https://youtu.be/NHc6OMSu0K4?si=SI_K4goOPEgwo6h2


ಹಂಪಿ ಟೈಮ್ಸ್ ಹೊಸಪೇಟೆ
ನಗರದ ವಿವೇಕಾನಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1993-94ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳು ಭಾನುವಾ ಪ್ರಿಯದರ್ಶಿನಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ತಮ್ಮ ಸಾಧನೆಗಳನ್ನು ಹಂಚಿಕೊಂಡು ಗುರುಗಳಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಬಡಮಕ್ಕಳ ಶಿಕ್ಷಣ ಕೇಂದ್ರವಾಗಿದ್ದ ವಿವೇಕಾನಂದ ಶಾಲೆಯಲ್ಲಿ ಅಂದು ಕಲಿತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ನೆಲೆಸಿ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ 40 ವರ್ಷ ದಾಟಿದ ಮಧ್ಯ ವಯಸ್ಕರಾಗಿದ್ದರೂ ತಮ್ಮ ಬಾಲ್ಯದ ಘಟನೆಗಳನ್ನು, ನೆನಪುಗಳನ್ನು ಮೆಲುಕು ಹಾಕಿ ಹರ್ಷ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.


ಸ್ನೇಹ ಸಮ್ಮಿಲನದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಪರಿಚಯಿಸಿಕೊಳ್ಳುವುದರೊಂದಿಗೆ ಪ್ರಸ್ತುತ ಮಾಡುತ್ತಿರುವ ಕೆಲಸಗಳು ಮತ್ತು ವೈಯಕ್ತಿಕ ಸಾಧನೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಸಾಧನೆಗಳನ್ನು ಕೇಳಿದ ಅಂದಿನ ಶಿಕ್ಷಕರು ಸಂತೋಷಪಟ್ಟು, ಅವರ ಕಣ್ಣಾಲೆಗಳು ತುಂಬಿ ಬಂದಿದ್ದವು.
ಕಾರ್ಯಕ್ರಮದ ಆರಂಭದಲ್ಲಿ, ಮಡಿದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅಂದಿನ ಶಿಕ್ಷಕರಾಗಿದ್ದ ಹಾಗೂ ಇಂದು ನಿವೃತ್ತರಾಗಿರುವ ಶ್ರೀಮತಿ ದೊಡ್ಡ ಗಿರಿಜಮ್ಮ, ಶ್ರೀಮತಿ ಸಣ್ಣ ಗಿರಿಜಮ್ಮ, ಶ್ರೀಮತಿ ಶಾಂತ, ಶ್ರೀಮತಿ ರೇವತಿ, ಶ್ರೀಮತಿ ಭಾಗ್ಯ, ಶ್ರೀಮತಿ ಸರೋಜ, ಶ್ರೀಮತಿ ನಾಗರತ್ನ, ಶ್ರೀಮತಿ ಕೋಮಲ, ಶ್ರೀಮತಿ ಹನುಮಕ್ಕ, ಶ್ರೀಮತಿ ಹನುಮಂತಮ್ಮ, ಶ್ರೀ ದೊಡ್ಡಮನಿ, ಶ್ರೀ ಮಳೆಸ್ವಾಮಿ, ಶ್ರೀ ಗಾದಿಲಿಂಗಪ್ಪ ಮತ್ತು ಶ್ರೀ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಈ ವಿಶೇಷ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ರೂವಾರಿಗಳಾದ ತಾಹೀರ್, ಸಿದ್ದೇಶ್, ವಿಜಯಲಕ್ಷ್ಮಿ, ಭವಾನಿ ಮತ್ತು ಷಣ್ಮುಕ ಸೇರಿದಂತೆ ಅನೇಕರನ್ನು ಗೌರವಿಸಲಾಯಿತು.




More Stories
ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಫೈನಲ್ಗೆ ಭಾರತ ಮಹಿಳಾ ತಂಡದ ಪ್ರವೇಶ
ಪೊಲೀಸರ ಸೇವೆ ಅವಿಸ್ಮರಣೀಯ: ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ
ಜಗದ್ಗುರು ಬಸವಲಿಂಗ ಶ್ರೀಗಳಿಗೆ 32ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮ