https://youtu.be/NHc6OMSu0K4?si=SI_K4goOPEgwo6h2

ವೃತ್ತಿ ಕಲಾವಿದರಾಗುವುದಕ್ಕಿಂತ ಹವ್ಯಾಸಿ ಕಲಾವಿದರಾಗಬೇಕು
HAMPI TIMES
ಹೊಸಪೇಟೆ: ಹುಟ್ಟುವ ಮಗು ಹೆಣ್ಣು ಅಥವಾ ಗಂಡು ಆಗದೇ, ತೃತೀಯ ಲಿಂಗವಾದರೆ ಆ ಮಗುವನ್ನು ಅನಾಥವಾಗಿಸಬೇಡಿ. ಯಾರೂ ತೃತೀಯ ಲಿಂಗವಾಗಿ ಜನಿಸಬೇಕೆಂದು ಬಯಸಿರುದಿಲ್ಲ. ಪ್ರಕೃತಿ ಕೊಡುಗೆ ಎಂದು ಭಾವಿಸಿ ಮಗುವಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕು ಎಂದು ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಕಣ್ಣೀರಿಟ್ಟರು.

ನಗರದ ಶ್ರೀಮತಿ ಉಗಮದೇವಿ ಭವರ್‌ಲಾಲ್ ನಾಹರ್ ಥಿಯೋಸಾಫಿಕಲ್ ಮಹಿಳಾ ಕಾಲೇಜ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಿಂತನ ಭಾರತಿ ವೃಂದ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ತಂದೆ, ತಾಯಿ ಹಾಗೂ ಗುರುಗಳನ್ನು ಗೌರವದಿಂದ ಕಾಣಬೇಕು. ಗುರುವಿನ ರಕ್ಷಣೆ ಇದ್ದರೆ ಹರ ಮುನಿದರೂ ಗುರು ಕಾಯುವನು. ಪ್ರತಿ ವಿದ್ಯಾರ್ಥಿಯಲ್ಲೂ ಕಲೆ ಇರುತ್ತದೆ. ವೃತ್ತಿ ಕಲಾವಿದರಾಗುವದಕ್ಕಿಂತ ಹವ್ಯಾಸಿ ಕಲಾವಿದರಾಗಬೇಕು. ಕರೋನಾ ಸಂದರ್ಭದಲ್ಲಿ ವೃತ್ತಿ ಕಲಾವಿದರ ಸಂಕಷ್ಟ ಕೇಳುವವರಿಲ್ಲದಂತಾಗಿತ್ತು. ಕಲೆ ಎಂದಾಕ್ಷಣ ಗೆಜ್ಜೆ ಕಟ್ಟಿ ಕುಣಿಯುದೊಂದೆ ಅಲ್ಲ. ಬರವಣಿಗೆ, ನಿರೂಪಣೆ, ಹಾಡುಗಾರಿಕೆ, ಮಾತುಗಾರಿಕೆ, ಬ್ಯೂಟಿಷಿಯನ್ ಸೇರಿದಂತೆ ಅನೇಕ ಕೌಶಲ್ಯದ ಕಲೆಗಳನ್ನು ಬೆಳೆಸಿಕೊಳ್ಳಬೇಕು. ನಾವು ಮಾಡುವ ಕಾಯಕ ಸೇವೆಗಳಿಂದ ಡಾಕ್ಟರೇಟ್, ಪದವಿ, ಪ್ರಶಸ್ತಿಗಳು ದೊರೆಯಬೇಕು. ಪದವಿ ಪ್ರಶಸ್ತಿಗಳ ಬೆನ್ನತ್ತಬಾರದು. ಸೇವೆಯಿಂದ ದೊರೆಯುವ ಪದವಿ, ಪ್ರಶಸ್ತಿ, ಸನ್ಮಾನಗಳು ಖುಷಿ ಕೊಡುತ್ತವೆ. ರಾಜ್ಯದ 9 ವಿಶ್ವವಿದ್ಯಾಲಯಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ ನನ್ನ ಕುರಿತು ಪಠ್ಯಕ್ರಮ ಇರುವುದು ನನ್ನ ಕಲೆಗೆ ಸಂದ ಗೌರವವಾಗಿದೆ ಎಂದರು.


ಕಾಲೇಜಿನ ಕಾರ್ಯದರ್ಶಿ ಅಶೋಕ ಜೀರೆ, ಸದಸ್ಯ ಶರಣಪ್ಪ, ದೈಹಿಕ ಶಿಕ್ಷಕಿ ದಿನ ಮಣಿ, ಪ್ರಾಂಶುಪಾಲೆ ಸಂಗೀತ ಗಾವ್ಕರ್ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.




More Stories
ಎಲ್ಲರಿಗೂ ಅಂಬೇಡ್ಕರ್ ಬದುಕು ಸ್ಫೂರ್ತಿದಾಯಕ
ಹರಪನಹಳ್ಳಿಯಲ್ಲಿ ಉದ್ಯೋಗ ಖಾತ್ರಿ ಚುರುಕು
ಇಸ್ರೋ ಗಗನ್ಯಾನ್ ಪರೀಕ್ಷೆ ಯಶಸ್ವಿ