https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹಗರಿಬೊಮ್ಮನಹಳ್ಳಿ:

ಜೆಸಿಐ ಹಗರಿಬೊಮ್ಮನಹಳ್ಳಿ ಸನ್‌ಫ್ಲವರ್ ಘಟಕದ ನೂತನ ಅಧ್ಯಕ್ಷರಾಗಿ ಜೆಸಿ ಅಮೃತ್ ಚಟ್ರಿಕಿ, ಕಾರ್ಯದರ್ಶಿಯಾಗಿ ಜೆಸಿ ನವೀನ್ ಎಲಿಗಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜೆಸಿ ಅಶೋಕ ಉಪ್ಪಾರ ತಿಳಿಸಿದ್ದಾರೆ.
ಪಟ್ಟಣದ ಬೆಸ್ಟ್ ಟ್ಯೂಟರಿಯಲ್ಸ್ನಲ್ಲಿ ಜೆಸಿಐ ಸನ್‌ಫ್ಲವರ್ ಘಟಕದಿಂದ ಹಮ್ಮಿಕೊಂಡಿದ್ದ 2023ನೇ ವರ್ಷದ ನೂತನ ಆಡಳಿತ ಮಂಡಳಿಗೆ ಚುನಾವಣೆ ನೇತೃತ್ವ ವಹಿಸಿ ಮಂಗಳವಾರ ಮಾತನಾಡಿದರು, ಸನ್‌ಫ್ಲವರ್ ಘಟಕದ 29ನೇ ಅಧ್ಯಕ್ಷರಾಗಿ ಅಮೃತ್ ಚಟ್ರಿಕಿ, ಕಾರ್ಯದರ್ಶಿಯಾಗಿ ನವೀನ್ ಎಲಿಗಾರ ತಲಾ ಒಂದು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.
ಈ ವೇಳೆ ಘಟಕದ ವಲಯ24 ರ ಪೂರ್ವಾಧ್ಯಕ್ಷರಾದ ಕರಿಬಸವರಾಜ ಬಾದಾಮಿ, ನಿಕಟಪೂರ್ವ ಅಧ್ಯಕ್ಷ ಅಕ್ಕಿ ಪ್ರಸನ್ನ ಕುಮಾರ, ಪೂರ್ವಾಧ್ಯಕ್ಷರಾದ ಜೆಸಿ ನಾಗರಾಜ ಸೋಡಾದ್, ನಟರಾಜ ಬದಾಮಿ ಬ್ರಹ್ಮಾನಂದ ಗುತ್ತಲ್, ಸದಸ್ಯರಾದ ಯು.ಕೆ.ಕೊಟ್ರೇಶ್, ಶಿವಪ್ರಕಾಶ್ ಝಳಕಿ, ಕೆ.ರುದ್ರೇಶ್, ಆನಂದ ಎತ್ತಿನಮನಿ, ದಿವಾಕರ ಗೌಡ ಇದ್ದರು.



More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್, ಕೋಟ್ಯಂತರ ರೂಪಾಯಿ ರಾಜಸ್ವ ಸಂಗ್ರಹ : ಅಬಕಾರಿ ನಿರೀಕ್ಷಕಿ ಎಸ್.ಬಿ.ಮಮತಾ