https://youtu.be/NHc6OMSu0K4?si=SI_K4goOPEgwo6h2

- HAMPI TIMES
- ಹೊಸಪೇಟೆ:
- ರಾಜ್ಯದಲ್ಲಿ ಚುನಾವಣಾ ಕಾರ್ಮೋಡಗಳು ಕಾಣ್ತಾ ಇವೆ. ರಾಜ್ಯದ ಶಕ್ತಿಕೇಂದ್ರ ವಿಧಾನಸೌಧವನ್ನು ಸಿಎಂ, ಮಂತ್ರಿಮಂಡಲ ಮರೆತು, ಮುಂಬರುವ ಚುನಾವಣೆ ಗೆಲ್ಲಲು ವಾಮಮಾರ್ಗಗಳನ್ನು ಅನುಸರಿಸುತ್ತಿದೆ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಹೇಳಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು.

ಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂಬುದು ಗೋಡಬರಹದಷ್ಟೆ ಸ್ಪಷ್ಟ. ಬಿಜೆಪಿ ವಿರೋಧ ಅಲೆ ಇರುವುದರಿಂದ ಜನರ ಗಮನ ಬೇರೆಡೆ ಸೆಳೆಯಲು ವಾಮಮಾರ್ಗ ಅನುಸರಿಸುತ್ತಿದ್ದಾರೆ.
ಅಧಿಕಾರಿಗಳನ್ನು, ಚಿಲುಮೆ ಸಂಘಟನೆಯನ್ನು ದುರಪಯೋಗಪಡಿಸಿಕೊಂಡು 224 ಕ್ಷೇತ್ರಗಳಲ್ಲಿ ಎಸ್ಸಿ ಎಸ್ಡಿ ಅಲ್ಪಸಂಖ್ಯಾತರ, ಹಿಂದುಳಿದವರನ್ನೂ ಸಹ ಮತಪಟ್ಟಿಯಿಂದ ಕೈಬಿಡಲಾಗಿದೆ. ಬಿಜೆಪಿಗೆ ಮತಹಾಕುವವರನ್ನು ಸೇರ್ಪಡೆ ಮಾಡುತ್ತಿದ್ದಾರೆ.
ಮತ ಪಟ್ಟಿ ಕೈಬಿಟ್ಟ ಕುರಿತು ಐಎಎಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಸಿಎಂ ಕ್ಷಮೆಯಾಚಿಸುತ್ತಾರೆಂದು ಭಾವಿಸಿದ್ದೇನೆ. ಕೊಟ್ಟ ಮಾತಿನಂತೆ ನಡೆಯದ ಬಿಜೆಪಿ ಜನರ ವಿಶ್ವಾಸವನ್ನು ಕಳೆದುಕೊಂಡಿದೆ.
ಶ್ರೀರಾಮನ ಜಪ ಮಾಡುವ ಬಿಜೆಪಿ ರಾಮನಂತೆ ನಡೆದುಕೊಂಡಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಉದ್ಯೋಗ ಸೃಷ್ಟಿ ಬದಲಿಗೆ ೧೩ ಕೋಟಿ ಉದ್ಯೋಗ ನಷ್ಟವಾಗಿದೆ. ಕಾಮಗಾರಿಗಳಿಗೆ ೪೦ ಪರ್ಸೆಂಟ್ ಕಿಕ್ ಬ್ಯಾಕ್ ನೀಡಬೇಕಾದ ಪರಿಸ್ತಿತಿ ಇದೆ. ವಿಜಯನಗರ ಜಿಲ್ಲೆಯಲ್ಲೂ ಅನುಮೋದನೆ ಇಲ್ಲದೇ ಧ್ವಜಸ್ತಂಭಗಳ ಕಾಮಗಾರಿ ನಡೆದಿವೆ. ಬಿಜೆಪಿ ಸರ್ಕಾದಲ್ಲಿ ಅಕ್ರಮಗಳಿಗೆ ಕೊನೆ ಇಲ್ಲದಂತಾಗಿದೆ. ಶ್ರೀರಾಮನ ಮಂದಿರ ಕಟ್ಟಿದಾಕ್ಷಣ ರಾಮರಾಜ್ಯ ನಿರ್ಮಾಣ ಎಂಬುದು ಸಾಧ್ಯವಿಲ್ಲ. ರಾಮನ ಆದರ್ಶಗಳನ್ನು ಜಾರಿಗೆ ತಂದಾಗ ಮಾತ್ರ ರಾಮರಾಜ್ಯ ಸಾಧ್ಯ.
ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಹಣ ಬಿಡುಗಡೆ ಅಂತಾರೆ, ಆದರೆ ಈವರೆಗೂ ಎಷ್ಟು ಖರ್ಚು ಮಾಡಿದ್ದಾರೆ? ಆಂಧ್ರ, ಮಹಾರಾಷ್ಟ್ರ, ನಾಸಿಕ್ನಲ್ಲಿ ಹನುಮ ಜನ್ಮಸ್ಥಳ ನಮ್ಮದು ಅಂತಾರೆ. ರಾಜ್ಯದ ಸಿಎಂ ಏಕೆ ನಮ್ಮದು ಎಂದು ಘೋಷಣೆ ಮಾಡ್ತಿಲ್ಲ ? ಅಂಜನಾದ್ರಿಯ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಧಾರ್ಮಿಕ ಭಾವನೆಗಳ ಜೊತೆ ಬಿಜೆಪಿ ಚೆಲ್ಲಾಟವಾಡ್ತಿದ್ದಾರೆ.

ತುಂಗಭದ್ರ ಜಲಾಶಯ ಪರ್ಯಾಯ ಡ್ಯಾಂ ನಿರ್ಮಾಕ್ಕೂ ನಯಾಪೈಸ ಬಿಡುಗಡಾಡಿಲ್ಲ. ಸೋಲಿನ ಸುಳಿವು ಸಿಕ್ಕಾಗ ನಾಟಕ ಆಡುತ್ತಿದೆ ಬಿಜೆಪಿ.
ಪಿಎಂ ಮನೆಯ ಮಹಿಳೆಯಗೆ ರಕ್ಷಣೆ ನೀಡಲಾಗಿಲ್ಲ. ವೀರಾವೇಶದಿಂದ ಮಾತನಾಡುವ ಸಚಿವ ಶ್ರೀರಾಮಲು ಬಳ್ಳಾರಿ ಸಮಾವೇಶದಲ್ಲಿ
ಬಳೆ ತೊಟ್ಟೊಲ್ಲ ಎಂದು ಹೇಳುವ ಮೂಲಕ ಭಾರತೀಯ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಸ್ತ್ರೀ ಸಂಕುಲಕ್ಕೆ ಅಗೌರವವಾಗಿ ಮಾತನಾಡಿದರೂ, ಬಿಜೆಪಿ ಅವರ ವಿರುದ್ದ ಕ್ರಮವಹಿಸದೆ ಮೌನವಹಿಸಿರುವುದನ್ಮು ಬಿಜೆಪಿ ಸಂಸ್ಕೃತಿ ಏನೆಂಬುದು ಬಯಲಾಗಿದೆ.
ಶಾಲಾಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ ಬಿಜೆಪಿ ಸರ್ಕಾರ ರದ್ದುಗೊಳಿಸಿವ ಮೂಲಕ ಬಡಮಕ್ಕಳನ್ನು ಶಿಕ್ಷಣದಿಂದ ವಂಚಿಸಲಾಗುತ್ತಿದೆ.
ತರಾತುರಿಯಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಜಾರಿ ಘೋಷಣೆಯಾಗಿದೆ, ಇದೂವರೆಗೂ ಸರ್ಕಾದ ಆದೇಶ ಹೊರಬಿದ್ದಿಲ್ಲ. ಬಿಜೆಪಿ ವಾಮಮಾರ್ಗಗಳನ್ಮು ಬಿಟ್ಟು, ಕೊಟ್ಟ ಮಾತಂತೆ ನಡೆದು, ಶ್ರೀರಾಮನ ಆದರ್ಶ ಮೆರೆಯಲಿ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ ಮುಖಂಡರಾದ ಗುಜ್ಜಲ್ ನಾಗರಾಜ,ರಾಜಶೇಖರ ಹಿಟ್ನಾಳ್,
ಬಾಬು, ಶಿವಮೂರ್ತಿ, ವೀರಸ್ವಾಮಿ, ವಿನಾಯಕ ಶೆಟ್ಟರ್, ನಿಂಬಗಲ್ ರಾಮಕೃಷ್ಣ ಇತರರು ಇದ್ದರು



More Stories
ಜಗ ಮೆಚ್ಚಿದ ಪೊಲೀಸ್
ಸಮಾಜ ಸೇವೆಯೇ ನಿಜವಾದ ಭಕ್ತಿ: ಪ್ರಧಾನಿ ಮೋದಿ
ಎಲ್ಲರಿಗೂ ಅಂಬೇಡ್ಕರ್ ಬದುಕು ಸ್ಫೂರ್ತಿದಾಯಕ