https://youtu.be/NHc6OMSu0K4?si=SI_K4goOPEgwo6h2
ಗಮನಸೆಳೆದ ನಾಣಿಕೇರಿ ಉತ್ಸವ | ವಿಜೇತರಿಗೆ ಬಹುಮಾನ ವಿತರಣೆ
ಹಂಪಿ ಟೈಮ್ಸ್ ಹೊಸಪೇಟೆ :
ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗಲು ರಾಜಕೀಯವನ್ನು ಹೊರಗಿಡಬೇಕಿದೆ ಎಂದು ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಪ್ರಾಯಪಟ್ಟರು.
ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಾಣಿಕೇರಿ ಉತ್ಸವದ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆಗಳನ್ನು ರಾಜಕಾರಣದ ದೃಷ್ಠಿಕೋನದಿಂದ ನೋಡದೆ ಪಕ್ಷಾತೀತವಾಗಿ ಧರ್ಮಾತೀತವಾಗಿ ನೆರವು ನೀಡಬೇಕು. ಪ್ರತಿಭಾವಂತ ಯುವಕರು ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ನಾರಾಯಣದೇವರ ಕೆರೆಗೆ ವಿಜಯನಗರ ಸಾಮ್ರಾಜ್ಯದ ಇತಿಹಾಸವಿದೆ. ಗ್ರಾಮದ ಕುಸ್ತಿಪಟುಗಳು ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿಯೂ ಹೆಸರಾಗಿರುವುದು ಹೆಮ್ಮೆಯಸಂಗತಿಯಾಗಿದೆ. ಕಳೆದ ಬಾರಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ನೀಡಲಾದ ಮಾದರಿಯಲ್ಲೆ ಈ ಸಾಲಿನಲ್ಲಿಯೂ ಪಿಯು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ತರಬೇತಿ ಮತ್ತು ಪುಸ್ತಕ ನೀಡಲಾಗುವುದು ಎಂದರು.
ಪಟ್ಟಣಪಂಚಾಯಿತಿ ಅಧ್ಯಕ್ಷ ಹಾದಿಮನಿ ಹುಸೇನ್‌ಬಾಷಾ, ಉಪಾಧ್ಯಕ್ಷೆ ರೋಗಾಣಿ ಲಕ್ಷ್ಮೀ, ಜಿ.ಪಂ.ಮಾಜಿ ಸದಸ್ಯ ಪರಶುರಾಮ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಮಖಂಡರಾದ ಚಿದ್ರಿಸತೀಶ್, ನಿವೃತ್ತ ಆರ್‌ಟಿಒ ಪರಮೇಶ್ವರಪ್ಪ, ಗ್ರಾ.ಪಂ.ಸದಸ್ಯ ಜಿ.ಸೋಮಣ್ಣ, ನಾಣಿಕೆರಿ ಯುವಸೇನಾ ಟ್ರಸ್ಟ್ನ ಅಧ್ಯಕ್ಷ ರಹಿಮಾನ್ ಆನೆಮಾವುತ, ರಘುವೀರ ನಾಯಕ್, ಅಂಕಲೇಶ, ಮಲ್ಡಿ ವಿಷ್ಣು, ವಿನಯ, ಹುಲುಗಪ್ಪ, ಮೆಹಬೂಬ್ ಬಾಷಾ, ಆಕಾಶ್ ಪೂಜಾರ್, ಬಿ.ಅಂಜಿನಿ ಇತರರಿದ್ದರು. ರಂಗಭೂಮಿ ಕಲಾವಿದೆ ಡಾ.ನಾಗರತ್ನಮ್ಮ ನಿರ್ಣಾಯಕರಾಗಿದ್ದರು. ಇದೇವೇಳೆ ನಾನಾ ಜಾನಪದ ನೃತ್ಯ, ಭರನಾಟ್ಯ ಸೇರಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ಪೂಜಾರ್ ರಾಮಚಂದ್ರ, ರಘು ನಿರ್ವಹಿಸಿದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ