https://youtu.be/NHc6OMSu0K4?si=SI_K4goOPEgwo6h2
ಬಡ ವಿದ್ಯಾರ್ಥಿನಿಯ ಎಂಬಿಬಿಎಸ್ ಗೆ ಆಯ್ಕೆ ಕನಸು ನನಸು

HAMPI TIMES
ಕೊಪ್ಪಳ: ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಬಡತನ ಪರಿಸ್ಥಿತಿಯಲ್ಲೇ ಉತ್ತಮ ಶಿಕ್ಷಣ ಪಡೆದು, ಕನಸಿನ ವೈದ್ಯಕೀಯ ಶಿಕ್ಷಣದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ.
ಇಲ್ಲಿಯ ಗಣೇಶ್ ನಗರದಲ್ಲಿ ವಾಸವಾಗಿರುವವ ಸುಚಿತ್ರಾ. ವಿ. ಎಂಬ ವಿದ್ಯಾರ್ಥಿನಿಯೆ ಎಂ.ಬಿ.ಬಿ.ಎಸ್ ಗೆ ಕೋರ್ಸ್ ಗೆ ಉಚಿತವಾಗಿ ಆಯ್ಕೆಯಾಗಿದ್ದಾರೆ.

ಇವರ ತಂದೆ ಮೂಲತಃ ಕಿರಾಣಿ ಅಂಗಡಿ ನಡೆಸಿಕೊಂಡು ಮಕ್ಕಳನ್ನು ಉನ್ನತ ಹಂತದ ಶಿಕ್ಷಣ ಕೊಡಿಸುವ ಬಯಕೆ ಈಡೇರಿಸಿಕೊಂಡಿದ್ದಾರೆ.
ನಗರದ ಬಿ.ಎನ್.ಆರ್.ಕೆ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಮತ್ತು ಕೊಪ್ಪಳದ ನ್ಯೂ ಆಕ್ಸ್ಫರ್ಡ್ ಸ್ಕೂಲ್ ಮತ್ತು ಶಿವಪುರದ ಬೋರ್ಕಾ ಸ್ಕೂಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದಾರೆ.
ತಂದೆ ವಿ. ನಾಗರಾಜ್ ಹಾಗೂ ತಾಯಿ ವಿ. ಲತಾ ಅವರ ಮಡಿಲಲ್ಲಿ ಬೆಳೆದ ಈ ಹುಡುಗಿ ಇಂದು ಅವರ ತಂದೆ- ತಾಯಿಗೆ ಅಚ್ಚು ಮೆಚ್ಚಿನ ಮಗಳಾಗಿ ಹೊರಹೊಮ್ಮಿದ್ದಾಳೆ.
ತಂದೆಯ ಕಿರಾಣಿ ಅಂಗಡಿ ವ್ಯಾಪಾರದಿಂದ ಬರುವ ಅಲ್ಪ ಆದಾಯದಲ್ಲೆ ಅಚ್ಚುಕಟ್ಟಾಗಿ ಅವಶ್ಯವಿರುವ ಖರ್ಚಿನೊಂದಿಗೆ ಪದವಿ ಪೂರ್ವ ಶಿಕ್ಷಣ ಮುಗಿಸಿರುವ ಇವರು ಇಂದಿಗೂ ಎಲೆಮರಿ ಕಾಯಿಯಂತೆ ಬದುಕು ಸಾಗಿಸುತ್ತಿದ್ದಾರೆ.
ಇಬ್ಬರು ಹೆಣ್ಣು ಮತ್ತು ಓರ್ವ ಗಂಡು ಮಕ್ಕಳನ್ನು ಹೊಂದಿರುವ ಬಡ ಹಿಂದುಳಿದ ಕುಟುಂಬದ ಹಿರಿಯ ಮಗಳು ಸುಚಿತ್ರಾ ಅವರು ಕಷ್ಟವನ್ನೆಲ್ಲ ಮಟ್ಟಿ ನಿಂತು ನಿರಂತರ ಪ್ರಯತ್ನದಿಂದ ಇಂದು ಸಾಧನೆಯ ಹಾದಿ ತುಳಿದು ತನ್ನ ತಂಗಿ-ತಮ್ಮಂದಿರಿಗೆ ಅಷ್ಟೆ ಅಲ್ಲದೆ ಜಿಲ್ಲೆಯ ಯುವ ಜನತೆಗೆ ಪ್ರೇರಣೆ ಆಗಿದ್ದಾಳೆ.
ರಾಷ್ಟಿçಯ ಅರ್ಹತೆ ಮತ್ತು ಪ್ರವೇಶ ಪರಿಕ್ಷೆಯ ಎಂ.ಬಿ.ಬಿ.ಎಸ್ ವಿಭಾಗದಲ್ಲಿ ಇಡಿ ಭಾರತದ ರ‍್ಯಾಂಕಿAಗ್ ಪಟ್ಟಿಯಲ್ಲಿ 1.16.936 ನೇ ಸ್ಥಾನ ಪಡೆದಿರುವುದ ಹೆಮ್ಮೆಯ ಸಂಗತಿಯಾಗಿದ್ದು, ಸಧ್ಯ ಇವರಿಗೆ ಸರ್ಕಾರಿ ಕೋಟದಡಿಯಲ್ಲಿ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.




More Stories
ಅಂಧ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಸ್ಟೀಲ್ ಬಾಟಲಿ ವಿತರಣೆ : ಜೆಸಿಐ ಅಧ್ಯಕ್ಷೆ ರೇಖಾಶಿವರಾಜ
ಸುಲಭ ಕಂತುಗಳಲ್ಲಿ ನಿವೇಶನ ಲಭ್ಯ: ಶಶಿಧರ್ ಕೊರವಿ
ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ: ಸಿಎಂ ಡಿ.ಕೆ.ಶಿವಕುಮಾರ್