March 1, 2026

Hampi times

Kannada News Portal from Vijayanagara

VSKUB ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಸನ್-1

https://youtu.be/NHc6OMSu0K4?si=SI_K4goOPEgwo6h2

 

ಪ್ರಾಯೋಗಿಕ ಅನುಭವದ ಕಲಿಕೆ ಅತ್ಯಂತ ಪರಿಣಾಮಕಾರಿ: ಡಾ.ಸಾಹೇಬ ಅಲಿ ನಿರಗುಡಿ

ಹಂಪಿ ಟೈಮ್ಸ್ ಬಳ್ಳಾರಿ:

 

ಕಲಿಕೆಯ ಸಂದರ್ಭದಲ್ಲಿ ಬದಲಾವಣೆ ಮತ್ತು ತಂತ್ರಜ್ಞಾನಕ್ಕೆ ಪೂರಕವಾಗಿ ನೂತನ ಪ್ರಯೋಗಗಳಿಗೆ ಮುಂದಾದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸಾಹೇಬ್ ಅಲಿ ಹೆಚ್.ನಿರಗುಡಿ ಅವರು ಅಭಿಪ್ರಾಯಪಟ್ಟರು.
ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಬುಧವಾರ ವಿ.ಎಸ್.ಕೆ. ಯೂನಿವರ್ಸಿಟಿ ವಾಲಿಬಾಲ್ ಪ್ರೀಮಿಯರ್ ಲೀಗ್ ಸೀಸನ್-1 ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಆಟ ಪಾಠಗಳ ಮೂಲಕ ದೈಹಿಕ ಶಿಕ್ಷಣದ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲವಾಗಿದ್ದು, ವಿಶ್ವವಿದ್ಯಾಲಯದ  ಮೆರಗನ್ನು ಹೆಚ್ಚಿಸಿದ್ದಾರೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಮಾಜಿ ವಾಲಿಬಾಲ್ ಕ್ರೀಡಾಪಟು ಡಾ.ಪ್ರವೀಣ್ ಸಿಂಗ್ ಅವರು ವಿಶೇಷ ಆಹ್ವಾನಿತಾರಾಗಿ ಭಾಗವಹಿಸಿ ಮಾತನಾಡಿ, ಯಾವುದೇ ಕ್ರೀಡೆಯಲ್ಲಿ ಯಶಸ್ಸು ಗಳಿಸಲು ಸತತ ಸಾಧನೆ  ಮತ್ತು ಶ್ರಮ ಹೆಚ್ಚಿರುವುದರ ಜೊತೆಗೆ ಫ್ಯಾಷನ್ ಮತ್ತು ವಿಜ್ಞಾನ, ಪ್ರೀತಿ ಕಾರಣವಾಗುತ್ತದೆ ಎಂದರು.

ಡಾ.ಶಶಿಧರ್ ಕೆಲ್ಲೂರ್ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ.ಸಂಪತ್ ಕುಮಾರ್, ಶಿವರಾಮ ರಾಗಿ, ಮಹೇಶಬಾಬು, ಪಾಪಯ್ಯ, ಕ್ರೀಡಾಪಟುಗಳು ಹಾಗೂ ಇತರರು ಉಪಸ್ಥಿತರಿದ್ದರು.

Please follow and like us:

 

 

 

 

 

 

Translate »
[t4b-ticker]
error: Content is protected !!