February 27, 2026

Hampi times

Kannada News Portal from Vijayanagara

ಹಿಂದು ಧರ್ಮಕ್ಕೆ ಘರ್ ವಾಪಸ್ : ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದ ಕುಟುಂಬ

https://youtu.be/NHc6OMSu0K4?si=SI_K4goOPEgwo6h2

 

ಹಂಪಿಟೈಮ್ಸ್ ಕೊಪ್ಪಳ:
ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಂಡಿದ್ದ ಕಾರಟಗಿ ನಗರದ ಶಂಕರ , ಜಂಬಕ್ಕ ಮತ್ತು ಅವರ ಕುಟುಂಬ ಸದಸ್ಯರು ಬುಧವಾರ ಕಾರಟಗಿ ತಾಲೂಕಿನ ರಾಮನಗರದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಾನದಲ್ಲಿ ಕಾರಟಗಿಯ ಗುರುಗಳಾದ ಶ್ರೀ ಮರುಳಸಿದ್ದೇಶ್ವರ ಹಿರೇಮಠ ಸ್ವಾಮಿಗಳ  ನೇತೃತ್ವದಲ್ಲಿ ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಮುಖರ ನೇತೃತ್ವದಲ್ಲಿ ಮರಳಿ ಹಿಂದೂ ಧರ್ಮಕ್ಕೆ ಘರ್ ವಾಪಸಿಯಾಗಿದ್ದಾರೆ.
 ಈ ಮೂಲಕ ಅವರು ಈ ಹಿಂದೆ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಮತ್ತೆ ಈ ತಪ್ಪನ್ನು ಮಾಡುವುದಿಲ್ಲ ಎಂದು ಹಿಂದೂ ಧರ್ಮಕ್ಕೆ ಘರ್ ವಾಪಸಿ ಆಗಿದ್ದಾರೆ. ಮುಂದಿನ ದಿನಗಳಿಂದ ಹಿಂದೂ ಧರ್ಮ ಆರಾಧನೆ ಪೂಜೆ ಆಚರಣೆಯನ್ನು ಮಾಡುತ್ತಾರೆಂದು ದೇವಿಯ ಸನಿದಾನದಲ್ಲಿ ಪ್ರಮಾಣ ಮಾಡಿದ್ದಾರೆ.  ಈ ಸಂದರ್ಭದಲ್ಲಿ ಬುಡ್ಗ ಜಂಗಮ ಸಮಾಜದ ರಾಜ್ಯ ಅಧ್ಯಕ್ಷ ಸಣ್ಣಮಾರೆಪ್ಪ ಹರಪನಹಳ್ಳಿ, ಧರ್ಮ ಜಾಗರಣದ ಮಧು ಗಡ್ಡೆ ಹೊಸಪೇಟೆ, ಪವನ ರಾಮನಗರ, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಎನ್ ಹನುಮಂತ ರೆಡ್ಡಿ ಗುಡೂರು, ರವಿ ದ್ಯಾಮಗೌಡರು, ರಮೇಶ ಹುಳ್ಕಿಹಾಳ, ಸೋಮನಾಥ, ಶರಣಗೌಡ ರಾಮನಗರ ಸೇರಿ ಮತ್ತಿತ್ತರರು ಇದ್ದರು.
Please follow and like us:

 

 

 

 

 

 

Translate »
[t4b-ticker]
error: Content is protected !!