https://youtu.be/NHc6OMSu0K4?si=SI_K4goOPEgwo6h2

HAMPI TIMES
ಹೊಸಪೇಟೆ: ಪೊಲೀಸ್ ಕ್ಯಾಪ್ ಬದಲಿಗೆ ಹೆಲ್ಮೇಟ್ , ಕಿತ್ತೋದ ಕ್ಯಾಪ್ ಹಾಕಿಕೊಂಡು ಅಶಿಸ್ತು ಪ್ರದರ್ಶಿಸಿದ ಪೊಲೀಸರನ್ನು ಸ್ಥಳದಲ್ಲೆ ಸಸ್ಪೆಂಡ್ ಮಾಡುವುದಾಗಿ ವಿಜಯನಗರ ಎಸ್ ಪಿ ಬಿ.ಎಲ್. ಶ್ರೀಹರಿಬಾಬು ಎಚ್ಚರಿಕೆ ನೀಡಿದರು.


ನಗರದ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಗೆ ಬಂದೋಬಸ್ತ್ ಒದಗಿಸುವ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿ, ಸಮವಸ್ತ್ರ ಶಿಸ್ತು ಪಾಲಿಸದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಇನ್ಮುಂದೆ ಸಮವಸ್ತ್ರದಲ್ಲಿ ಅಶಿಸ್ತು ಕಂಡುಬಂದರೆ ಕೂಡಲೆ ಸ್ಥಳದಲ್ಲೆ ಸಸ್ಪೆಂಡ್ ಮಾಡಲಾಗುವುದು. ಹೆಡ್ವೇರ್ ಅಂದಾಕ್ಷಣ ಕಿತ್ತೋದ ಟೋಪಿ, ಹೆಲ್ಮೇಟ್ ಹಾಕ್ಕೊಂಡು ಬರುವುದಲ್ಲ. ಪೊಲೀಸ್ ಇಲಾಖೆಯ ನಿಯಮ ಪಾಲನೆಯ ಜೊತೆ ಶಿಸ್ತು ರೂಢಿಸಿಕೊಳ್ಳಬೇಕು. ತಪ್ಪಿದರೆ ಅಮಾನತ್ತಿಗೊಳಗಾಗಬೇಕಾಗುತ್ತದೆ. ನಿತ್ಯ ಸಿಬ್ಬಂದಿಗಳ ಸಮವಸ್ತ್ರ ಶಿಸ್ತು ಪಾಲನೆ ಮಾಡಿದ್ದಾರೋ ಇಲ್ಲವೇ ಎಂಬುದನ್ನು ಮೇಲಾಧಿಕಾರಿಗಳು ಗಮನಿಸಿ ಡ್ಯೂಟಿಗೆ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ವಡಕರಾಯ ದೇವಸ್ಥಾನದಿಂದ ಹನುಮಮಾಲಾಧಾರಿಗಳಿಂದ ನಡೆಯುವ ಸಂಕೀರ್ತನಾ ಯಾತ್ರೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಹನುಮ ಭಕ್ತರು ಪಾಲ್ಗೊಳ್ಳಲಿದ್ದು, ಸೂಕ್ತ ಬಂದೋಬಸ್ತ್, ವಾಹನ ಸಂಚಾರಕ್ಕೂ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು. ಬಂದೋಬಸ್ತ್ ಗಾಗಿ 6 ಡಿವೈಎಸ್ಪಿ, 13 ಸಬ್ ಇನ್ಸ್ ಪೆಕ್ಟರ್, 30 ಎಎಸ್ ಐ ಜೊತೆಗೆ 230 ಪೊಲೀಸ್ ಪೇದೆಗಳನ್ನು, ಒಂದು ಕೆಎಸ್ ಆರ್ ಪಿ ತುಕಡಿ ನೇಮಕ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆಗೆ ಆಧ್ಯತೆ ನೀಡಬೇಕು ಎಂದರು. ಡಿವೈಎಸ್ಪಿ ಸೇರಿದಂತೆ ಅಧಿಕಾರಿಗಳು ಇದ್ದರು.





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ