಿಗೆ ಮಾತನಾಡಿ ಎಂದು ತಿಳಿಸುತ್ತಾರೆ.   ನಂತರ ಶೇಖರ್ ಎನ್. ಪಿ ಹಣವನ್ನು ಕೇಳುತ್ತಾರೆ ಒಂದು ವೇಳೆ ಟಿಕೆಟ್ ಸಿಗದಿದ್ದ ಪಕ್ಷದಲ್ಲಿ ಹಣವನ್ನು ವಾಪಸ್ ಕೊಡುವುದಾಗಿ ತಿಳಿಸಿರುತ್ತಾರೆ.  ಇದರಂತೆಯೇ 2022 ಅಕ್ಟೋಬರ್ 9 ರಿಂದ ಪ್ರಾರಂಭವಾದ ಹಣದ ವ್ಯವಹಾರ ಏಪ್ರಿಲ್ 2023ಕ್ಕೆ ರೂ. 2 ಕೋಟಿ 55 ಲಕ್ಷದ ವರೆಗೂ ಹಣ ಪಡೆದುಕೊಂಡಿರುತ್ತಾರೆ.
ಎಂದು ಬರೆದ ಪತ್ರ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ.  ಈ ಪತ್ರವನ್ನು ಅವಲೋಕಿಸಿದ ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರು, ಟಿಕೆಟ್ ಆಸೆಯಲ್ಲಿ ಬಂದ ಕೆಲವರು ಬಿಜೆಪಿ ಟಿಕೆಟ್ ಪಡೆಯಲೆಂದು ಯ್ಯಾರ್ಯಾರೋ ಕೈಯಲ್ಲಿ ದುಡ್ಡು  ಕೊಟ್ಟು, ಈ ಬಗ್ಗೆ  ಪತ್ರವನ್ನು ಬರೆದು ಸಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿರುವುದು, ಪಕ್ಷಕ್ಕೆ ಕಳಂಕ, ಈ ಸಂಬಂಧ, ಅಧಿಕಾರಿಗಳು ಈ ವಿಷಯ ಕುರಿತಂತೆ ಸತ್ಯಾಸತ್ಯೆತೆ ಬಗ್ಗೆ  ತನಿಖೆ ಕೈಗೊಂಡು ಪಕ್ಷದ ಕಾರ್ಯಕರ್ತರಿಗೆ ಸತ್ಯದ ನ್ಯಾಯ ನೀಡುವಂತೆ ಆಗ್ರಹಿಸಿದರು.
“2023 ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗೆಂದು ದುಡ್ಡು ಕೊಟ್ಟಿರುವುದು ಸತ್ಯ,ಟಿಕೆಟ್ ಸಿಗದಿದ್ದ ಪಕ್ಷದಲ್ಲಿ ಹಣ ವಾಪಸು ಕೊಡುವುದಾಗಿ ಹೇಳಿದ್ದರು, ಅದರಂತೆ ಅಕ್ಟೋಬರ್ -10 ರ ವರೆಗೆ ಗಡುವು ಕೊಟ್ಟಿದ್ದಾರೆ, ಅಲ್ಲಿಯವರೆಗೆ ಕಾಯುವೆ, ಒಂದು ವೇಳೆ ಹಣ ವಾಪಸು ಕೊಡದಿದ್ದರೆ,ನಾನೆ ನೇರವಾಗಿ ಮಾದ್ಯಮದ ಮುಂದೆ ಬಂದು, ಯಾರ್ಯಾರಿಗೆ ಎಷ್ಟು ಕೊಟ್ಟಿರುವೆ ಎಂಬ ಬಗ್ಗೆ ಸಂಪೂರ್ಣ ದಾಖಲೆ, ಲೆಕ್ಕದೊಂದಿಗೆ ಮಾಧ್ಯಮದ ಮಿತ್ರರಿಗೆ ಲೆಕ್ಕ ಪತ್ರ ಕೊಡುವೆ. ಪ್ರಸ್ತುತ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ, ನಾನು ಬರೆದ ಪತ್ರ ಅಲ್ಲ.”
             -ಸಿ.ಶಿವಮೂರ್ತಿ ಬಿನ್. ಸಿ.ಬಸಪ್ಪ ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್,ವಾಸ ಕೊಟ್ಟೂರು.
ಸಿ.ಶಿವಮೂರ್ತಿ ನಿವೃತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಬರೆದ ಪತ್ರವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಅವರು ಸಹಿ ಮಾಡಿದ ಪತ್ರ ನನ್ನಲ್ಲಿದೆ,ನನ್ನನ್ನು ತೇಜೋವದೆ  ಮಾಡಲೆಂದೇ, ಪತ್ರದಲ್ಲಿ ನನ್ನ ಹೆಸರನ್ನು ಬರೆದಿದ್ದಾರೆ, 2023 ಚುನಾವಣೆಯಲ್ಲಿ ಬಿಜೆಪಿ  ಟಿಕೆಟ್ ಕೊಡಿಸಲು ನಾನು ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ಸತ್ಯ, ಹೋಟೆಲ್ ನಲ್ಲಿ ಶೇಖರ್ ಎನ್.ಪಿ ಅವರನ್ನು ಪರಿಚಯಿಸಿದ್ದು ಸತ್ಯ, ಆದರೆ ಹಣದ ವ್ಯವಹಾರದಲ್ಲಿ ನಾನು ಇಲ್ಲ. ಅದು ಯಾವುದೂ ನನಗೆ ಗೊತ್ತಿಲ್ಲ ,ಆದರೂ ನನ್ನ ಹೆಸರು ಬಂದಿದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಮುಂದಾಗುವೆ.”
           -ರೇವಣಸಿದ್ದಪ್ಪ ಬಿನ್ ಸಿದ್ಧಲಿಂಗಪ್ಪ. ಗ್ರಾಮ  ಬೆನಕನಹಳ್ಳಿ, ಕೊಟ್ಟೂರು (ತಾ).
Please follow and like us:

 

 

 

 

 

 

Translate »
[t4b-ticker]
error: Content is protected !!